ಗುರುವಾರ, ಜೂನ್ 28, 2018

Instant idli recipe in Kannada | ದಿಢೀರ್ ಅವಲಕ್ಕಿ ಇಡ್ಲಿ ಮಾಡುವ ವಿಧಾನ

Instant idli recipe in Kannada

Instant idli recipe in Kannada | ದಿಢೀರ್ ಅವಲಕ್ಕಿ ಇಡ್ಲಿ ಮಾಡುವ ವಿಧಾನ

ದಿಢೀರ್ ಅವಲಕ್ಕಿ ಇಡ್ಲಿ ವೀಡಿಯೊ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅವಲಕ್ಕಿ
  2. 1 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
  3. 3/4 ಕಪ್ ಇಡ್ಲಿರವೇ
  4. ಚಿಟಿಕೆ ಅಡುಗೆ ಸೋಡಾ (ಬೇಕಾದಲ್ಲಿ)
  5. ಉಪ್ಪು ನಿಮ್ಮ ರುಚಿ ಪ್ರಕಾರ


ದಿಢೀರ್ ಅವಲಕ್ಕಿ ಇಡ್ಲಿ ಮಾಡುವ ವಿಧಾನ:

  1. ಅವಲಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಒಂದು ಕಪ್ ಮೊಸರು ಹಾಕಿ ಕಲಸಿ, ಐದು ನಿಮಿಷ ನೆನೆಯಲು ಬಿಡಿ.
  3. ಆಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣನೆ ಅರೆಯಿರಿ. 
  4. ಪಾತ್ರೆಗೆ ಬಗ್ಗಿಸಿ 3/4 ಕಪ್ ಇಡ್ಲಿರವೇ ಸೇರಿಸಿ. ಚೆನ್ನಾಗಿ ಕಲಸಿ. 
  5. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್), ಸ್ವಲ್ಪ ಗಟ್ಟಿಯಾದ ಇಡ್ಲಿ ಹಿಟ್ಟನ್ನು ತಯಾರಿಸಿಕೊಳ್ಳಿ. 
  6. . ಉಪ್ಪು ಮತ್ತು ಸೋಡಾ ಬೆರೆಸಿ, ಚೆನ್ನಾಗಿ ಕಲಸಿ. ಸೋಡಾ ಹಾಕಲು ಇಷ್ಟವಿಲ್ಲದಿದ್ದರೆ, ಹಿಟ್ಟು ಕಲಸಿದ ಮೇಲೆ ಹದಿನೈದು ನಿಮಿಷ ಬಿಟ್ಟು ಮತ್ತೆ ಇಡ್ಲಿ ಮಾಡಿ. 
  7. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  8. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೆರಡು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.

ಬುಧವಾರ, ಜೂನ್ 27, 2018

Uddinittu recipe in Kannada | ಉದ್ದಿನಿಟ್ಟು ಮಾಡುವ ವಿಧಾನ

Uddinittu  recipe in Kannada

Uddinittu  recipe in Kannada | ಉದ್ದಿನಿಟ್ಟು ಮಾಡುವ ವಿಧಾನ 


ಉದ್ದಿನಿಟ್ಟು ವೀಡಿಯೊ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಅಥವಾ 4 ಚಮಚ ಉದ್ದಿನ ಹಿಟ್ಟು
  2. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
  3. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  4. 1 ಟೀಸ್ಪೂನ್ ಕತ್ತರಿಸಿದ ಕರಿಬೇವು
  5. 1 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಕಪ್ ಮೊಸರು ಅಥವಾ ಮಜ್ಜಿಗೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೀಸ್ಪೂನ್ ಅಡುಗೆ ಎಣ್ಣೆ
  2. 1ಸಂಡಿಗೆ ಮೆಣಸು ಅಥವಾ ಮಜ್ಜಿಗೆ ಮೆಣಸು
  3. ಒಂದು ಚಿಟಿಕೆ ಇಂಗು
  4. 1/4 ಟೀಸ್ಪೂನ್ ಸಾಸಿವೆ

ಉದ್ದಿನಿಟ್ಟು ಮಾಡುವ ವಿಧಾನ:

  1. ಉದ್ದಿನ ಬೇಳೆಯನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ.
  2. ಸುಮಾರು ನಾಲ್ಕು ಚಮಚದಷ್ಟು ಹಿಟ್ಟನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. 
  3. ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. 
  4. ಅದಕ್ಕೆ ಮೊಸರು ಅಥವಾ ಮಜ್ಜಿಗೆ ಸೇರಿಸಿ ತೆಳುವಾದ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 
  5. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  6. ಎಣ್ಣೆ, ಮಜ್ಜಿಗೆಮೆಣಸು, ಇಂಗು ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಮಜ್ಜಿಗೆ ಮೆಣಸಿಲ್ಲದಿದ್ದಲ್ಲಿ, ಒಣಮೆಣಸನ್ನು ಹಾಕಬಹುದು. ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಜೂನ್ 20, 2018

Aviyal recipe in Kannada | ಅವಿಯಲ್ ಮಾಡುವ ವಿಧಾನ

Aviyal recipe in Kannada

Aviyal recipe in Kannada | ಅವಿಯಲ್ ಮಾಡುವ ವಿಧಾನ

ಅವಿಯಲ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)

  1. 1/2 ಕೆಜಿ ಮಿಶ್ರ ತರಕಾರಿಗಳು (ಈ ತರಕಾರಿಗಳಲ್ಲಿ ಆರಿಸಿ - ಸುವರ್ಣಗಡ್ಡೆ, ಕ್ಯಾರೆಟ್, ಬಾಳೆಕಾಯಿ, ನುಗ್ಗೆಕಾಯಿ, ಸಾಂಬರ್ ಸೌತೆಕಾಯಿ, ಬೂದು ಕುಂಬಳಕಾಯಿ, ಬೀನ್ಸ್, ಅಲಸಂಡೆ, ತೊಂಡೆಕಾಯಿ, ಪಡವಲಕಾಯಿ, ಆಲೂಗಡ್ಡೆ)
  2. ಒಂದು ಚಿಟಿಕೆ ಅರಶಿನ ಪುಡಿ 
  3. ಒಂದು ಚಮಚ ಅಡುಗೆ ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1 ಕಪ್ ತೆಂಗಿನ ತುರಿ 
  2. 1 ಟೀಸ್ಪೂನ್ ಜೀರಿಗೆ 
  3. 2 ಹಸಿರು ಮೆಣಸಿನಕಾಯಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಅವಿಯಲ್ ಮಾಡುವ ವಿಧಾನ:

  1. ಬಾಳೆಕಾಯಿ ಮತ್ತು ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ. 
  2. ಉಳಿದ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ (ನಾನು ಕ್ಯಾರೆಟ್, ನುಗ್ಗೆಕಾಯಿ, ಬೀನ್ಸ್, ತೊಂಡೆಕಾಯಿ, ಪಡವಲಕಾಯಿ ಉಪಯೋಗಿಸಿದ್ದೇನೆ). 
  3. ಜೀರಿಗೆ, ತೆಂಗಿನ ತುರಿ ಮತ್ತು ಹಸಿರುಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  4. ಒಂದು ಪಾತ್ರೆಯಲ್ಲಿ ಒಂದು ಟೀಸ್ಪೂನ್ ಎಣ್ಣೆ ಹಾಕಿ, ಕತ್ತರಿಸಿದ ತರಕಾರಿಗಳನ್ನು ಹಾಕಿ.
  5. ಅರಿಶಿನ ಮತ್ತು ಉಪ್ಪು ಹಾಕಿ. ಒಮ್ಮೆ ಮಗುಚಿ. ಎಣ್ಣೆ ಹಾಕುವುದರಿಂದ ತರಕಾರಿ ಮುದ್ದೆ ಆಗುವುದಿಲ್ಲ. 
  6. ಆಮೇಲೆ ಒಂದು ಕಪ್ ನಷ್ಟು ನೀರು ಹಾಕಿ, ತರಕಾರಿಗಳನ್ನು ಬೇಯಿಸಿ. ಆದರೆ ಮುದ್ದೆಯಾಗುವಷ್ಟು ಬೇಯಿಸಬೇಡಿ. 
  7. ಬೇಯಿಸಿದ ತರಕಾರಿಗೆ ಅರೆದ ಮಸಾಲೆ ಹಾಕಿ. ಹೆಚ್ಚು ನೀರು ಹಾಕಬೇಡಿ. ಅವಿಯಲ್ ಸ್ವಲ್ಪ ಗಟ್ಟಿಯಾಗಿರಬೇಕು. 
  8. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  9. ಒಂದೈದು ನಿಮಿಷ ಕುದಿಸಿ, ಸ್ಟವ್ ಆಫ್ ಮಾಡಿ.
  10. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಜೂನ್ 14, 2018

Capsicum ricebath recipe in Kannada | ದೊಣ್ಣೆಮೆಣಸು ರೈಸ್ ಬಾತ್ ಮಾಡುವ ವಿಧಾನ

Capsicum ricebath recipe in Kannada

Capsicum ricebath recipe in Kannada | ದೊಣ್ಣೆಮೆಣಸು ರೈಸ್ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 2 ದೊಡ್ಡ ದೊಣ್ಣೆಮೆಣಸು
  3. 4 ಟೇಬಲ್ ಚಮಚ ಅಡುಗೆ ಎಣ್ಣೆ 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 1 ಟೀಸ್ಪೂನ್ ಕಡಲೆಬೇಳೆ 
  7. 4 - 5 ಕರಿಬೇವಿನ ಎಲೆ 
  8. 2 ಟೇಬಲ್ ಚಮಚ ನೆಲಗಡಲೆ
  9. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  10. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
  11. 1/4 ಟೀಸ್ಪೂನ್ ಅರಶಿನ ಪುಡಿ
  12. 1/4 ಟೀಸ್ಪೂನ್ ಇಂಗು 
  13. 2 ಟೇಬಲ್ ಚಮಚ ವಾಂಗೀಬಾತ್ ಪುಡಿ (ಇಲ್ಲದಿದ್ದಲ್ಲಿ ಕೆಳಗೆ ನೀಡಿರುವ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ)
  14. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  15. 2 ಟೇಬಲ್ ಚಮಚ ತೆಂಗಿನತುರಿ
  16. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ)

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 4 ಟೀಸ್ಪೂನ್ ಕೊತ್ತಂಬರಿ ಬೀಜ
  5. 1cm ಉದ್ದದ ಚಕ್ಕೆ 
  6. 3 - 4 ಲವಂಗ 
  7. 1/4 ಟೀಸ್ಪೂನ್ ಗಸಗಸೆ
  8. 2 - 4 ಟೇಬಲ್ ಚಮಚ ತೆಂಗಿನ ತುರಿ

ದೊಣ್ಣೆಮೆಣಸು ರೈಸ್ ಬಾತ್ ಮಾಡುವ ವಿಧಾನ:

  1. ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ "ಮಸಾಲೆ ಪುಡಿ" ಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ. 
  2. ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  3. ದೊಣ್ಣೆಮೆಣಸನ್ನು ತೊಳೆದು, ಸಣ್ಣಗೆ ಕತ್ತರಿಸಿಟ್ಟು ಕೊಳ್ಳಿ. ಈರುಳ್ಳಿಯನ್ನೂ ಕತ್ತರಿಸಿಟ್ಟುಕೊಳ್ಳಿ. 
  4. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  5. ನೆಲಗಡಲೆ ಹಾಕಿ ಹುರಿಯಿರಿ. 
  6. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  7. ಇಂಗು ಮತ್ತು ಅರಿಶಿನ ಪುಡಿ ಸೇರಿಸಿ. 
  8. ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ.
  9. ನಂತರ ಹೆಚ್ಚಿದ ದೊಣ್ಣೆಮೆಣಸು ಹಾಕಿ ಒಂದೈದು ನಿಮಿಷ ಹುರಿಯಿರಿ. 
  10. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
  11. ಆಗಾಗ್ಯೆ ಮಗುಚುತ್ತಾ  ದೊಣ್ಣೆಮೆಣಸನ್ನು ಮೆತ್ತಗೆ ಬೇಯಿಸಿಕೊಳ್ಳಿ. 
  12. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. 
  13. ಕಾಯಿತುರಿ ಮತ್ತು ಕೊತ್ತಂಬರಿ ಸೂಪ್ಪು ಹಾಕಿ. ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  14. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಜೂನ್ 12, 2018

Mavinakayi thokku recipe in Kannada | ಮಾವಿನಕಾಯಿ ತೊಕ್ಕು ಮಾಡುವ ವಿಧಾನ

Mavinakayi thokku recipe in Kannada

Mavinakayi thokku recipe in Kannada | ಮಾವಿನಕಾಯಿ ತೊಕ್ಕು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಮಾಧ್ಯಮ ಗಾತ್ರದ ಮಾವಿನಕಾಯಿ
  2. 1 - 2 ಟೇಬಲ್ ಚಮಚ ಅಚ್ಚಖಾರದ ಪುಡಿ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೇಬಲ್ ಚಮಚ ಉಪ್ಪು  ಅಥವಾ ನಿಮ್ಮ ರುಚಿಗೆ ತಕ್ಕಷ್ಟು

ಹುರಿಯಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಮೆಂತೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/4 ಟೀಸ್ಪೂನ್ ಇಂಗು
  3. 4 - 5 ಕರಿಬೇವಿನ ಎಲೆ
  4. 4 ಟೇಬಲ್ ಚಮಚ ಎಣ್ಣೆ

ಮಾವಿನಕಾಯಿ ತೊಕ್ಕು ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು ನೀರಾರಿಸಿ, ತುರಿದಿಟ್ಟುಕೊಳ್ಳಿ. ಬೇಕಾದಲ್ಲಿ ಸಿಪ್ಪೆ ತೆಗೆಯಬಹುದು. ನಾನು ತೆಗೆಯಲಿಲ್ಲ. 
  2. ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ಪುಡಿ ಮಾಡಿಟ್ಟು ಕೊಳ್ಳಿ.
  3. ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  4. ಅದಕ್ಕೆ ತುರಿದ ಮಾವಿನಕಾಯಿಯನ್ನು ಸೇರಿಸಿ. 
  5. ಅಚ್ಚಖಾರದಪುಡಿ, ಅರಿಶಿನ, ಹುರಿದು ಪುಡಿಮಾಡಿದ ಮೆಂತೆ+ಸಾಸಿವೆ ಮತ್ತು ಉಪ್ಪು ಹಾಕಿ. 
  6.  ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಮಗುಚಿ. 6 - 7 ನಿಮಿಷ ಬೇಕಾಗಬಹುದು. 
  7. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  8. ಮಾವಿನಕಾಯಿ ತೊಕ್ಕು ಸವಿಯಲು ಸಿದ್ಧ. ಬಿಸಿ ಅನ್ನ ಅಥವಾ ಮೊಸರನ್ನದೊಂದಿಗೆ ಬಡಿಸಿ. 

ಸೋಮವಾರ, ಜೂನ್ 11, 2018

Broken wheat bisi bele bath Recipe in Kannada | ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ

Broken wheat bisi bele bath Recipe in Kannada

Broken wheat bisi bele bath Recipe in Kannada | ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)

  1. 1/4 ಕಪ್ ಹೆಸರುಬೇಳೆ
  2. 1/4 ಕಪ್ ತೊಗರಿಬೇಳೆ
  3. 3/4 ಕಪ್ ಗೋಧಿ ನುಚ್ಚು
  4. 2 ಟೇಬಲ್ ಸ್ಪೂನ್  ನೆಲಗಡಲೆ ಅಥವಾ ಶೇಂಗಾ
  5. 5 ಬೀನ್ಸ್
  6. 1 ಸಣ್ಣ ಕ್ಯಾರೆಟ್
  7. 1 ಸಣ್ಣ ಆಲೂಗಡ್ಡೆ
  8. 1 ಸಣ್ಣ ಟೊಮೇಟೊ
  9. 2 ಟೇಬಲ್ ಸ್ಪೂನ್ ಹಸಿ ಅಥವಾ ನೆನೆಸಿದ ಬಟಾಣಿ
  10. 1 ಟೊಮ್ಯಾಟೋ
  11. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣು
  12. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  13. ದೊಡ್ಡ ಚಿಟಿಕೆ ಅರಿಶಿನ ಪುಡಿ
  14. 2 ಟೇಬಲ್ ಸ್ಪೂನ್ ಬಿಸಿಬೇಳೆ ಬಾತ್ ಪುಡಿ
  15. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಕಡ್ಲೆ ಬೇಳೆ
  3. 2 ಟೀಸ್ಪೂನ್ ಉದ್ದಿನ ಬೇಳೆ
  4. 8-10 ಗೋಡಂಬಿ
  5. 7 - 8 ಕರಿಬೇವಿನ ಎಲೆ
  6. ದೊಡ್ಡ ಚಿಟಿಕೆ ಇಂಗು
  7. ದೊಡ್ಡ ಚಿಟಿಕೆ ಅರಿಶಿನ
  8. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ:

  1. ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ಹೆಸರುಬೇಳೆ, ತೊಗರಿಬೇಳೆ ಮತ್ತು ನೆಲಗಡಲೆಯನ್ನು ತೊಳೆದು ಬೇಯಿಸಿ.  
  3. ಅದೇ ಕುಕ್ಕರ್ ಗೆ ಕತ್ತರಿಸಿದ ತರಕಾರಿ, ಕತ್ತರಿಸಿದ ಟೊಮೇಟೊ, ಹಸಿ ಬಟಾಣಿ ಮತ್ತು ಗೋಧಿ ನುಚ್ಚು ಸೇರಿಸಿ. 2 ವಿಷಲ್ ಮಾಡಿ ಬೇಯಿಸಿ.
  4. ಒಂದು ಬಾಣಲೆ ತೆಗೆದುಕೊಂಡು ಎಣ್ಣೆ, ಶೇಂಗಾ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ. 
  5. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಕರಿಬೇವಿನ ಸೊಪ್ಪು ಸೇರಿಸಿ. ಇಂಗು ಮತ್ತು ಅರಿಶಿನ ಪುಡಿ ಸೇರಿಸಿ. 
  6. ಬೇಕಾದಲ್ಲಿ ಈರುಳ್ಳಿ ಮತ್ತು ಕಾಪ್ಸಿಕಮ್ ಹಾಕಿ ಹುರಿಯಬಹುದು. ನಾನು ಹಾಕಲಿಲ್ಲ.  
  7. ಕೂಡಲೇ ಬಿಸಿಬೇಳೆ ಬಾತ್ ಪುಡಿ, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ. 
  8. ಸ್ಟೋವ್ ಆಫ್ ಮಾಡಿ. 
  9. ನಂತರ ಬೇಯಿಸಿದ ತರಕಾರಿ, ಗೋಧಿ ನುಚ್ಚು ಮತ್ತು ಬೇಳೆಯನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಜೂನ್ 7, 2018

Drakshi hannina sasive recipe in kannada | ದ್ರಾಕ್ಷಿ ಹಣ್ಣಿನ ಸಾಸಿವೆ ಮಾಡುವ ವಿಧಾನ

Drakshi hannina sasive recipe in kannada

Drakshi hannina sasive recipe in kannada |ದ್ರಾಕ್ಷಿ ಹಣ್ಣಿನ ಸಾಸಿವೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಕಪ್ ದ್ರಾಕ್ಷಿಹಣ್ಣು
  2. 1 ಲಿಂಬೇಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 2 - 4 ಒಣಮೆಣಸಿನಕಾಯಿ
  3. 1/2 ಕಪ್ ತೆಂಗಿನತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 4 - 5 ಕರಿಬೇವಿನ ಎಲೆ
  4. 1/2 ಟೀಸ್ಪೂನ್ ಸಾಸಿವೆ

ದ್ರಾಕ್ಷಿ ಹಣ್ಣಿನ ಸಾಸಿವೆ ಮಾಡುವ ವಿಧಾನ:

  1. ದ್ರಾಕ್ಷಿ ಹಣ್ಣನ್ನು ಆರಿಸಿ ತೊಳೆಯಿರಿ. 
  2. ನಂತರ 2 - 4 ಭಾಗಗಳಾಗಿ ಕತ್ತರಿಸಿ. ಬೀಜ ಇದ್ದರೆ ತೆಗೆಯಿರಿ. 
  3. ಆಮೇಲೆ ಕತ್ತರಿಸಿದ ದ್ರಾಕ್ಷಿಯನ್ನು ಒಂದು ಪಾತ್ರೆಗೆ ಹಾಕಿ. 
  4. ಉಪ್ಪು, ಅರಿಶಿನ ಮತ್ತು 1/4  ಕಪ್ ನೀರು ಹಾಕಿ ಬೇಯಿಸಿ. 5 - 6 ನಿಮಿಷ ಬೇಯಿಸಿದರೆ ಸಾಕು. 
  5. ನಂತರ ರುಚಿ ನೋಡಿ, ಅಗತ್ಯವಿದ್ದಷ್ಟು ಬೆಲ್ಲ ಸೇರಿಸಿ. ಬೇಕಾದಲ್ಲಿ ಹುಣಿಸೆಹಣ್ಣನ್ನೂ ಸೇರಿಸಬಹುದು. ಸಣ್ಣ ಉರಿಯಲ್ಲಿ ಕುದಿಯುವುದನ್ನು ಮುಂದುವರೆಸಿ. 
  6. ಅದೇ ಸಮಯದಲ್ಲಿ ಸಾಸಿವೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  7. ಅರೆದ ಮಿಶ್ರಣವನ್ನು ಬೇಯಿಸಿದ ದ್ರಾಕ್ಷಿ ಇರುವ ಪಾತ್ರೆಗೆ ಹಾಕಿ. 
  8. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಕಲಸಿ. ಒಂದು ಕುದಿ ಬಂದ ಕೂಡಲೇ ಸ್ಟವ್ ಆಫ್ ಮಾಡಿ. 
  9. ಎಣ್ಣೆ, ಒಣಮೆಣಸು, ಕರಿಬೇವು ಮತ್ತು ಸಾಸಿವೆ ಒಗ್ಗರಣೆ ಕೊಡಿ. ದೋಸೆ ಅಥವಾ ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಜೂನ್ 5, 2018

Mavina hannina rasayana recipe in kannada | ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ

Mavina hannina rasayana recipe in kannada

Mavina hannina rasayana recipe in kannada | ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 - 2 ಮಾವಿನಹಣ್ಣು
  2. 3/4 ಕಪ್ ತೆಂಗಿನತುರಿ ಅಥವಾ 1/2 ಗಟ್ಟಿ ತೆಂಗಿನಕಾಯಿ ಹಾಲು
  3. 1/2 ಕಪ್ ನೀರು (ಕಾಯಿಹಾಲು ತೆಗೆಯಲು)
  4. 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. ಚಿಟಿಕೆ ಉಪ್ಪು.

ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ:

  1. ಮಾವಿನಹಣ್ಣು ತೊಳೆದು, ಸಣ್ಣದಾಗಿ ಕತ್ತರಿಸಿ ಅಥವಾ ಕೊಚ್ಚಿ. ಮೇಲೆ ಹಾಕಿದ ವಿಡಿಯೋ ನೋಡಿ.  
  2. ಆಮೇಲೆ ವಾಟೆ ಅಥವಾ ಗೊರಟಿನ ಭಾಗದ ಮಾವಿನ ಹಣ್ಣನ್ನು ಕೊಚ್ಚಿ ಸೇರಿಸಿ. ಗೊರಟು ಬೇಕಾದರೆ ಹಾಕಬಹುದು. 
  3. ನಂತ್ರ ಪುಡಿ ಮಾಡಿದ ಬೆಲ್ಲ ಸೇರಿಸಿ. 
  4. ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಬಟ್ಟೆಯಲ್ಲಿ ಹಿಂಡಿ, ಕಾಯಿ ಹಾಲನ್ನು ತೆಗೆದು, ಮಾವಿನಹಣ್ಣು ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ. 
  6. ಚಿಟಿಕೆ ಉಪ್ಪು ಹಾಕಿ. ಚೆನ್ನಾಗಿ ಕಲಸಿ.
  7. ನೀರು ದೋಸೆ, ತೆಳು ಅವಲಕ್ಕಿ ಅಥವಾ ಒತ್ತು ಶಾವಿಗೆಯೊಂದಿಗೆ ಬಡಿಸಿ.

ಶುಕ್ರವಾರ, ಜೂನ್ 1, 2018

Punarpuli saaru recipe in Kannada | ಪುನರ್ಪುಳಿ ಸಾರು ಮಾಡುವ ವಿಧಾನ

Punarpuli saaru recipe in Kannada

Punarpuli saaru recipe in Kannada | ಪುನರ್ಪುಳಿ ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 4 - 5 ಒಣಗಿಸಿದ ಪುನರ್ಪುಳಿ
  2. 1 ಸಣ್ಣ ಲಿಂಬೆಗಾತ್ರದ ಬೆಲ್ಲ
  3. 1 ಹಸಿರುಮೆಣಸಿನಕಾಯಿ
  4. 2 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1.  1/2 ಟೀಸ್ಪೂನ್ ಸಾಸಿವೆ
  2. 1 /2 ಟೀಸ್ಪೂನ್ ಜೀರಿಗೆ
  3. 1/4 ಟೀಸ್ಪೂನ್ ಮೆಂತೆ
  4. 1 - 2 ಒಣಮೆಣಸಿನಕಾಯಿ
  5. 5 - 6 ಕರಿಬೇವಿನ ಎಲೆ
  6. ಇಂಗು ಒಂದು ದೊಡ್ಡ ಚಿಟಿಕೆ
  7. 4 ಟೀಸ್ಪೂನ್ ಅಡುಗೆ ಎಣ್ಣೆ

ಪುನರ್ಪುಳಿ ಸಾರು ಮಾಡುವ ವಿಧಾನ:

  1. ಪುನರ್ಪುಳಿಯನ್ನು ತೊಳೆದು ನೀರಿನಲ್ಲಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನೆನೆಸಿಡಿ.
  2. ಆಮೇಲೆ ಅದನ್ನು ನೀರಿನ ಸಹಿತ ಒಂದು ಪಾತ್ರೆಗೆ ಹಾಕಿ. ಉಪ್ಪು, ಬೆಲ್ಲ ಮತ್ತು ಸೀಳಿದ ಹಸಿರುಮೆಣಸಿನಕಾಯಿ ಸೇರಿಸಿ. 
  3. ಕುದಿಯಲು ಬಿಡಿ. 
  4. ಸಣ್ಣ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ಬೇಕಾದಲ್ಲಿ ರುಚಿ ನೋಡಿ, ಉಪ್ಪು ಮತ್ತು ಬೆಲ್ಲ ಹೊಂದಿಸಿಕೊಳ್ಳಿ.  
  5. ಒಗ್ಗರಣೆಗೆ ಬೇಕಾದ ಎಲ್ಲ ಪದಾರ್ಥಗಳನ್ನು (ಎಣ್ಣೆ, ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಮೆಂತೆ, ಇಂಗು ಮತ್ತು ಕರಿಬೇವು) ಉಪಯೋಗಿಸಿ ಒಗ್ಗರಣೆ ಮಾಡಿ. 
  6. ಕುದಿಸಿದ ಸಾರಿಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಹಾಗೆಯೂ ಕುಡಿಯಬಹುದು. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...