ಮಂಗಳವಾರ, ಜನವರಿ 28, 2020

Golden milk recipe in Kannada | ಗೋಲ್ಡನ್ ಮಿಲ್ಕ್ ಮಾಡುವ ವಿಧಾನ

Golden milk recipe in Kannada

Golden milk recipe in Kannada | ಗೋಲ್ಡನ್ ಮಿಲ್ಕ್ ಮಾಡುವ ವಿಧಾನ

ಗೋಲ್ಡನ್ ಮಿಲ್ಕ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )

  1. 1 ಕಪ್ ಹಾಲು
  2. 0.25 ಕಪ್ ನೀರು (ಬೇಕಾದಲ್ಲಿ)
  3. 1/2 ಚಮಚ ಅರಿಶಿನ
  4. 1 ಚಮಚ ಮೇಪಲ್ ಸಿರಪ್ ಅಥವಾ ಜೇನುತುಪ್ಪ
  5. 7 - 8 ಕರಿಮೆಣಸು
  6. ಒಂದು ಸಣ್ಣ ಚೂರು ಶುಂಠಿ
  7. ಅರ್ಧ ಬೆರಳುದ್ದ ಚಕ್ಕೆ

ಗೋಲ್ಡನ್ ಮಿಲ್ಕ್ ಮಾಡುವ ವಿಧಾನ:

  1. ಕರಿಮೆಣಸು, ಚಕ್ಕೆ ಮತ್ತು ಶುಂಠಿಯನ್ನು ಕುಟ್ಟಾಣಿಯಲ್ಲಿ ಜಜ್ಜಿಕೊಳ್ಳಿ.
  2. ಜಜ್ಜಿದ ಮಸಾಲೆಗಳನ್ನು 1 ಕಪ್ ಹಾಲಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ. ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು.  
  3. ಆಮೇಲೆ ಅರಿಶಿನ ಸೇರಿಸಿ. 
  4. ಹಾಗೆ ಮೇಪಲ್ ಸಿರಪ್ ಸೇರಿಸಿ. ಜೇನುತುಪ್ಪ ಸೇರಿಸುವುದಾದಲ್ಲಿ ಕೊನೆಯಲ್ಲಿ ಸೇರಿಸಬೇಕು. 
  5. ಚೆನ್ನಾಗಿ ಕಲಕಿ, 5 ನಿಮಿಷಗಳ ಕಾಲ ಕುದಿಸಿ.
  6. ಸೋಸಿ ಕುಡಿಯಲು ನೀಡಿ. ಜೇನುತುಪ್ಪ ಸೇರಿಸುವುದಾದರೆ ಈಗ ಸೇರಿಸಿ. 



ಶನಿವಾರ, ಜನವರಿ 25, 2020

Palak dose recipe in Kannada | ಪಾಲಕ್ ಹೆಸರು ಕಾಳು ದೋಸೆ ಮಾಡುವ ವಿಧಾನ

Palak dose recipe in Kannada

Palak dose recipe in Kannada | ಪಾಲಕ್ ಹೆಸರು ಕಾಳು ದೋಸೆ ಮಾಡುವ ವಿಧಾನ


ಪಾಲಕ್ ಹೆಸರುಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರು ಕಾಳು
  2.  1/4 ಕಪ್ ಅಕ್ಕಿ
  3. 1/2 ಕಟ್ಟು ಪಾಲಕ್ ಸೊಪ್ಪು
  4. 2 - 3 ಹಸಿರುಮೆಣಸಿನಕಾಯಿ
  5. 1cm ಉದ್ದದ ಶುಂಠಿ 
  6. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ಪಾಲಕ್ ಹೆಸರು ಕಾಳು ದೋಸೆ ಮಾಡುವ ವಿಧಾನ:

  1. ಹೆಸರು ಕಾಳು ಮತ್ತು ಅಕ್ಕಿಯನ್ನು ತೊಳೆದು 5 ಘಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ ಮಿಕ್ಸಿ ಜಾರಿಗೆ ಹಾಕಿ. 
  3. ಅದಕ್ಕೆ ಹಸಿರುಮೆಣಸಿನಕಾಯಿ ಮತ್ತು ಶುಂಠಿ  ಸೇರಿಸಿ. 
  4. ಪಾಲಕ್ ಸೊಪ್ಪನ್ನು ತೊಳೆದು, ದೊಡ್ಡದಾಗಿ ಕತ್ತರಿಸಿ ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಹಾಕಿ.
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿರಲಿ.
  7. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. 
  8. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ ದೋಸೆ ಮಾಡಿ. 
  9. ಮುಚ್ಚಳ ಮುಚ್ಚಿ ಬೇಯಿಸಿ.
  10. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 

ಗುರುವಾರ, ಜನವರಿ 23, 2020

Sutta badanekayi gojju recipe in Kannada | ಸುಟ್ಟ ಬದನೇಕಾಯಿ ಗೊಜ್ಜು ಮಾಡುವ ವಿಧಾನ

Sutta badanekayi gojju recipe in Kannada

Sutta badanekayi gojju recipe in Kannada |ಸುಟ್ಟ ಬದನೇಕಾಯಿ ಗೊಜ್ಜು ಮಾಡುವ ವಿಧಾನ 


ಸುಟ್ಟ ಬದನೇಕಾಯಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ನೇರಳೆ ಬದನೇಕಾಯಿ ಅಥವಾ ಎರಡು ಸಣ್ಣ ಬದನೇಕಾಯಿ
  2. 1 ಚಮಚ ಬೆಲ್ಲ 
  3. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  4. ಒಂದು ಈರುಳ್ಳಿ
  5. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. 1 - 2 ಟೀಸ್ಪೂನ್ ಕತ್ತರಿಸಿದ ಹಸಿರು ಮೆಣಸಿನಕಾಯಿ
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಕಪ್ ಮೊಸರು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೀಸ್ಪೂನ್ ಅಡುಗೆ ಎಣ್ಣೆ
  2. 1 ಒಣ ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
  3. ಸ್ವಲ್ಪ ಕರಿಬೇವು
  4. 1/4 ಟೀಸ್ಪೂನ್ ಸಾಸಿವೆ

ಸುಟ್ಟ ಬದನೇಕಾಯಿ ಗೊಜ್ಜು ಮಾಡುವ ವಿಧಾನ:

  1. ಬದನೇಕಾಯಿ ತೊಳೆದು, ನೀರಾರಿಸಿ, ನೇರವಾಗಿ ಸ್ಟವ್ ನಲ್ಲಿ ಮೆತ್ತಗಾಗುವವರೆಗೆ ಸುಡಿ. ಬದನೇಕಾಯಿಯನ್ನು ತಿರುಗಿಸಿ ತಿರುಗಿಸಿ ಸುಡಬೇಕು. ಸುಮಾರು 7 - 8 ನಿಮಿಷ ಬೇಕಾಗುತ್ತದೆ. 
  2. ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಫೋರ್ಕ್ ಅಥವಾ ಕೈಯಿಂದ ಕಿವುಚಿ.
  3. ಉಪ್ಪು, ಬೆಲ್ಲ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ, ಕಲಸಿ. 
  4. ನಂತರ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. 
  5. ಎಣ್ಣೆ, ಒಣಮೆಣಸು,ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೋಮವಾರ, ಜನವರಿ 20, 2020

Akki hittina dose recipe in Kannada | ದಿಢೀರ್ ಅಕ್ಕಿ ಹಿಟ್ಟಿನ ದೋಸೆ ಮಾಡುವ ವಿಧಾನ

Akki hittina dose recipe in Kannada

Akki hittina dose recipe in Kannada | ದಿಢೀರ್ ಅಕ್ಕಿ ಹಿಟ್ಟಿನ ದೋಸೆ ಮಾಡುವ ವಿಧಾನ 

ಅಕ್ಕಿ ಹಿಟ್ಟಿನ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು
  2. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  3. ಸ್ವಲ್ಪ ಕೊತ್ತಂಬರಿ ಸೊಪ್ಪು 
  4. 1 - 2 ಹಸಿಮೆಣಸಿನಕಾಯಿ
  5. 1 ಚಮಚ ಜೀರಿಗೆ 
  6. 2 ಟೇಬಲ್ ಚಮಚ ತೆಂಗಿನ ತುರಿ
  7. ಉಪ್ಪು ರುಚಿಗೆ ತಕ್ಕಷ್ಟು
  8. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು

ದಿಢೀರ್ ಅಕ್ಕಿ ಹಿಟ್ಟಿನ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
  2. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  3. ಜೀರಿಗೆ ಸೇರಿಸಿ. 
  4. ತೆಂಗಿನತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ಸ್ವಲ್ಪ ಸ್ವಲ್ಪ ನೀರು ಸೇರಿಸಿ, ತೆಳುವಾದ ದೋಸೆ ಹಿಟ್ಟು ತಯಾರಿಸಿಕೊಳ್ಳಿ.
  6. ದೋಸೆ ಹಿಟ್ಟು ರವೇ ದೋಸೆ ಅಥವಾ ನೀರುದೋಸೆಗಿಂತ ಸ್ವಲ್ಪ ಗಟ್ಟಿ ಇರಲಿ.
  7. ಕಬ್ಬಿಣದ ಕಾವಲಿ ತೆಗೆದುಕೊಂಡು ಒಲೆ ಮೇಲೆ ಇರಿಸಿ. ಈ ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ನಾನ್-ಸ್ಟಿಕ್ ತವವನ್ನು ಸಹ ಬಳಸಬಹುದು. 
  8. ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  9. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. 
  10. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ. 
  11. ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ 5 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ತೆಗೆಯಿರಿ. 
  12. ಚಟ್ನಿಯೊಂದಿಗೆ ದಿಢೀರ್ ದೋಸೆ ಸವಿದು ಆನಂದಿಸಿ.

ಶುಕ್ರವಾರ, ಜನವರಿ 17, 2020

Mandakki oggarane recipe in Kannada | ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ

Mandakki oggarane recipe in Kannada

Mandakki oggarane recipe in Kannada | ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ 


ಮಂಡಕ್ಕಿ ಒಗ್ಗರಣೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 8 ಕಪ್ ಅಥವಾ ಸುಮಾರು 200gm ಮಂಡಕ್ಕಿ  
  2. 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
  3. 1/4 ಕಪ್ ಕಡ್ಲೆಕಾಯಿ ಅಥವಾ ಶೇಂಗಾ
  4. 1/2 ಟೀಸ್ಪೂನ್ ಸಾಸಿವೆ
  5. 1 ದೊಡ್ಡ ಈರುಳ್ಳಿ
  6. 1 ಟೊಮ್ಯಾಟೋ 
  7. 1-2 ಹಸಿರು ಮೆಣಸಿನಕಾಯಿ
  8. 4-5 ಕರಿ ಬೇವಿನ ಎಲೆ
  9. 1/4 ಟೀಸ್ಪೂನ್ ಅರಶಿನ ಪುಡಿ
  10. 2 ಟೇಬಲ್ ಚಮಚ ಅಡುಗೆ ಎಣ್ಣೆ
  11. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
  12. ಸಕ್ಕರೆ ರುಚಿಗೆ ತಕ್ಕಷ್ಟು
  13. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  14. ನಿಂಬೆ ರಸ ರುಚಿಗೆ ತಕ್ಕಷ್ಟು

ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ:

  1. ಹುರಿಗಡಲೆ ಅಥವಾ ಪುಟಾಣಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 
  2. ಮಂಡಕ್ಕಿಯನ್ನು ನೀರಲ್ಲಿ 2 ನಿಮಿಷ ನೆನೆಸಿ. 
  3. ನಂತರ ನೀರು ಹಿಂಡಿ ತೆಗೆದು, ನೆನೆಸಿದ ಮಂಡಕ್ಕಿಯನ್ನು ಪಕ್ಕಕ್ಕಿಡಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮೊದಲಿಗೆ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ. 
  5. ಅದಕ್ಕೆ ಸಾಸಿವೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ.
  6. ಸಾಸಿವೆ ಸಿಡಿದ ಕೂಡಲೇ ಕರಿಬೇವು ಮತ್ತು ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  7. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  8. ರುಚಿಗೆ ತಕ್ಕಂತೆ ಉಪ್ಪು ಮತ್ತು ಸಕ್ಕರೆ ಸೇರಿಸಿ. 
  9. ನೆನೆಸಿಟ್ಟ ಮಂಡಕ್ಕಿ ಹಾಕಿ. 
  10. ಮೇಲಿನಿಂದ ಕೊತ್ತಂಬರಿ ಸೊಪ್ಪು ಮತ್ತು ಹುರಿಗಡಲೆ ಪುಡಿ ಹಾಕಿ. 
  11. ರುಚಿಗೆ ತಕ್ಕಂತೆ ನಿಂಬೆ ರಸ ಸೇರಿಸಿ. 
  12. ಸ್ಟವ್ ಆಫ್ ಮಾಡಿ, ಚೆನ್ನಾಗಿ ಮಗುಚಿ. 
  13. ಸ್ಟವ್ ಆಫ್ ಮಾಡಿ, ಬಡಿಸಿ.


ಗುರುವಾರ, ಜನವರಿ 9, 2020

Instant cooked rice idli recipe in Kannada | ದಿಢೀರ್ ಅನ್ನದ ಇಡ್ಲಿ ಮಾಡುವ ವಿಧಾನ

Instant cooked rice idli recipe in Kannada

Instant cooked rice idli recipe in Kannada | ದಿಢೀರ್ ಅನ್ನದ ಇಡ್ಲಿ ಮಾಡುವ ವಿಧಾನ

ದಿಢೀರ್ ಅನ್ನದ ಇಡ್ಲಿ ವೀಡಿಯೊ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅನ್ನ
  2. 1/2 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
  3. 1/2 ಕಪ್ ಇಡ್ಲಿರವೇ
  4. ಚಿಟಿಕೆ ಅಡುಗೆ ಸೋಡಾ (ಬೇಕಾದಲ್ಲಿ)
  5. ಉಪ್ಪು ನಿಮ್ಮ ರುಚಿ ಪ್ರಕಾರ


ದಿಢೀರ್ ಅನ್ನದ ಇಡ್ಲಿ ಮಾಡುವ ವಿಧಾನ:

  1. ಅನ್ನವನ್ನು ಒಂದು ಮಿಕ್ಸಿಯಲ್ಲಿ ತೆಗೆದುಕೊಳ್ಳಿ. 
  2. ಸ್ವಲ್ಪ ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ಪಾತ್ರೆಗೆ ಬಗ್ಗಿಸಿ ಇಡ್ಲಿರವೇ ಸೇರಿಸಿ. 
  4. ಮೊಸರು ಸೇರಿಸಿ, ಚೆನ್ನಾಗಿ ಕಲಸಿ. 
  5. ಅಗತ್ಯವಿದ್ದಷ್ಟು ನೀರು ಸೇರಿಸಿ, ಸ್ವಲ್ಪ ಗಟ್ಟಿಯಾದ ಇಡ್ಲಿ ಹಿಟ್ಟನ್ನು ತಯಾರಿಸಿಕೊಳ್ಳಿ. 
  6. . ಉಪ್ಪು ಮತ್ತು ಸೋಡಾ ಬೆರೆಸಿ, ಚೆನ್ನಾಗಿ ಕಲಸಿ. ಹದಿನೈದು ನಿಮಿಷ ನೆನೆಯಲು ಬಿಡಿ.
  7. ಸೋಡಾ ಹಾಕಲು ಇಷ್ಟವಿಲ್ಲದಿದ್ದರೆ, ಪುನಃ ಹದಿನೈದು ನಿಮಿಷ ಬಿಟ್ಟು ಮತ್ತೆ ಇಡ್ಲಿ ಮಾಡಿ. 
  8. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  9. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೆರಡು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.

ಮಂಗಳವಾರ, ಜನವರಿ 7, 2020

Carrot beans palya recipe in Kannada | ಕ್ಯಾರಟ್ ಬೀನ್ಸ್ ಪಲ್ಯ ಮಾಡುವ ವಿಧಾನ

Carrot beans palya recipe in Kannada

Carrot beans palya recipe in Kannada | ಕ್ಯಾರಟ್ ಬೀನ್ಸ್ ಪಲ್ಯ ಮಾಡುವ ವಿಧಾನ 

ಕ್ಯಾರಟ್ ಬೀನ್ಸ್ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಣ್ಣಗೆ ಹೆಚ್ಚಿದ ಕ್ಯಾರಟ್ 
  2. 1 ಕಪ್ ಸಣ್ಣಗೆ ಹೆಚ್ಚಿದ ಬೀನ್ಸ್
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡ್ಲೆ ಬೇಳೆ
  6. 1 ಟೇಬಲ್ ಚಮಚ ಅಡುಗೆ ಎಣ್ಣೆ
  7. 1 ಒಣ ಮೆಣಸಿನಕಾಯಿ
  8. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  9. ಉಪ್ಪು ರುಚಿಗೆ ತಕ್ಕಷ್ಟು
  10. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/4 ಕಪ್ ತೆಂಗಿನ ತುರಿ
  2. 4 - 5 ಕರಿಬೇವಿನ ಎಲೆ
  3. 1 - 2 ಹಸಿರು ಮೆಣಸಿನ ಕಾಯಿ
  4. 1/2 ಟೀಸ್ಪೂನ್ ಜೀರಿಗೆ

ಕ್ಯಾರಟ್ ಬೀನ್ಸ್ ಪಲ್ಯ ಮಾಡುವ ವಿಧಾನ:

  1. ಕ್ಯಾರಟ್ ಮತ್ತು ಬೀನ್ಸ್ ನ್ನು ತೊಳೆದು, ಸಣ್ಣಗೆ ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಕ್ಯಾರಟ್ ಮತ್ತು ಬೀನ್ಸ್ ಹಾಕಿ. ಒಂದು ನಿಮಿಷ ಹುರಿಯಿರಿ. 
  4. ಅರಶಿನ ಮತ್ತು ಉಪ್ಪು ಸೇರಿಸಿ ಮಗುಚಿ. 
  5. ಸ್ವಲ್ಪ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  6. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ,  ಈರುಳ್ಳಿ, ಕರಿಬೇವಿನ ಎಲೆ, ಜೀರಿಗೆ ಮತ್ತು ಹಸಿರು ಮೆಣಸಿನಕಾಯಿ ಹಾಕಿ, ನೀರು ಹಾಕದೆ ಪುಡಿ ಮಾಡಿ. 
  7. ಪುಡಿ ಮಾಡಿದ ಮಸಾಲೆಯನ್ನು ಬೆಂದಿರುವ ಕ್ಯಾರಟ್ ಮತ್ತು ಬೀನ್ಸ್ ಗೆ ಹಾಕಿ. 
  8. ಚೆನ್ನಾಗಿ ಮಗುಚಿ ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಜನವರಿ 3, 2020

Hunase gojju recipe in Kannada | ಹುಣಸೆ ಗೊಜ್ಜು ಮಾಡುವ ವಿಧಾನ

Hunase gojju recipe in Kannada

Hunase gojju recipe in Kannada | ಹುಣಸೆ ಗೊಜ್ಜು ಮಾಡುವ ವಿಧಾನ

ಹುಣಸೆ ಗೊಜ್ಜು ವಿಡಿಯೋ

 ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ನಿಂಬೆ ಗಾತ್ರದ ಹುಣಸೆ ಹಣ್ಣು 
  2. 1 ಸಣ್ಣ ನಿಂಬೆ ಗಾತ್ರದ ಬೆಲ್ಲ 
  3. ರುಚಿಗೆ ತಕ್ಕಷ್ಟು ಉಪ್ಪು
  4. 1/2 - 1 ಸಾರಿನ ಪುಡಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 - 2 ಹಸಿರು ಮೆಣಸಿನಕಾಯಿ
  4. 5 - 6 ಕರಿಬೇವಿನ ಎಲೆ
  5. ದೊಡ್ಡ ಚಿಟಿಕೆ ಅರಿಶಿನ ಪುಡಿ
  6. 1/4 ಟೀಸ್ಪೂನ್ ಇಂಗು
  7. 1 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಹುಣಸೆ ಗೊಜ್ಜು ಮಾಡುವ ವಿಧಾನ:

  1. ಹುಣಿಸೆಹಣ್ಣನ್ನು 1/2 ಕಪ್ ನೀರಿನಲ್ಲಿ ನೆನೆಸಿ,  ತೆಗೆದಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ. 
  3. ನಂತರ ಹುಣಿಸೆರಸ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕುದಿಸಿ. 
  4.  ಕೊನೆಯಲ್ಲಿ ಸಾರಿನಪುಡಿ ಹಾಕಿ ಕುದಿಸಿ. 
  5. ಒಂದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. 
  6. ಅನ್ನ ಅಥವಾ ಪೊಂಗಲ್ ನೊಂದಿಗೆ ಬಡಿಸಿ. 
Related Posts Plugin for WordPress, Blogger...