White sauce macaroni pasta in Kannada | ಪಾಸ್ತಾ ಮಾಡುವ ವಿಧಾನ
Video: How to make macaroni pasta
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಪಾಸ್ತಾ
- 1/2 ಕಪ್ ಕತ್ತರಿಸಿದ ಮಿಶ್ರ ತರಕಾರಿಗಳು ( ಕ್ಯಾರೆಟ್, ಕ್ಯಾಪ್ಸಿಕಂ, ಜೋಳ, ಹಸಿ ಬಟಾಣಿ, ಹೂಕೋಸು, ಬ್ರೊಕೋಲಿ, ಈರುಳ್ಳಿ ಗಿಡ, ಎಲೆಕೋಸು ಮತ್ತು ಬೀನ್ಸ್ ಇವುಗಳಲ್ಲಿ ಆಯ್ಕೆ ಮಾಡಿ)
- 1 ಟೇಬಲ್ ಚಮಚ ಮೈದಾ
- 1/2 ಕಪ್ ಹಾಲು
- 1/2 - 3/4 ಕಪ್ ನೀರು
- 1/4 ಟೀಸ್ಪೂನ್ ಪಾಸ್ತಾ ಅಥವಾ ಪಿಜ್ಜಾ ಮಸಾಲೆ ಪುಡಿ
- 1/4 ಚಮಚ ಕಾಳುಮೆಣಸಿನ ಪುಡಿ
- 2 ಟೇಬಲ್ ಚಮಚ ಬೆಣ್ಣೆ
- 2 - 3 ಎಸಳು ಬೆಳ್ಳುಳ್ಳಿ
- ನಿಮ್ಮ ರುಚಿ ಪ್ರಕಾರ ಉಪ್ಪು
ಪಾಸ್ತಾ ಮಾಡುವ ವಿಧಾನ:
- ಒಂದು ಬಾಣಲೆಗೆ ಒಂದು ಟೇಬಲ್ ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಕತ್ತರಿಸಿದ ತರಕಾರಿ ಸೇರಿಸಿ ಹುರಿದು ಪಕ್ಕಕ್ಕಿಡಿ. ಸ್ವಲ್ಪ ಹುರಿದರೆ ಸಾಕು.
- ನಂತ್ರ ಅದೇ ಬಾಣಲೆಗೆ ಉಳಿದ ಇನ್ನೊಂದು ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಮೈದಾ ಹಿಟ್ಟು ಮತ್ತು ಹಾಲು ಹಾಕಿ ಗಂಟಿಲ್ಲದಂತೆ ಮಗುಚಿ.
- ನಂತರ ಅದಕ್ಕೆ ೧/೨ ಕಪ್ ನೀರು ಹಾಕಿ ಕುದಿಸಿ.
- ಅದಕ್ಕೆ ಬೇಯಿಸಿದ ಪಾಸ್ತಾ ಮತ್ತು ಹುರಿದ ತರಕಾರಿ ಸೇರಿಸಿ.
- ಪಾಸ್ತಾ ಅಥವಾ ಪಿಜ್ಜಾ ಮಸಾಲೆ ಪುಡಿ ಮತ್ತು ಕಾಳುಮೆಣಸಿನ ಪುಡಿ ಹಾಕಿ.
- ಉಪ್ಪು ಹಾಕಿ ಮತ್ತು ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ