ಮಂಗಳವಾರ, ಮಾರ್ಚ್ 30, 2021

Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ

 

Onadrakshi recipe in Kannada

Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ 

ಒಣದ್ರಾಕ್ಷಿ ಮಾಡುವ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. ಅಗತ್ಯವಿದ್ದಷ್ಟು ದ್ರಾಕ್ಷಿ (ಸಿಹಿ, ತೆಳು ಸಿಪ್ಪೆಯ ದ್ರಾಕ್ಷಿ)
  2. ಬೇಯಿಸಲು ಇಡ್ಲಿ ಪಾತ್ರೆ 

ಒಣದ್ರಾಕ್ಷಿ ಮಾಡುವ ವಿಧಾನ:

  1. ಚೆನ್ನಾಗಿ ಹಣ್ಣಾದ, ತೆಳು ಸಿಪ್ಪೆಯ ದ್ರಾಕ್ಷಿಯನ್ನು ತೆಗೆದುಕೊಳ್ಳಿ. 
  2. ಹಣ್ಣನ್ನು ಬಿಡಿಸಿ, ಚೆನ್ನಾಗಿ ತೊಳೆಯಿರಿ. 
  3. ಇಡ್ಲಿ ಪ್ಲೇಟ್ ನಲ್ಲಿಟ್ಟು ಐದು ನಿಮಿಷ ಆವಿಯಲ್ಲಿ (ಹಬೆಯಲ್ಲಿ) ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ. 
  4. ಒಂದು ಹತ್ತಿಯ ಬಟ್ಟೆ ಅಥವಾ ಟ್ರೇ ಯಲ್ಲಿ ಹರಡಿ. 
  5. ಬಿಸಿಲಿನಲ್ಲಿಟ್ಟು ಒಂದೆರಡು ದಿವಸ ಒಣಗಿಸಿ. 
  6. ಒಣಗಿದ ಮೇಲೆ, ಬಿಸಿಲು ವಾಸನೆ ಹೋಗುವ ಸಲುವಾಗಿ ಒಂದು ದಿನ ಬಿಟ್ಟು ನಂತರ  ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮಾರ್ಚ್ 24, 2021

Kadalekalu dose recipe in Kannada | ಕಡಲೆಕಾಳು ದೋಸೆ ಮಾಡುವ ವಿಧಾನ

 

Kadalekalu dose recipe in Kannada

Kadalekalu dose recipe in Kannada | ಕಡಲೆಕಾಳು ದೋಸೆ ಮಾಡುವ ವಿಧಾನ 

ಕಡಲೆಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1/2 ಕಪ್ ಅಕ್ಕಿ
  2. 1/2 ಕಪ್ ಕಡ್ಲೆಕಾಳು
  3. 2 - 5 ಒಣಮೆಣಸಿನಕಾಯಿ
  4. 2 ಸೆಮೀ ಉದ್ದದ ಶುಂಠಿ
  5. 1/2 ಟೀಸ್ಪೂನ್ ಜೀರಿಗೆ
  6. ಸ್ವಲ್ಪ ಕರಿಬೇವು
  7. ಸ್ವಲ್ಪ ಕೊತ್ತಂಬರಿ ಸೊಪ್ಪು
  8. ದೊಡ್ಡ ಚಿಟಿಕೆ ಇಂಗು
  9. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  10. ಉಪ್ಪು ರುಚಿಗೆ ತಕ್ಕಷ್ಟು.

ಕಡಲೆಕಾಳು ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಕಡಲೆಕಾಳನ್ನು 7 - 8 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ. ಒಣಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ. 
  4. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  6. ಸಣ್ಣಗೆ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಇಂಗು ಸೇರಿಸಿ. 
  7. ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. ಹಿಟ್ಟು ಹುದುಗುವ ಅವಶ್ಯಕತೆ ಇಲ್ಲ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  11. ದೋಸೆಯನ್ನು ಮಗುಚಿ ಇನ್ನೊಂದು ಬದಿಯೂ ಕಾಯಿಸಿ. 
  12. ತೆಂಗಿನಕಾಯಿ ಚಟ್ನಿಯೊಂದಿಗೆ ಅಥವಾ ಬೆಣ್ಣೆಯೊಂದಿಗೆ ಬಡಿಸಿರಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಮಾರ್ಚ್ 22, 2021

Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ

 

Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಳಕೆ ಕಟ್ಟಿದ ಹೆಸರುಕಾಳು 
  2. 1/2 ಕಪ್ ತುರಿದ ಕ್ಯಾರಟ್
  3. 1/2 ಕಪ್ ಸಣ್ಣಗೆ ಹೆಚ್ಚಿದ ಸೌತೆಕಾಯಿ
  4. 1/4 ಕಪ್  ಹಸಿ ತೆಂಗಿನ ತುರಿ
  5. ಸ್ವಲ್ಪ ದಾಳಿಂಬೆ ಬೀಜ (ಬೇಕಾದಲ್ಲಿ)
  6. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1/2 - 1 ಟೀಸ್ಪೂನ್ ನಿಂಬೆರಸ (ಅಥವಾ ಸಣ್ಣಗೆ ಹೆಚ್ಚಿದ ಒಂದು ಟೊಮೇಟೊ)
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಹಸಿಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ
  4. ಚಿಟಿಕೆ ಇಂಗು

ಹೆಸರುಕಾಳು ಕೋಸಂಬರಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಳಕೆ ಹೆಸರುಕಾಳು, ತುರಿದ ಕ್ಯಾರಟ್, ಕೊಚ್ಚಿದ ಸೌತೆಕಾಯಿ, ದಾಳಿಂಬೆ ಬೀಜ, ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ. 
  2. ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ  ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  3. ನಂತರ ಎಣ್ಣೆ, ಹಸಿರುಮೆಣಸಿನಕಾಯಿ, ಇಂಗು  ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.

ಶನಿವಾರ, ಮಾರ್ಚ್ 20, 2021

Sabbakki dose recipe in Kannada | ಸಬ್ಬಕ್ಕಿ ದೋಸೆ ಮಾಡುವ ವಿಧಾನ

 

Sabbakki dose recipe in Kannada

Sabbakki dose recipe in Kannada | ಸಬ್ಬಕ್ಕಿ ದೋಸೆ ಮಾಡುವ ವಿಧಾನ 

ಸಬ್ಬಕ್ಕಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1/2 ಕಪ್ ದೋಸೆ ಅಕ್ಕಿ
  2. 1/2 ಕಪ್ ಸಬ್ಬಕ್ಕಿ
  3. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 1 ಟೇಬಲ್ ಚಮಚ ಕರಿಬೇವು
  5. 2  ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  6. 1 ಹಸಿಮೆಣಸಿನಕಾಯಿ
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸಬ್ಬಕ್ಕಿ ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಸಬ್ಬಕ್ಕಿಯನ್ನು ತೊಳೆದು 3 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಸಿದು ಮಿಕ್ಸಿ ಜಾರಿಗೆ ಹಾಕಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. 
  4. ಹಿಟ್ಟನ್ನು ಚೆನ್ನಾಗಿ ಕಲಸಿ. 
  5. ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  6. ನಂತರ ಹಿಟ್ಟಿಗೆ ಸಣ್ಣಕ್ಕಿ ಹೆಚ್ಚಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  7. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  8. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
  10. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ಇನ್ನೊಂದು ಬದಿ ಕಾಯಿಸಿ. ಖಾರ ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮಾರ್ಚ್ 17, 2021

Beetroot undlaka recipe in Kannada | ಬೀಟ್ರೂಟ್ ಉಂಡ್ಲಕ ಮಾಡುವ ವಿಧಾನ

 

Beetroot undlaka recipe in Kannada

Beetroot undlaka recipe in Kannada | ಬೀಟ್ರೂಟ್ ಉಂಡ್ಲಕ ಮಾಡುವ ವಿಧಾನ 

ಬೀಟ್ರೂಟ್ ಉಂಡ್ಲಕ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಅಕ್ಕಿ ಹಿಟ್ಟು 
  2. ಅರ್ಧ ಬೀಟ್ರೂಟ್ (ಅರ್ಧ ಕಪ್ ಗಿಂತ ಸ್ವಲ್ಪ ಕಡಿಮೆ)
  3. 1/4 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  4. ಸ್ವಲ್ಪ ತುಪ್ಪ 
  5. ಉಪ್ಪು ರುಚಿಗೆ ತಕ್ಕಷ್ಟು

ಸಿಹಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ತೆಂಗಿನ ತುರಿ
  2. 2 ಟೇಬಲ್ ಚಮಚ ಬೆಲ್ಲ

ಖಾರಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಉದ್ದಿನಬೇಳೆ
  3. ಸ್ವಲ್ಪ ಕರಿಬೇವು
  4. 1 ಹಸಿಮೆಣಸಿನಕಾಯಿ
  5. ಚಿಟಿಕೆ ಅರಿಶಿನ
  6. ಚಿಟಿಕೆ ಇಂಗು
  7. ಉಪ್ಪು ರುಚಿಗೆ ತಕ್ಕಷ್ಟು
  8. 2 ಟೇಬಲ್ ಚಮಚ ತೆಂಗಿನ ತುರಿ
  9. 2 ಟೀಸ್ಪೂನ್ ಅಡುಗೆ ಎಣ್ಣೆ

ಬೀಟ್ರೂಟ್ ಉಂಡ್ಲಕ ಮಾಡುವ ವಿಧಾನ:

  1. ಬೀಟ್ರೂಟ್ ಸಿಪ್ಪೆ ತೆಗೆದು, ಕತ್ತರಿಸಿಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ, ಬೀಟ್ರೂಟ್ ಅನ್ನು ನುಣ್ಣಗೆ ಅರೆದುಕೊಳ್ಳಿ. 
  3. ಅರೆದ ಬೀಟ್ರೂಟ್ ಪೇಸ್ಟ್ ನ್ನು  ಒಂದು ಬಾಣಲೆಯಲ್ಲಿ ಹಾಕಿ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. 
  4. ಕುದಿಯಲು ಪ್ರಾರಂಭವಾದ ಕೂಡಲೇ, ಬೀಟ್ರೂಟ್ ಪೇಸ್ಟ್ ನ ಅರ್ಧದಷ್ಟು ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  5. ನಂತರ, ಅಗತ್ಯವಿದ್ದಲ್ಲಿ ಸ್ವಲ್ಪ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಮುಚ್ಚಳ ಮುಚ್ಚಿ ಬಿಸಿ ಆರಲು ಬಿಡಿ. 
  6. ಬಿಸಿ ಆರಿದ ಮೇಲೆ, ಕೈಗೆ ತುಪ್ಪ ಸವರಿಕೊಂಡು, ಸಣ್ಣ ಗೋಲಿ ಗಾತ್ರದ ಉಂಡೆಗಳನ್ನು ಮಾಡಿ. 
  7. ಸೆಕೆಯಲ್ಲಿ (ಆವಿಯಲ್ಲಿ) ತುಪ್ಪ ಸವರಿದ ಪ್ಲೇಟ್ ನಲ್ಲಿಟ್ಟು 10 ನಿಮಿಷ ಬೇಯಿಸಿ. ಬೇಯಿಸಿದ ನಂತ್ರ ಚಟ್ನಿಯೊಂದಿಗೆ ಬಡಿಸಬಹುದು. 
  8. ಅಥವಾ ಒಂದು ಬೌಲ್ ನಲ್ಲಿ ತೆಂಗಿನ ತುರಿ ಮತ್ತು ಬೆಲ್ಲ ಕಲಸಿ. ಅದಕ್ಕೆ ಬೇಯಿಸಿದ ಉಂಡೆಗಳನ್ನು ಹಾಕಿ, ಸಿಹಿ ಬೀಟ್ರೂಟ್ ಉಂಡ್ಲಕ ಮಾಡಿ.  
  9. ಅಥವಾ ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಮಾಡಿ. 
  10. ಅರಿಶಿನ ಮತ್ತು ಇಂಗು ಸೇರಿಸಿ. 
  11. ಈಗ ಬೇಯಿಸಿದ ಉಂಡೆ, ಸ್ವಲ್ಪ ಉಪ್ಪು ಮತ್ತು ಕಾಯಿತುರಿ ಹಾಕಿ,  ಚೆನ್ನಾಗಿ ಮಗುಚಿ. 
  12. ಬೆಳಗ್ಗಿನ ತಿಂಡಿ ಅಥವಾ ಸಂಜೆ ಸವಿದು ಆನಂದಿಸಿ. 

ಭಾನುವಾರ, ಮಾರ್ಚ್ 14, 2021

No coconut chutney recipe Kannada | ತೆಂಗಿನಕಾಯಿ ಹಾಕದೆ ಚಟ್ನಿ ಮಾಡುವ ವಿಧಾನ


No coconut chutney recipe Kannada

No coconut chutney recipe Kannada | ತೆಂಗಿನಕಾಯಿ ಹಾಕದೆ ಚಟ್ನಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹುರಿಗಡಲೆ ಅಥವಾ ಕಡ್ಲೆ ಪಪ್ಪು
  2. 1 - 2 ಒಣಮೆಣಸಿನಕಾಯಿ ಅಥವಾ ಹಸಿಮೆಣಸಿನಕಾಯಿ 
  3. 3 - 4 ಎಸಳು ಬೆಳ್ಳುಳ್ಳಿ (ಅಥವಾ ಚಿಟಿಕೆ ಇಂಗು)
  4. ಸ್ವಲ್ಪ ಬೆಲ್ಲ (ಬೇಕಾದಲ್ಲಿ)
  5. ಸ್ವಲ್ಪ ಹುಣಿಸೆ ಹಣ್ಣು 
  6. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. ಅರ್ಧ ಒಣಮೆಣಸಿನಕಾಯಿ
  3. 4 ಕರಿಬೇವಿನ ಎಲೆ
  4. 1/2 ಟಿಸ್ಪೂನ್ ಸಾಸಿವೆ 
  5. 1/2 ಟಿಸ್ಪೂನ್ ಉದ್ದಿನಬೇಳೆ

 ತೆಂಗಿನಕಾಯಿ ಹಾಕದೆ ಚಟ್ನಿ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿನಲ್ಲಿ ಹುರಿಗಡಲೆ, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಪುಡಿ ಮಾಡಿಕೊಳ್ಳಿ. 
  2. ರುಚಿಗೆ ತಕ್ಕಂತೆ ಉಪ್ಪು, ಸ್ವಲ್ಪ ಬೆಲ್ಲ, ಸ್ವಲ್ಪ ಹುಣಿಸೇಹಣ್ಣು ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  4. ಒಂದು ಬಟ್ಟಲಿಗೆ ತೆಗೆಯಿರಿ. 
  5. ಸಾಸಿವೆ, ಕರಿಬೇವು, ಉದ್ದಿನಬೇಳೆ ಮತ್ತು ಒಣಮೆಣಸಿನಕಾಯಿಯ ಒಗ್ಗರಣೆ ಕೊಡಿ. 
  6. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಶನಿವಾರ, ಮಾರ್ಚ್ 6, 2021

Veg paratha recipe in Kannada | ವೆಜ್ ಪರೋಟ ಮಾಡುವ ವಿಧಾನ

 

Veg paratha recipe in Kannada

Veg paratha recipe in Kannada | ವೆಜ್ ಪರೋಟ ಮಾಡುವ ವಿಧಾನ 

ವೆಜ್ ಪರೋಟ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ 
  3. 1/4 ಕಪ್ ತುರಿದ ಕ್ಯಾರಟ್ 
  4. 1/4 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು
  5. 1/4 ಕಪ್ ಸಣ್ಣಗೆ ಹೆಚ್ಚಿದ ಎಲೆ ಕೋಸು
  6. 1 ಹಸಿಮೆಣಸಿನಕಾಯಿ
  7. 1 ಟೀಸ್ಪೂನ್ ಶುಂಠಿ ಪೇಸ್ಟ್
  8. 1 ಟೇಬಲ್ ಚಮಚ ಕರಿಬೇವು
  9. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  10. 1 ಟೀಸ್ಪೂನ್ ಧನಿಯಾ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  13. 1/2 ಟೀಸ್ಪೂನ್ ಜೀರಿಗೆ ಪುಡಿ
  14. 6 - 8 ಚಮಚ ತುಪ್ಪ ಅಥವಾ ಎಣ್ಣೆ
  15. 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ವೆಜ್ ಪರೋಟ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರಟ್, ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು ಮತ್ತು ಸಣ್ಣಗೆ ಹೆಚ್ಚಿದ ಎಲೆ ಕೋಸು ತೆಗೆದುಕೊಳ್ಳಿ. 
  2. ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಶುಂಠಿ ಪೇಸ್ಟ್ ಸೇರಿಸಿ. 
  3. ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  4. ಅದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿ ಹಾಕಿ. 
  5. ಒಂದು ಕಪ್ ಗೋಧಿಹಿಟ್ಟು ಸೇರಿಸಿ, ಚೆನ್ನಾಗಿ ಕಲಸಿ. 
  6. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಮೆತ್ತಗಿನ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. 
  7. ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಸಣ್ಣ ವೃತ್ತಾಕಾರವಾಗಿ ಲಟ್ಟಿಸಿ.
  8. ಬೇಕಾದಲ್ಲಿ ಒಂದು ಪ್ಲೇಟ್ ಅಥವಾ ಬೌಲ್ ತೆಗೆದುಕೊಂಡು ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ. 
  9. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ. 
  10. ಕೆಚಪ್ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ  ಬಡಿಸಿ. ಹಾಗೆಯೂ ತಿನ್ನಬಹುದು. 

ಬುಧವಾರ, ಮಾರ್ಚ್ 3, 2021

Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ

 

Sutta tomato gojju recipe in Kannada

Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ 

ಸುಟ್ಟ ಟೊಮೇಟೊ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೊಮೇಟೊ
  2. 2 - 3 ಹಸಿರು ಮೆಣಸಿನಕಾಯಿ
  3. 3 - 4 ಎಸಳು ಬೆಳ್ಳುಳ್ಳಿ (ಅಥವಾ ಅರ್ಧ ಚಮಚ ಜೀರಿಗೆ ಪುಡಿ)
  4. 1 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  5. 1 ಚಮಚ ಬೆಲ್ಲ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಟೀಸ್ಪೂನ್ ಎಣ್ಣೆ

ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ:

  1. ಟೊಮೇಟೊ ತೊಳೆದು ನೀರಾರಿಸಿ, ನೇರವಾಗಿ ಸ್ಟವ್ ನಲ್ಲಿ ಮೆತ್ತಗಾಗುವವರೆಗೆ ಸುಡಿ. ಟೊಮ್ಯಾಟೊವನ್ನು ತಿರುಗಿಸಿ ತಿರುಗಿಸಿ ಸುಡಬೇಕು.
  2. ನಂತರ ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನೂ ಸುಡಿ. ಬೆಳ್ಳುಳ್ಳಿ ಬದಲು ಕೊನೆಯಲ್ಲಿ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಬಹುದು.
  3. ಬಿಸಿ ಕಡಿಮೆ ಆದಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ಮಸೆಯಿರಿ. ಮಿಕ್ಸಿಯಲ್ಲಿ ತರಿತರಿಯಾಗಿ ಅರೆಯಬಹುದು. 
  4. ಮಸೆದ ಅಥವಾ ಮ್ಯಾಶ್ ಮಾಡಿದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿ. 
  5. ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  6. ಒಂದು ಚಮಚ ಎಣ್ಣೆ ಸೇರಿಸಿ ಕಲಸಿ. 
  7. ಚಟ್ನಿ ಅಥವಾ ಗೊಜ್ಜು ಹುಳಿ ಎನಿಸಿದರೆ, ಬೆಲ್ಲ ಸೇರಿಸಬಹುದು. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೋಮವಾರ, ಮಾರ್ಚ್ 1, 2021

Benne biscuit recipe using wheat flour in Kannada | ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ

 


Benne biscuit recipe using wheat flour in Kannada | ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ


ಬೆಣ್ಣೆ ಬಿಸ್ಕತ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿ ಹಿಟ್ಟು
  2. 1/4 ಕಪ್ ಸಕ್ಕರೆ 
  3. 1/8 ಕಪ್ ತುಪ್ಪ ಅಥವಾ ಎಣ್ಣೆ

ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ:

  1. ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಉಳಿದ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಳ್ಳಿ. 
  2. ಒಂದು ಬಟ್ಟಲಿನಲ್ಲಿ ಸಕ್ಕರೆ ಪುಡಿ ಮತ್ತು ತುಪ್ಪ (ಅಥವಾ ಎಣ್ಣೆ) ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  3. ಆಮೇಲೆ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟು ಸೇರಿಸುತ್ತ ಮೃದುವಾದ ಹಿಟ್ಟನ್ನು ಕಲಸಿಕೊಳ್ಳಿ.  
  4. ಸಣ್ಣ ನೆಲ್ಲಿಕಾಯಿ ಗಾತ್ರದ ಚಪ್ಪಟೆ ಉಂಡೆಗಳನ್ನು ಮಾಡಿ. 
  5. ಬಿಸ್ಕೆಟ್ನ ಮೇಲೆ ಮ್ಮಿಷ್ಟದ ಡಿಸೈನ್ ಮಾಡಬಹುದು. 
  6. ಒಂದು ಪ್ಲೇಟ್ ಅಥವಾ ಟ್ರೇ ಗೆ ತುಪ್ಪ ಸವರಿ. ನಾನು ಮಿನಿ ಇಡ್ಲಿ ಪ್ಲೇಟ್ ಬಳಸಿದ್ದೇನೆ. 
  7. ತುಪ್ಪ ಸವರಿದ ಪ್ಲೇಟ್ ಮೇಲೆ ಮಾಡಿದ ಬಿಸ್ಕೆಟ್ಸ್ ಇಡಿ. 
  8. ಒಂದು ದಪ್ಪ ತಳದ ಬಾಣಲೆ ಒಳಗೆ ಒಂದು ಸ್ಟಾಂಡ್ ಇಟ್ಟು, ಒಂದೆರಡು ನಿಮಿಷ ಬಿಸಿಮಾಡಿಕೊಳ್ಳಿ. 
  9. ಆಮೇಲೆ ಬಿಸ್ಕೆಟ್ಸ್ ಇರುವ ಪ್ಲೇಟ್ ಇಟ್ಟು ಮುಚ್ಚಳ ಮುಚ್ಚಿ, 12 - 15 ನಿಮಿಷ ಬೇಯಿಸಿ. 
  10. ಸುಮಾರು ಹತ್ತು ನಿಮಿಷದ ನಂತ್ರ ನಿಮಿಷಕ್ಕೊಮ್ಮೆ ಬಿಸ್ಕೆಟ್ನ ಕೆಳಭಾಗ ನೋಡಿ. ಒಳ್ಳೆಯ ಘಮ ಮತ್ತು ಕೆಳಭಾಗ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಸಾಕು. 
  11. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಬಿಸ್ಕೆಟ್ಸ್ ತೆಗೆಯಿರಿ. ಸವಿದು ಆನಂದಿಸಿ. ಜಾಸ್ತಿ ಮಾಡುವುದಾದಲ್ಲಿ ಇನ್ನೊಂದು ಬಿಸ್ಕೆಟ್ ಇರುವ ಪ್ಲೇಟ್ ಇಟ್ಟು ಬೇಯಿಸುವುದನ್ನು ಮುಂದುವರೆಸಿ. 
  12. ಮೈಕ್ರೋವೇವ್ ಓವೆನ್ ನಲ್ಲಿ (200W)  2- 3 ನಿಮಿಷ. ಮಾಮೂಲಿ ಓವೆನ್ ನಲ್ಲಿ (180deg) 10 - 12 ನಿಮಿಷ ಬೇಯಿಸಿ ಮಾಡಬಹುದು. ಸಮಯ ಓವೆನ್ ನಿಂದ ಓವೆನ್ ಗೆ ಬದಲಾಗಬಹುದು. 


Related Posts Plugin for WordPress, Blogger...