ಸೋಮವಾರ, ಆಗಸ್ಟ್ 29, 2016

Kayi kadubu recipe in Kannada | ಕಾಯಿ ಕಡುಬು ಮಾಡುವ ವಿಧಾನ

Kayi kadubu recipe in Kannada

Kayi kadubu recipe in Kannada | ಕಾಯಿ ಕಡುಬು ಮಾಡುವ ವಿಧಾನ 

 ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ
  4. 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  5. 1 - 2 ಏಲಕ್ಕಿ
  6. 2 ಟೀಸ್ಪೂನ್ ತುಪ್ಪ 
  7. ಉಪ್ಪು ರುಚಿಗೆ ತಕ್ಕಷ್ಟು
  8. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ

ಕಾಯಿ ಕಡುಬು ಮಾಡುವ ವಿಧಾನ :

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  3. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಮಿಕ್ಸಿ ಜಾರಿಗೆ ತೆಂಗಿನ ತುರಿ ಮತ್ತು ಏಲಕ್ಕಿ ಹಾಕಿ ನೀರು ಹಾಕದೆ ಪುಡಿ ಮಾಡಿ. 
  5. ಪುಡಿಮಾಡಿದ ತೆಂಗಿನ ತುರಿ ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಹೂರಣ ಸಿದ್ಧ ಮಾಡಿಕೊಳ್ಳಿ. 
  6. ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  7. ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ತುಪ್ಪ ಸವರಿದ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ ಮೇಲೆ ವೃತ್ತಾಕಾರವಾಗಿ ತಟ್ಟಿ ಅಥವಾ ಲಟ್ಟಿಸಿ. 
  8. ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ. 
  9. ಸೆಕೆಯಲ್ಲಿ (ಆವಿಯಲ್ಲಿ) ಬಾಳೆ ಎಲೆ ಅಥವಾ ತುಪ್ಪ ಹಚ್ಚಿದ ಪ್ಲೇಟ್ ನಲ್ಲಿಟ್ಟು 8 - 10 ನಿಮಿಷ ಬೇಯಿಸಿ. 
  10. ಬೇಕಾದಲ್ಲಿ ಮೋದಕದ ಆಕಾರದಲ್ಲೂ ಮಾಡ ಬಹುದು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...