ಬುಧವಾರ, ಸೆಪ್ಟೆಂಬರ್ 29, 2021

Dideer akki paddu recipe in Kannada | ಅಕ್ಕಿಯಿಂದ ದಿಢೀರ್ ಪಡ್ಡು ಮಾಡುವ ವಿಧಾನ

Dideer akki paddu recipe in Kannada

Dideer akki paddu recipe in Kannada |ಅಕ್ಕಿಯಿಂದ ದಿಢೀರ್ ಪಡ್ಡು ಮಾಡುವ ವಿಧಾನ 

ದಿಢೀರ್ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಇಡ್ಲಿರವೇ
  2. 1/4 ಕಪ್ ಮೊಸರು
  3. 1/4 ಕಪ್ ಅವಲಕ್ಕಿ (ಗಟ್ಟಿ ಅಥವಾ ಮೀಡಿಯಂ)
  4. 1/4 ಕಪ್ ಅಕ್ಕಿಹಿಟ್ಟು
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. 1 ಈರುಳ್ಳಿ
  7. 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 2 ಟೇಬಲ್ ಚಮಚ ತೆಂಗಿನತುರಿ
  9. 1 ಹಸಿಮೆಣಸಿನಕಾಯಿ
  10. 1/2 ಚಮಚ ಶುಂಠಿ
  11. ಉಪ್ಪು ರುಚಿಗೆ ತಕ್ಕಷ್ಟು
  12. 1/4 ಟೀಸ್ಪೂನ್ ಎನೊ ಅಥವಾ ಸೋಡಾ (ಬೇಕಾದಲ್ಲಿ)

ದಿಢೀರ್ ಪಡ್ಡು ಮಾಡುವ ವಿಧಾನ:

  1. ಇಡ್ಲಿರವೆಯನ್ನು ತೊಳೆದು ನೀರು ಬಗ್ಗಿಸಿ.
  2. ಕುದಿ ಕುದಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ. 
  3. ಅವಲಕ್ಕಿಯನ್ನು ಮಾಮೂಲಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.
  4. ನೆನೆಸಿದ ನಂತರ ಹೆಚ್ಚಿನ ನೀರು ಬಗ್ಗಿಸಿ ತೆಗೆಯಿರಿ. 
  5. ನೆನೆಸಿದ ಇಡ್ಲಿರವೆಯನ್ನು ಮಿಕ್ಸಿ ಜಾರಿಗೆ ಹಾಕಿ ಅರೆಯಿರಿ. 
  6. ರುಬ್ಬಿದ ನಂತರ ನೆನೆಸಿದ ಅವಲಕ್ಕಿ, ಅಕ್ಕಿಹಿಟ್ಟು ಮತ್ತು ಮೊಸರು ಸೇರಿಸಿ. 
  7. ಸ್ವಲ್ಪ ಹೊತ್ತು ರುಬ್ಬಿ ಒಂದು ಪಾತ್ರೆಗೆ ಹಾಕಿ. 
  8. ಅರೆಯಲು ಬೇರೆ ನೀರು ಸೇರಿಸುವುದು ಬೇಡ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
  9. ನಂತರ ಹಿಟ್ಟಿಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಾಯಿತುರಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  11. ಬೇಕಾದಲ್ಲಿ ಏನೋ ಅಥವಾ ಸೋಡಾ ಸೇರಿಸಿ ಕಲಸಿ.
  12. ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  13. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  14. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  15. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಸೆಪ್ಟೆಂಬರ್ 21, 2021

Chigali recipe in Kannada | ಚಿಗಳಿ ಮಾಡುವ ವಿಧಾನ

 

Chigali recipe in Kannada

Chigali recipe in Kannada | ಚಿಗಳಿ  ಮಾಡುವ ವಿಧಾನ

ಚಿಗಳಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1/4 ಕಪ್ ಹುಣಿಸೇಹಣ್ಣು
  2. 1 ಟೀಸ್ಪೂನ್ ಜೀರಿಗೆ
  3. 1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
  4. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  5. 1 ಟೇಬಲ್ ಚಮಚ ಬೆಲ್ಲ
  6. 1/2 ಟೀಸ್ಪೂನ್ ಎಣ್ಣೆ (ಬೇಕಾದಲ್ಲಿ)

ಚಿಗಳಿ ಮಾಡುವ ವಿಧಾನ:

  1.  ಉಪ್ಪು ಮತ್ತು ಜೀರಿಗೆಯನ್ನು ಚೆನ್ನಾಗಿ ಗುದ್ದಿ ಪುಡಿಮಾಡಿಕೊಳ್ಳಿ. ಜೀರಿಗೆ ಬದಲು ಜೀರಿಗೆ ಪುಡಿಯನ್ನು ಬಳಸಬಹುದು.  
  2. ಬೆಲ್ಲ, ಅಚ್ಚಖಾರದ ಪುಡಿ ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಚೆನ್ನಾಗಿ ಜಜ್ಜಿ.
  3. ಬೇಕಾದಲ್ಲಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು. 
  4. ಚೆನ್ನಾಗಿ ಜಜ್ಜಿ ಮುದ್ದೆ ಆದ ನಂತರ, ಎಣ್ಣೆ ಹಾಕಿ ಸ್ವಲ್ಪ ಹೊತ್ತು ಗುದ್ದಿ. 
  5. ಉಂಡೆಗಳನ್ನು ಮಾಡಿ ಕಡ್ಡಿಯನ್ನು ಚುಚ್ಚಿ. 
  6. ಅಥವಾ ಸಣ್ಣ ಉಂಡೆ ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ, ಎತ್ತಿಡಿ. 
  7. ಮಿಠಾಯಿಯಂತೆ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Kempu khara dose recipe in Kannada | ಕೆಂಪು ಖಾರ ದೋಸೆ ಮಾಡುವ ವಿಧಾನ

 

Kempu khara dose recipe in Kannada

Kempu khara dose recipe in Kannada | ಕೆಂಪು ಖಾರ ದೋಸೆ  ಮಾಡುವ ವಿಧಾನ

ಕೆಂಪು ಖಾರ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿಹಿಟ್ಟು
  2. 1 ಕಟ್ಟು ಮೆಂತೆ ಸೊಪ್ಪು
  3. 1/2 ಕಪ್ ತೆಳು ಅವಲಕ್ಕಿ  (ಬೇಕಾದಲ್ಲಿ)
  4. 1 ದೊಡ್ಡ ಚಮಚ ಸಾರಿನ ಪುಡಿ (ರಸಂ ಪೌಡರ್)
  5. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  6. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  7. 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  8. ಉಪ್ಪು ರುಚಿಗೆ ತಕ್ಕಂತೆ
  9. ಎಣ್ಣೆ ದೋಸೆ ಮಾಡಲು

ಕೆಂಪು ಖಾರ ದೋಸೆ ಮಾಡುವ ವಿಧಾನ:

  1. ಮೆಂತೆ ಸೊಪ್ಪನ್ನು ಆರಿಸಿ, ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೊಳೆದು, ಚೆನ್ನಾಗಿ ಹಿಸುಕಿ ತೆಳ್ಳಗಿನ ಪೇಸ್ಟ್ ಮಾಡಿಕೊಳ್ಳಿ.   
  3. ಅಕ್ಕಿ ಹಿಟ್ಟು, ರಸಂ ಪೌಡರ್ ಮತ್ತು ಅಚ್ಚಖಾರದ ಪುಡಿ ಸೇರಿಸಿ. 
  4. ಉಪ್ಪು ಹುಳಿ ಮತ್ತು ಬೆಲ್ಲ ಹಾಕಿ. 
  5. ಅವಲಕ್ಕಿ ಪೇಸ್ಟ್ ಅನ್ನು ಸೇರಿಸಿ. 
  6. ಸುಮಾರು ಒಂದು ಕಪ್ ನೀರು ಸೇರಿಸಿ, ಹಿಟ್ಟು ತಯಾರಿಸಿಕೊಳ್ಳಿ. 
  7. ಕತ್ತರಿಸಿದ ಮೆಂತೆ ಸೊಪ್ಪು ಹಾಕಿ ಕಲಸಿ, ದೋಸೆ ಹಿಟ್ಟು ತಯಾರಿಸಿಕೊಳ್ಳಿ.  
  8. ದೋಸೆ ಕಾವಲಿ ಬಿಸಿ ಮಾಡಿ, ದೋಸೆ ಮಾಡಿ.
  9. ಮೇಲಿನಿಂದ ಎಣ್ಣೆ ಹಾಕಿ, ಇನ್ನೊಂದು ಬದಿಯೂ ಖಾಯಿಸಿ. 
  10. ಬೆಣ್ಣೆ ಅಥವಾ ಚಟ್ನಿಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 15, 2021

Hurali kalu dose recipe in Kannada | ಹುರುಳಿಕಾಳು ದೋಸೆ ಮಾಡುವ ವಿಧಾನ

 

Hurali kalu dose recipe in Kannada

Hurali kalu dose recipe in Kannada | ಹುರುಳಿಕಾಳು ದೋಸೆ ಮಾಡುವ ವಿಧಾನ

ಹುರುಳಿಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1/4 ಕಪ್ ಹುರುಳಿಕಾಳು
  3. 1/2 ಟೀಸ್ಪೂನ್ ಮೆಂತ್ಯ
  4. 1/4 ಕಪ್ ಅವಲಕ್ಕಿ
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. ಉಪ್ಪು ರುಚಿಗೆ ತಕ್ಕಷ್ಟು.

ಹುರುಳಿಕಾಳು ದೋಸೆ ಮಾಡುವ ವಿಧಾನ:

  1. ಅಕ್ಕಿ, ಹುರುಳಿಕಾಳು, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ಅವಲಕ್ಕಿಯನ್ನು ಅರೆಯುವ ಹತ್ತು ನಿಮಿಷ ಮೊದಲು ನೆನೆಸಿದರೂ ಸಾಕು. 
  2. ನೆನೆಸಿದ ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  4. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  5. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  6. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  7. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  8. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಸೆಪ್ಟೆಂಬರ್ 3, 2021

Bele kadubu recipe in Kannada | ಬೇಳೆ ಕಡುಬು ಮಾಡುವ ವಿಧಾನ

 

Bele kadubu recipe in Kannada

Bele kadubu recipe in Kannada | ಬೇಳೆ ಕಡುಬು ಮಾಡುವ ವಿಧಾನ 

ಬೇಳೆ ಕಡುಬು ವಿಡಿಯೋ

ಚಪಾತಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿಹಿಟ್ಟು
  2. 1/4 ಕಪ್ ನೀರು
  3. 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ತೊಗರಿಬೇಳೆ
  2. 2 ಟೇಬಲ್ ಚಮಚ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 1 ಹಸಿಮೆಣಸಿನಕಾಯಿ
  6. 1 ಈರುಳ್ಳಿ
  7. 1 ಟೊಮೇಟೊ
  8. ಚಿಟಿಕೆ ಅರಿಶಿನ 
  9. ಚಿಟಿಕೆ ಇಂಗು
  10. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 2 ಟೇಬಲ್ ಚಮಚ ತೆಂಗಿನತುರಿ
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ಉಪ್ಪು ರುಚಿಗೆ ತಕ್ಕಂತೆ

ಬೇಳೆ ಕಡುಬು ಮಾಡುವ ವಿಧಾನ:

  1. ತೊಗರಿಬೇಳೆಯನ್ನು, ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
  3. ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  4. ಹುರಿಯುವಾಗ ಅರಿಶಿನ ಮತ್ತು ಇಂಗು ಸೇರಿಸಿ. 
  5. ನಂತರ ಕತ್ತರಿಸದ ಟೊಮೇಟೊ ಹಾಕಿ ಹುರಿಯಿರಿ. 
  6. ಹುರಿಯುವಾಗ ಉಪ್ಪು, ಅಚ್ಚಖಾರದಪುಡಿ ಮತ್ತು ಗರಂ ಮಸಾಲಾ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.  
  7. ಬೇಯಿಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ.  
  8. ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
  9. ತೆಳ್ಳಗೆ ಚಪಾತಿ ಮಾಡಿ, ಕತ್ತರಿಸಿ. 
  10. ಕುದಿಯುತ್ತಿರುವ ಮಸಾಲೆಗೆ ಹಾಕಿ.
  11. ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  12. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ.  
  13. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಸಿಹಿಯನ್ನು ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.  
  14. ಕುದಿಸಿ, ಸ್ಟವ್ ಆಫ್ ಮಾಡಿ, ಬಿಸಿ ಬಿಸಿಯಾಗಿ ಬಡಿಸಿ. 
Related Posts Plugin for WordPress, Blogger...