ಗುರುವಾರ, ಸೆಪ್ಟೆಂಬರ್ 29, 2022

Avalakki habe kadubu recipe in Kannada | ಅವಲಕ್ಕಿ ಹಬೆಕಡುಬು ಮಾಡುವ ವಿಧಾನ

 

Avalakki habe kadubu recipe in Kannada

Avalakki habe kadubu recipe in Kannada | ಅವಲಕ್ಕಿ ಹಬೆಕಡುಬು ಮಾಡುವ ವಿಧಾನ

ಅವಲಕ್ಕಿ ಹಬೆಕಡುಬು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೀಡಿಯಂ ಅವಲಕ್ಕಿ (ಅಥವಾ 1 ಕಪ್ ಗಟ್ಟಿ ಅವಲಕ್ಕಿ)
  2. 1/2 ಕಪ್ ತೊಗರಿಬೇಳೆ 
  3. 1/2 ಕಪ್ ಕಡ್ಲೆಬೇಳೆ 
  4. 1 - 2 ಹಸಿರು ಮೆಣಸಿನಕಾಯಿ 
  5. 1/2 ಇಂಚು ಉದ್ದದ ಶುಂಠಿ
  6. 5 - 6 ಕರಿಬೇವಿನ ಎಲೆ 
  7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  8. 1/2 ಕಪ್ ತೆಂಗಿನತುರಿ
  9. ನಿಮ್ಮ ರುಚಿ ಪ್ರಕಾರ ಉಪ್ಪು

ಅವಲಕ್ಕಿ ಹಬೆಕಡುಬು ಮಾಡುವ ವಿಧಾನ:

  1. ಬೇಳೆಗಳನ್ನು 3 - 4 ಘಂಟೆಗಳ ಕಾಲ ನೆನೆಸಿಡಿ. 
  2. ಅವಲಕ್ಕಿಯನ್ನು ಸಂಪೂರ್ಣ ಮೆತ್ತಗಾಗವವರೆಗೆ ನೆನೆಸಿ, ನೀರು ಬಗ್ಗಿಸಿಡಿ. 
  3. ಬೇಳೆಗಳು ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ. 
  4. ಅದಕ್ಕೆ ತೆಂಗಿನತುರಿ, ಶುಂಠಿ, ಹಸಿರುಮೆಣಸಿನಕಾಯಿ ಸೇರಿಸಿ. 
  5. ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ. 
  6. ಒಂದು ಅಗಲವಾದ ಪಾತ್ರೆಯಲ್ಲಿ ನೆನೆಸಿದ ಅವಲಕ್ಕಿ ಮತ್ತು ರುಬ್ಬಿದ ಮಿಶ್ರಣ ತೆಗೆದುಕೊಳ್ಳಿ. 
  7. ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ. 
  8. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಕಾಲು ಕಪ್) ಮೆತ್ತಗಿನ ಮಿಶ್ರಣ ತಯಾರಿಸಿಕೊಳ್ಳಿ. 
  9. ಬೇಕಾದ ಆಕಾರದಲ್ಲಿ ಉಂಡೆಗಳನ್ನು ಮಾಡಿ. 
  10. 15 - 20 ನಿಮಿಷಗಳ ಕಾಲ ಹಬೆ ಅಥವಾ ಆವಿಯಲ್ಲಿ ಬೇಯಿಸಿ. 
  11. ಚಟ್ನಿ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು. 

ಗುರುವಾರ, ಸೆಪ್ಟೆಂಬರ್ 22, 2022

Idli mix recipe in Kannada | ಇಡ್ಲಿ ಮಿಕ್ಸ್ ಮಾಡುವ ವಿಧಾನ

 

Idli mix recipe in Kannada

Idli mix recipe in Kannada | ಇಡ್ಲಿ ಮಿಕ್ಸ್ ಮಾಡುವ ವಿಧಾನ

ಇಡ್ಲಿ ಮಿಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಇಡ್ಲಿರವೆ
  2. 1/2 ಕಪ್ ಉದ್ದಿನ ಬೇಳೆ 
  3. 1/2 ಕಪ್ ಗಟ್ಟಿ ಅಥವಾ ಮೀಡಿಯಂ ಅವಲಕ್ಕಿ 
  4. ಉಪ್ಪು ನಿಮ್ಮ ರುಚಿ ಪ್ರಕಾರ


ಇಡ್ಲಿ ಮಿಕ್ಸ್ ಮಾಡುವ ವಿಧಾನ:

  1. ಉದ್ದಿನಬೇಳೆಯನ್ನು ಬಿಸಿಯಾಗುವವರೆಗೆ ಹುರಿಯಿರಿ. ಘಮ ಬಂದರೆ ಸಾಕು, ಬಣ್ಣ ಬದಲಾಗುವುದು ಬೇಡ.
  2. ಬಿಸಿ ಆರಿದ ಮೇಲೆ ಹುರಿದ ಉದ್ದಿನಬೇಳೆಯನ್ನು ನುಣ್ಣಗೆ ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿ.
  3. ನಂತರ ಅವಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ಅದೇ ಪಾತ್ರೆಗೆ ಸೇರಿಸಿ. 
  4. ಇಡ್ಲಿ ರವೆಯನ್ನು ಸೇರಿಸಿ.  ಚೆನ್ನಾಗಿ ಕಲಸಿ. 
  5. ಈ ಇಡ್ಲಿ ಮಿಕ್ಸ್ ಅನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  6. ಇಡ್ಲಿ ಮಾಡಲು, ಅಗತ್ಯವಿದ್ದಷ್ಟು ಇಡ್ಲಿ ಮಿಕ್ಸ್ ತೆಗೆದುಕೊಳ್ಳಿ.
  7. ಸುಮಾರು ಒಂದೂವರೆ ಪಟ್ಟು ನೀರು ಸೇರಿಸಿ. 
  8. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ. ಹಿಟ್ಟು ಮಾಮೂಲಿ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳು ಇರಲಿ. 
  9. ಮುಚ್ಚಳವನ್ನು ಮುಚ್ಚಿ 12 - 13 ಗಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. 
  10. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  11. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  12. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಟ್ಟು, 10 - 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. 
  13. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆದು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಿ.

ಗುರುವಾರ, ಸೆಪ್ಟೆಂಬರ್ 15, 2022

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 4 - 5 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕರಿಬೇವಿನ ಸೊಪ್ಪು
  5. 4 - 5 ಒಣ ಮೆಣಸಿನಕಾಯಿ
  6. 1 - 2 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. 
  2. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  3. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  4. ತಿನ್ನುವ ಮೊದಲು, ಮಂಡಕ್ಕಿ ಇರುವ ಪಾತ್ರೆಗೆ ತೆಂಗಿನ ಎಣ್ಣೆ ಅಥವಾ ಕರಗಿಸಿದ ತುಪ್ಪ ಸೇರಿಸಿ.
  5. ಪುಡಿ ಮಾಡಿದ ಮಸಾಲೆ ಸೇರಿಸಿ. 
  6. ಚೆನ್ನಾಗಿ ಕೈಯಿಂದ ಕಲಸಿ. 
  7. ತಕ್ಷಣವೇ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 6, 2022

Dodna dose recipe in Kannada | ದೊಡ್ನ ದೋಸೆ ಮಾಡುವ ವಿಧಾನ

 

Dodna dose recipe in Kannada

Dodna dose recipe in Kannada | ದೊಡ್ನ ದೋಸೆ ಮಾಡುವ ವಿಧಾನ

ದೊಡ್ನ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1/2 ಕಪ್ ತೆಂಗಿನತುರಿ
  3. 1 ಕಪ್ ಅನ್ನ
  4. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
  5. 1/2 ಟೀಸ್ಪೂನ ಸಕ್ಕರೆ
  6. ಉಪ್ಪು ರುಚಿಗೆ ತಕ್ಕಷ್ಟು.

ದೊಡ್ನ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.
  3. ತೆಂಗಿನಕಾಯಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ. 
  5. ಅದಕ್ಕೆ ಬೇಯಿಸಿದ ಅನ್ನ ಸೇರಿಸಿ,  ನುಣ್ಣಗೆ ಅರೆಯಿರಿ. 
  6. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. 
  7. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 10 - 12 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ. 
  10. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  12. ಬೇಕಾದಲ್ಲಿ ತಿರುವಿ ಹಾಕಿ ಇನ್ನೊಂದು ಬದಿ ಕಾಯಿಸಿ. ಚಟ್ನಿಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...