ಗುರುವಾರ, ಏಪ್ರಿಲ್ 25, 2019

Tomato sasive recipe in kannada | ಟೊಮೇಟೊ ಸಾಸಿವೆ ಮಾಡುವ ವಿಧಾನ

Tomato sasive recipe in kannada

Tomato sasive recipe in kannada | ಟೊಮೇಟೊ ಸಾಸಿವೆ ಮಾಡುವ ವಿಧಾನ

ಟೊಮೇಟೊ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಗಾತ್ರದ ಟೊಮೇಟೊ ಹಣ್ಣು 
  2. 1/4 - 1/2 ಕಪ್ ಮೊಸರು
  3. 2 ಒಣಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ 
  5. 1/2 ಟೀಸ್ಪೂನ್ ಸಾಸಿವೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 4 -5 ಕರಿಬೇವು
  4. ಸ್ವಲ್ಪ ಉದ್ದಿನಬೇಳೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಟೊಮೇಟೊ ಸಾಸಿವೆ ಮಾಡುವ ವಿಧಾನ:

  1. ಸಣ್ಣಗೆ ಕತ್ತರಿಸಿದ ಟೊಮ್ಯಾಟೊವನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ.
  2. ಅದಕ್ಕೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಹಿಸುಕಿ ಕಲಸಿ. 
  3. ಮೊಸರನ್ನು ಸೇರಿಸಿ, ಮಗುಚಿ ಪಕ್ಕಕ್ಕಿಡಿ.
  4. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  5. ಅರೆದ ತೆಂಗಿನಕಾಯಿ-ಮೆಣಸು-ಸಾಸಿವೆಯನ್ನು ಹಿಸುಕಿದ ಟೊಮೇಟೊ-ಮೊಸರು ಮಿಶ್ರಣಕ್ಕೆ ಸೇರಿಸಿ. ಚೆನ್ನಗಿ ಕಲಸಿ.
  6. ಎಣ್ಣೆ, ಮೆಣಸಿನಕಾಯಿ, ಕರಿಬೇವು, ಉದ್ದಿನಬೇಳೆ ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಮಂಗಳವಾರ, ಏಪ್ರಿಲ್ 23, 2019

Hesaru kalu dose recipe in Kannada | ಹೆಸರು ಕಾಳು ದೋಸೆ ಮಾಡುವ ವಿಧಾನ

Hesaru kalu dose recipe in Kannada

Hesaru kalu dose recipe in Kannada | ಹೆಸರು ಕಾಳು ದೋಸೆ ಮಾಡುವ ವಿಧಾನ

ಹೆಸರುಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೆಸರು ಕಾಳು
  2.  1/4 ಕಪ್ ಅಕ್ಕಿ
  3. 1/2 ಟೀಸ್ಪೂನ್ ಮೆಂತೆ
  4. 2 - 4 ಹಸಿರುಮೆಣಸಿನಕಾಯಿ
  5. 1cm ಉದ್ದದ ಶುಂಠಿ 
  6. 1 ಟೀಸ್ಪೂನ್ ಜೀರಿಗೆ 
  7. ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು
  8. ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  9. ಸುಮಾರು ಒಂದೂವರೆ ಕಪ್ ನೀರು
  10. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
  11. ಉಪ್ಪು ರುಚಿಗೆ ತಕ್ಕಷ್ಟು.

ಹೆಸರು ಕಾಳು ದೋಸೆ ಮಾಡುವ ವಿಧಾನ:

  1. ಹೆಸರು ಕಾಳು, ಅಕ್ಕಿ ಮತ್ತು ಮೆಂತೆಯನ್ನು ತೊಳೆದು 4 - 5 ಘಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ ಮಿಕ್ಸಿ ಜಾರಿಗೆ ಹಾಕಿ. 
  3. ಅದಕ್ಕೆ ಹಸಿರುಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಹಾಕಿ.
  5. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿರಲಿ. ಸುಮಾರು ಒಂದೂವರೆ ಕಪ್ ನೀರು ಸೇರಿಸಬೇಕಾಗುತ್ತದೆ.
  6. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. 
  7. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. 
  8. ಮೇಲಿನಿಂದ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ. ಮುಚ್ಚಳ ಮುಚ್ಚಿ ಬೇಯಿಸಿ.
  9. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 

ಶನಿವಾರ, ಏಪ್ರಿಲ್ 13, 2019

Fruit custard or fruit salad recipe in Kannada | ಹಣ್ಣಿನ ಕಸ್ಟರ್ಡ್ ಅಥವಾ ಸಲಾಡ್ ಮಾಡುವ ವಿಧಾನ

Fruit custard or fruit salad recipe in Kannada

Fruit custard or fruit salad recipe in Kannada | ಹಣ್ಣಿನ ಕಸ್ಟರ್ಡ್ ಅಥವಾ ಸಲಾಡ್ ಮಾಡುವ ವಿಧಾನ

ಫ್ರೂಟ್ ಕಸ್ಟರ್ಡ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್
  2. 2 ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  3. 2.25 ಕಪ್ ಹಾಲು 
  4. 1 ಕಪ್ ಹಣ್ಣು (ಸೇಬು, ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ, ಮಾವು, ಕಲ್ಲಂಗಡಿ ಇತ್ಯಾದಿ)

ಹಣ್ಣಿನ ಕಸ್ಟರ್ಡ್ ಅಥವಾ ಸಲಾಡ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
  2. ಅದಕ್ಕೆ ಕಾಲು ಕಪ್ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. 
  3. ಇನ್ನೊಂದು ಪಾತ್ರೆಯಲ್ಲಿ ಎರಡು ಕಪ್ ಹಾಲು ತೆಗೆದುಕೊಳ್ಳಿ. 
  4. ಅದಕ್ಕೆ ಎರಡು ಟೇಬಲ್ ಚಮಚ ಸಕ್ಕರೆ ಹಾಕಿ ಕುದಿಯಲು ಇಡೀ. 
  5. ಹಾಲು ಸ್ವಲ್ಪ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಹಾಲು ಮತ್ತು ಕಸ್ಟರ್ಡ್ ಪೌಡರ್ ನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಗಂಟಿಲ್ಲದಂತೆ ಕಲಸಿಕೊಳ್ಳಿ. 
  6. ಕುದಿಸಿದ ನಂತ್ರ, ಉರಿ ಕಡಿಮೆ ಮಾಡಿ, ಒಂದೈದು ನಿಮಿಷ ಕುದಿಸುವುದನ್ನು ಮುಂದುವರೆಸಿ. 
  7. ಸ್ವಲ್ಪ ದಪ್ಪ ಆದಮೇಲೆ ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಫ್ರಿಡ್ಜ್ ನಲ್ಲಿಡಿ. 
  8. ತಣ್ಣಗಾದ ಮೇಲೆ, ಕತ್ತರಿಸಿದ ಹಣ್ಣುಗಳನ್ನು ಹಾಕಿ. ಹುಳಿ ಇರುವ ಹಣ್ಣುಗಳನ್ನು ಹಾಕುವುದು ಬೇಡ.
  9. ಬಡಿಸುವ ಮೊದಲು ಮೇಲಿನಿಂದ ಹಣ್ಣುಗಳಿಂದ ಅಲಂಕರಿಸಿ ಸವಿದು ಆನಂದಿಸಿ. 

ಶುಕ್ರವಾರ, ಏಪ್ರಿಲ್ 5, 2019

Capsicum chutney recipe in Kannada | ದೊಣ್ಣೆಮೆಣಸು ಚಟ್ನಿ ಮಾಡುವ ವಿಧಾನ

Capsicum chutney recipe in Kannada

Capsicum chutney recipe in Kannada | ದೊಣ್ಣೆಮೆಣಸು ಚಟ್ನಿ ಮಾಡುವ ವಿಧಾನ

ದೊಣ್ಣೆಮೆಣಸು ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಒಣಮೆಣಸಿನಕಾಯಿ 
  2. 2 ಟೀಸ್ಪೂನ್ ಕಡ್ಲೆಬೇಳೆ 
  3. 2 ಟೀಸ್ಪೂನ್ ಉದ್ದಿನಬೇಳೆ
  4. 1 ಮಧ್ಯಮ ಗಾತ್ರದ ಈರುಳ್ಳಿ
  5. 1 ಮಧ್ಯಮ ಗಾತ್ರದ ಟೊಮೇಟೊ ಅಥವಾ ಸ್ವಲ್ಪ ಹುಣಿಸೇಹಣ್ಣು
  6. 1 ಮಧ್ಯಮ ಗಾತ್ರದ ದೊಣ್ಣೆಮೆಣಸು
  7. 1/2 ಕಪ್ ತೆಂಗಿನತುರಿ
  8. 4 - 5 ಕರಿಬೇವಿನ ಎಲೆ
  9. ಒಂದು ದೊಡ್ಡ ಚಿಟಿಕೆ ಅರಿಶಿನ
  10. ಉಪ್ಪು ರುಚಿಗೆ ತಕ್ಕಷ್ಟು
  11. 1 ಟೇಬಲ್ ಚಮಚ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಉದ್ದಿನಬೇಳೆ
  4. 4 - 5 ಕರಿಬೇವಿನ ಎಲೆ
  5. ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ಅಡುಗೆ ಎಣ್ಣೆ

ದೊಣ್ಣೆಮೆಣಸು ಚಟ್ನಿ ಮಾಡುವ ವಿಧಾನ:

  1. ಟೊಮೇಟೊ, ದೊಣ್ಣೆಮೆಣಸು ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. 
  3. ಒಣಮೆಣಸು, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಬೇಳೆ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  4. ನಂತ್ರ ಕರಿಬೇವು ಮತ್ತು ಕತ್ತರಿಸಿದ ಈರುಳ್ಳಿ ಹಾಕಿ. ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
  5. ಈರುಳ್ಳಿ ಮೆತ್ತಗಾದ ಮೇಲೆ, ಕತ್ತರಿಸಿದ ದೊಣ್ಣೆಮೆಣಸು ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಆಮೇಲೆ ಕತ್ತರಿಸಿದ ಟೊಮೇಟೊ ಹಾಕಿ ಹುರಿಯಿರಿ. ಟೊಮೇಟೊ ಬದಲು ಹುಣಿಸೆರಸ ಹಾಕಬಹುದು. 
  7. ಅರಿಶಿನ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  8. ಸ್ಟವ್ ಆಫ್ ಮಾಡಿ ತೆಂಗಿನತುರಿ ಮತ್ತು ಉಪ್ಪು ಸೇರಿಸಿ. 
  9. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. 
  10. ಕೊನೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಾಡಿ. 
  11. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ. 
Related Posts Plugin for WordPress, Blogger...