Halbai recipe in Kannada | ಹಾಲುಬಾಯಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ದೋಸೆ ಅಕ್ಕಿ
- 1/2 ಕಪ್ ತೆಂಗಿನ ತುರಿ
- 1/2 ಕಪ್ ಹೆಚ್ಚಿದ ಮುಳ್ಳು ಸೌತೆಕಾಯಿ (ಬೇಕಾದಲ್ಲಿ)
- 1 ಕಪ್ ಬೆಲ್ಲ
- 2 ಟೇಬಲ್ ಸ್ಪೂನ್ ತುಪ್ಪ
- 1/4 ಟೀಸ್ಪೂನ್ ಉಪ್ಪು
- 3 ಕಪ್ ನೀರು (ಅರೆಯಲು ಬಳಸಿದ ನೀರನ್ನು ಸೇರಿಸಿದೆ)
ಹಾಲುಬಾಯಿ ಮಾಡುವ ವಿಧಾನ :
- ಅಕ್ಕಿಯನ್ನು ತೊಳೆದು 2-3 ಗಂಟೆಗಳ ಕಾಲ ನೆನೆಯಲು ಬಿಡಿ.
- ನೆನೆಸಿದ ಅಕ್ಕಿ, ತೆಂಗಿನ ತುರಿ ಮತ್ತು ಹೆಚ್ಚಿದ ಮುಳ್ಳು ಸೌತೆಕಾಯಿಯನ್ನು ಬೇಕಾದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.
- ಅರೆದ ನಂತರ ಒಂದು ದಪ್ಪ ತಳದ ಬಾಣಲೆಗೆ ಹಿಟ್ಟನ್ನು ಸುರಿಯಿರಿ. ಉಳಿದ ನೀರನ್ನು ಸೇರಿಸಿ ತೆಳುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
- ಬೆಲ್ಲ ಮತ್ತು ಉಪ್ಪು ಹಾಕಿ.
- ಸ್ಟವ್ ಆನ್ ಮಾಡಿ, ಸ್ಟವ್ ಮೇಲಿಟ್ಟು ಮಗುಚಿ.
- ಗಟ್ಟಿಯಾದ ಕೂಡಲೇ ತುಪ್ಪ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
- ಸುಮಾರು ಹತ್ತು ನಿಮಿಷದ ನಂತರ ಹಾಲುಬಾಯಿ ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಹಾಲುಬಾಯಿಯನ್ನು ತುಪ್ಪ ಸವರಿದ ಟ್ರೇ ಗೆ ಸುರಿಯಿರಿ. ಬಿಸಿ ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ