ಸೋಮವಾರ, ಏಪ್ರಿಲ್ 30, 2018

Mavina hannina sasive recipe in kannada | ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ

Mavina hannina sasive recipe in kannada

Mavina hannina sasive recipe in kannada | ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 - 5 ಮಾವಿನಹಣ್ಣು (ಗಾತ್ರ ಅವಲಂಬಿಸಿದೆ)
  2. 1/4 - 1/2 ಕಪ್ ಬೆಲ್ಲ (ಮಾವಿನ ಹುಳಿ ಅವಲಂಬಿಸಿ)
  3. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 2 - 4 ಒಣಮೆಣಸಿನಕಾಯಿ
  3. 1/2 ಕಪ್ ತೆಂಗಿನತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ

ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ:

  1. ಮಾವಿನಹಣ್ಣು ತೊಳೆದು, ಸಿಪ್ಪೆ ಸುಲಿಯಿರಿ. 
  2. ಆಮೇಲೆ ಕಿವುಚಿ, ರಸ ತೆಗೆದಿಟ್ಟುಕೊಳ್ಳಿ. ಗೊರಟು ಬೇಕಾದರೆ ಹಾಕಬಹುದು. 
  3. ನಂತ್ರ ಒಂದು ಪಾತ್ರೆಯಲ್ಲಿ ಬೆಲ್ಲ ಪುಡಿ ಮಾಡಿ, ಅದಕ್ಕೆ ತೆಗೆದಿಟ್ಟ ಮಾವಿನ ರಸ ಹಾಕಿ. 
  4. ಸಾಸಿವೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಮಾವಿನರಸ ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ. 
  6. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಕಲಸಿ.
  7. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಏಪ್ರಿಲ್ 26, 2018

Khara bath recipe in Kannada | ಖಾರ ಬಾತ್ ಮಾಡುವ ವಿಧಾನ

Khara bath recipe in Kannada

Khara bath recipe in Kannada | ಖಾರ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಬನ್ಸಿ ರವೇ
  2. 2.5 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ
  7. 1 ಟೊಮ್ಯಾಟೋ 
  8. 1/2 ದೊಣ್ಣೆಮೆಣಸು
  9. 1 ಸಣ್ಣ ಕ್ಯಾರಟ್
  10. 5 - 6 ಬೀನ್ಸ್
  11. 1/4 ಕಪ್ ಹಸಿ ಬಟಾಣಿ
  12. 1-2 ಹಸಿರು ಮೆಣಸಿನಕಾಯಿ
  13. 4-5 ಕರಿ ಬೇವಿನ ಎಲೆ
  14. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  15. 1/4 ಟೀಸ್ಪೂನ್ ಅರಶಿನ ಪುಡಿ
  16. 2 - 3 ವಾಂಗೀಬಾತ್ ಪುಡಿ
  17. 6-8 ಟೀಸ್ಪೂನ್ ಅಡುಗೆ ಎಣ್ಣೆ
  18. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  19. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  20. 1/2 ಕಪ್ ತೆಂಗಿನತುರಿ

ಬೇಕಾಗುವ ಪದಾರ್ಥಗಳು: (ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ)

  1. 1.5 ಟೀಸ್ಪೂನ್ ಕೊತ್ತಂಬರಿ ಬೀಜ
  2. 1 ಟೀಸ್ಪೂನ್ ಉದ್ದಿನಬೇಳೆ
  3. 1 ಟೀಸ್ಪೂನ್ ಕಡ್ಲೆಬೇಳೆ
  4. 1/4 ಟೀಸ್ಪೂನ್ ಗಸಗಸೆ
  5. 4 - 5 ಲವಂಗ
  6. 1/4 ಬೆರಳುದ್ದ ಚಕ್ಕೆ
  7. 1/2 ಕಪ್ ಕೊಬ್ಬರಿ

ಖಾರ ಬಾತ್ ಮಾಡುವ ವಿಧಾನ:

  1. ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ, ಎಲ್ಲ ಪದಾರ್ಥಗಳನ್ನು ಹುರಿದು, ಕೊಬ್ಬರಿಯೊಂದಿಗೆ ಪುಡಿ ಮಾಡಿ. 
  2. ತರಕಾರಿಗಳನ್ನು ತೊಳೆದು, ಕತ್ತರಿಸಿಟ್ಟುಕೊಳ್ಳಿ. ಹಾಗೇ ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  3. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್, ಕ್ಯಾರಟ್  ಮತ್ತು ಹಸಿ ಬಟಾಣಿಯನ್ನು ಸ್ವಲ್ಪ ನೀರಿನಲ್ಲಿ (ಸುಮಾರು ಅರ್ಧ ಕಪ್) ಬೇಯಿಸಿಕೊಳ್ಳಿ. 
  4. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. 
  6. ನಂತರ ಈರುಳ್ಳಿ ಮತ್ತು ದೊಣ್ಣೆಮೆಣಸು ಹಾಕಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  7. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. 
  8. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  9. ಸುಮಾರು 2 ಕಪ್ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ರವೇ (ದೊಡ್ಡ ರವೇ) ಹಾಕಿ ಮಗುಚಿ. 
  10. ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  11. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ. ಸ್ಟವ್ ಆಫ್ ಮಾಡಿ, ಬಡಿಸಿ.


Genasina sasive recipe in kannada | ಗೆಣಸಿನ ಸಾಸಿವೆ ಮಾಡುವ ವಿಧಾನ

Genasina sasive recipe in kannada

Genasina sasive recipe in kannada | ಗೆಣಸಿನ ಸಾಸಿವೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸಿಹಿಗೆಣಸು
  2. 1/2 ಕಪ್ ಮೊಸರು
  3. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1/4 ಕಪ್ ತೆಂಗಿನತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ

ಗೆಣಸಿನ ಸಾಸಿವೆ ಮಾಡುವ ವಿಧಾನ:

  1. ಗೆಣಸನ್ನು ತೊಳೆದು ಬೇಯಿಸಿ.
  2. ನಂತರ ಸಿಪ್ಪೆ ತೆಗೆದು, ಚೆನ್ನಾಗಿ ಹಿಸುಕಿ ಅಥವಾ ಮ್ಯಾಶ್ ಮಾಡಿ. 
  3. ಸಾಸಿವೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  4. ಅರೆದ ಮಿಶ್ರಣವನ್ನು ಹಿಸುಕಿದ ಗೆಣಸಿಗೆ ಹಾಕಿ. 
  5. ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ. ಚೆನ್ನಾಗಿ ಕಲಸಿ. ಹೆಚ್ಚಿನ ಖಾರ ಬೇಕಾದಲ್ಲಿ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ ಸೇರಿಸಬಹುದು. 
  6. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಏಪ್ರಿಲ್ 23, 2018

Veg lollipop recipe in Kannada | ವೆಜ್ ಲಾಲಿಪಾಪ್ ಮಾಡುವ ವಿಧಾನ

Veg lollipop recipe in Kannada

Veg lollipop recipe in Kannada | ವೆಜ್ ಲಾಲಿಪಾಪ್ ಮಾಡುವ ವಿಧಾನ 

ವೆಜ್ ಲಾಲಿಪಾಪ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಆಲೂಗಡ್ಡೆ
  2. 1 ಸಣ್ಣ ಕ್ಯಾರಟ್ ತುರಿದಿದ್ದು
  3. 1/2 ದೊಣ್ಣೆಮೆಣಸು ಸಣ್ಣಗೆ ಹೆಚ್ಚಿದ್ದು
  4. 1/2 ಟೀಸ್ಪೂನ್ ಜೀರಿಗೆ 
  5. 1/2 ಈರುಳ್ಳಿ 
  6. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ
  7. 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು 
  8. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ 
  9. 1/2 ಟೀಸ್ಪೂನ್ ಕೊತ್ತಂಬರಿ ಪುಡಿ 
  10. 1/4 ಟೀಸ್ಪೂನ್ ಜೀರಿಗೆ ಪುಡಿ
  11. 1/4 ಟೀಸ್ಪೂನ್ ಗರಂ ಮಸಾಲಾ 
  12. ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ  ಅಥವಾ ಸ್ವಲ್ಪ ನಿಂಬೆ ರಸ
  13. ದೊಡ್ಡ ಚಿಟಿಕೆ ಅರಿಶಿನ 
  14. ದೊಡ್ಡ ಚಿಟಿಕೆ ಚಾಟ್ ಮಸಾಲಾ
  15. 3 ಬ್ರೆಡ್
  16. ಉಪ್ಪು ರುಚಿಗೆ ತಕ್ಕಷ್ಟು 
  17. ಎಣ್ಣೆ ಕಾಯಿಸಲು

ವೆಜ್ ಲಾಲಿಪಾಪ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆಯಿರಿ. 
  2.  2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಜೀರಿಗೆ ಹಾಕಿ. 
  3. ಜೀರಿಗೆ ಸಿಡಿದ ಮೇಲೆ ನುಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ ಸೇರಿಸಿ. 
  4. ಕೂಡಲೇ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. 
  5. ತುರಿದ ಕ್ಯಾರಟ್ ಮತ್ತು ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು ಸೇರಿಸಿ ಹುರಿಯಿರಿ. 
  6. ನಂತ್ರ ಮಸಾಲೆ ಪುಡಿಗಳನ್ನು ಸೇರಿಸಿ. ನಾನು ಇಲ್ಲಿ ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಮಾವಿನಕಾಯಿ ಪುಡಿ, ಅರಿಶಿನ, ಚಾಟ್ ಮಸಾಲಾ ಮತ್ತು ಉಪ್ಪು ಸೇರಿಸಿದ್ದೇನೆ. ಸ್ಟವ್ ಆಫ್ ಮಾಡಿ. 
  7. ಅದಕ್ಕೆ ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು ಸೇರಿಸಿ.
  8. ಒಂದು ಬ್ರೆಡ್ ನ್ನು ನೀರಿನಲ್ಲಿ ಹಾಕಿ, ಹಿಂಡಿ ತೆಗೆದು ಸೇರಿಸಿ ಚೆನ್ನಾಗಿ ಕಲಸಿ. 
  9. ಸಣ್ಣ ನಿಂಬೆಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. 
  10. ಉಳಿದ ಎರಡು ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟು ಕೊಳ್ಳಿ. 
  11. ವೆಜ್ ಲಾಲಿಪಾಪ್ ಉಂಡೆಗಳನ್ನು ಆ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. 
  12. ಗುಳಿಯಪ್ಪ ಅಥವಾ ಪಡ್ಡು ಪಾನ್ ನ್ನು ಬಿಸಿಮಾಡಿ, ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ. 
  13. ತಯಾರಿಸದ ವೆಜ್ ಲಾಲಿಪಾಪ್ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತ ಬೇಯಿಸಿ. ಅಗತ್ಯವಿದ್ದಷ್ಟು ಎಣ್ಣೆ ಹಾಕಿ ಕಾಯಿಸಿ. 
  14. ಟೂತ್ ಪಿಕ್ ಚುಚ್ಚಿ. ಬಿಸಿ ಇರುವಾಗಲೇ ಟೊಮೇಟೊ ಸಾಸ್ ನೊಂದಿಗೆ ಬಡಿಸಿ. 


ಶುಕ್ರವಾರ, ಏಪ್ರಿಲ್ 20, 2018

Hagalakai pakoda recipe in kannada | ಹಾಗಲಕಾಯಿ ಪಕೋಡ ಮಾಡುವ ವಿಧಾನ

Hagalakai pakoda recipe in kannada

Hagalakai pakoda recipe in kannada | ಹಾಗಲಕಾಯಿ ಪಕೋಡ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡಹಾಗಲಕಾಯಿ
  2. 3 ಟೇಬಲ್ ಚಮಚ ಕಡ್ಲೆ ಹಿಟ್ಟು
  3. 1 ಟೇಬಲ್ ಚಮಚ ಅಕ್ಕಿ ಹಿಟ್ಟು
  4. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  5. 1/4 ಟೀಸ್ಪೂನ್ ಇಂಗು
  6. 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
  7. ಉಪ್ಪು ರುಚಿಗೆ ತಕ್ಕಷ್ಟು
  8. ಎಣ್ಣೆ ಖಾಯಿಸಲು ಅಥವಾ ಕರಿಯಲು

ಹಾಗಲಕಾಯಿ ನೆನೆಸಲು ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಅರಿಶಿನ
  2. 1 ಟೀಸ್ಪೂನ್ಉಪ್ಪು
  3. ಅಗತ್ಯವಿದ್ದಷ್ಟು ನೀರು

ಬೇಕಾಗುವ ಪದಾರ್ಥಗಳು: (ಬೇಕಾದಲ್ಲಿ)

  1. 1/4 ಟೀಸ್ಪೂನ್ ಓಮ ಅಥವಾ ಅಜ್ವೈನ್
  2. 1/4 ಟೀಸ್ಪೂನ್ ಜೀರಿಗೆ
  3. ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ
  4. 1/2 ಶುಂಠಿ ಬೆಳ್ಳುಳ್ಳಿ ಪೇಸ್ಟ್

ಹಾಗಲಕಾಯಿ ಪಕೋಡ ಮಾಡುವ ವಿಧಾನ:

  1. ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ನೀರು, ಉಪ್ಪು ಮತ್ತು ಅರಿಶಿನ ಹಾಕಿ. ಕತ್ತರಿಸಿದ ಹಾಗಲಕಾಯಿಯನ್ನು 15 - 20 ನಿಮಿಷ ನೆನೆಸಿಡಿ. 
  3. ನಂತ್ರ ನೀರು ಹಿಂಡಿ ತೆಗೆದಿಡಿ. 
  4. ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ. 
  5. ಅದಕ್ಕೆ ಮೆಣಸಿನ ಪುಡಿ, ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ. ನಿಮ್ಮಿಷ್ಟದ ಬೇರೆ ಪದಾರ್ಥಗಳನ್ನು ಸೇರಿಸಬಹುದು. ಮೇಲಿನ "ಬೇಕಾದಲ್ಲಿ" ಎಂದು ನಮೂದಿಸಿದ ಪಟ್ಟಿ ನೋಡಿ. 
  6. ನಂತರ ಕತ್ತರಿಸಿ, ನೆನೆಸಿದ ಹಾಗಲಕಾಯಿ ಹಾಕಿ. 
  7. ಒಂದೆರಡು ಚಮಚ ನೀರು ಸಿಂಪಡಿಸಿ, ಕಲಸಿಕೊಳ್ಳಿ. ಹೆಚ್ಚು ನೀರು ಬೇಡ. 
  8. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಸ್ವಲ್ಪ ಸ್ವಲ್ಪವಾಗಿ ಬಿಸಿ ಎಣ್ಣೆಗೆ ಹಾಕಿ. ಒಂದರ ಮೇಲೊಂದು ಬೀಳದಂತೆ ಜಾಗ್ರತೆ ವಹಿಸಿ. 
  9. ಸ್ವರ ಅಥವಾ ಗುಳ್ಳೆಗಳು ನಿಲ್ಲುವವರೆಗೆ ಕಾಯಿಸಿ. ಚಹಾ ಅಥವಾ ಊಟದೊಂದಿಗೆ ಬಡಿಸಿ. 

ಬುಧವಾರ, ಏಪ್ರಿಲ್ 18, 2018

Tomato poori recipe in Kannada | ಟೊಮೇಟೊ ಪೂರಿ ಮಾಡುವ ವಿಧಾನ


Tomato poori recipe in Kannada

Tomato poori recipe in Kannada | ಟೊಮೇಟೊ ಪೂರಿ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು 
  2. 2 ಮಧ್ಯಮ ಗಾತ್ರದ ಟೊಮೇಟೊ
  3. 2 ಟೇಬಲ್ ಚಮಚ ಸಣ್ಣ ರವೆ
  4. 1 ಚಮಚ ತುಪ್ಪ
  5. 1/4 ಟೀಸ್ಪೂನ್ ಓಮಕಾಳು
  6. 1/2 ಟೀಸ್ಪೂನ್ ಅಚ್ಚಖಾರದ ಪುಡಿ 
  7. 1/2 ಟೀಸ್ಪೂನ್ ಕೊತ್ತಂಬರಿ ಪುಡಿ 
  8. 1/4 ಟೀಸ್ಪೂನ್ ಜೀರಿಗೆ ಪುಡಿ 
  9. ದೊಡ್ಡ ಚಿಟಿಕೆ ಗರಂ ಮಸಾಲೆ
  10. ಒಂದು ಚಿಟಿಕೆ ಇಂಗು 
  11. 1 ಟೇಬಲ್ ಸ್ಪೂನ್ ಕತ್ತರಿಸಿದ ಕರಿಬೇವಿನ ಎಲೆ
  12. ಉಪ್ಪು ರುಚಿಗೆ ತಕ್ಕಷ್ಟು
  13. ಎಣ್ಣೆ ಪೂರಿ ಕಾಯಿಸಲು

ಟೊಮೇಟೊ ಪೂರಿ ಮಾಡುವ ವಿಧಾನ:

  1. ಟೊಮ್ಯಾಟೊವನ್ನು ತೊಳೆದು, ಕತ್ತರಿಸಿ, ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. ನೀರು ಸೇರಿಸುವ ಅಗತ್ಯವಿಲ್ಲ. 
  2. ಒಂದು ಅಗಲವಾದ ಬಟ್ಟಲಿಗೆ ಗೋಧಿ ಹಿಟ್ಟು ಮತ್ತು ಸಣ್ಣ ರವೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ರವೆ ಹಾಕುವುದರಿಂದ ಪೂರಿ ಚೆನ್ನಾಗಿ ಉಬ್ಬಿ, ಗರಿ ಗರಿಯಾಗುತ್ತದೆ.  
  3. ನಂತರ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ. 
  4. ಅದಕ್ಕೆ ಓಮಕಾಳು, ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಇಂಗು ಮತ್ತು ಉಪ್ಪು ಸೇರಿಸಿ. ನಿಮ್ಮಿಷ್ಟದ ಮಸಾಲೆ ಪುಡಿಗಳನ್ನು ಸೇರಿಸಬಹುದು. 
  5. ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ. 
  6. ಅರೆದಿಟ್ಟ ಟೊಮೇಟೊ ಹಾಕಿ ಪೂರಿ ಹಿಟ್ಟನ್ನು ತಯಾರಿಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಅಗತ್ಯವಿದ್ದಷ್ಟು ಟೊಮೇಟೊ ಪೇಸ್ಟ್ ಹಾಕಿದರೆ ಸಾಕು. ನೀರು ಸೇರಿಸುವ ಅಗತ್ಯ ಇಲ್ಲ. 
  7. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. 
  8. ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ. 
  9. ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.  
  10. ಎರಡು ಬದಿ ಕಾಯಿಸಿ. ಚಟ್ನಿ ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ. 

ಸೋಮವಾರ, ಏಪ್ರಿಲ್ 16, 2018

Nellikai pudi and thambli recipe in kannada | ನೆಲ್ಲಿಕಾಯಿ ಪುಡಿ ಮತ್ತು ತಂಬ್ಳಿ ಮಾಡುವ ವಿಧಾನ

Nellikai pudi and thambli recipe in kannada

Nellikai pudi and thambli recipe in kannada | ನೆಲ್ಲಿಕಾಯಿ ಪುಡಿ ಮತ್ತು ತಂಬ್ಳಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ನೆಲ್ಲಿಕಾಯಿ ನಿಮ್ಮ ಅಗತ್ಯಕ್ಕೆ ತಕ್ಕಂತೆ
  2. 1/4 ಕಪ್ ತೆಂಗಿನತುರಿ
  3. 1/2 ಕಪ್ ಮೊಸರು
  4. ಅಗತ್ಯವಿದ್ದಷ್ಟು ನೀರು
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ


ನೆಲ್ಲಿಕಾಯಿ ಪುಡಿ ಮತ್ತು ತಂಬ್ಳಿ ಮಾಡುವ ವಿಧಾನ:

  1. ನೆಲ್ಲಿಕಾಯಿಯನ್ನು ತೊಳೆದು, ಎರಡು ದಿನ ಬಿಸಿಲಿನಲ್ಲಿ ಒಣಗಿಸಿ.
  2. ಅದು ಮೆತ್ತಗಾದ ಮೇಲೆ, ಕತ್ತರಿಸಿ, ಬೀಜ ತೆಗೆಯಿರಿ.
  3. ಪುನಃ ಒಂದು ದಿನ ಒಣಗಿಸಿ, ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ. 
  4. ಪುನಃ ಗರಿಗರಿಯಾಗುವವರೆಗೆ ಒಣಗಿಸಿ. 
  5. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. 
  6. ಗಾಳಿಯಾಡದ ಡಬ್ಬಕ್ಕೆ ಹಾಕಿ ಎತ್ತಿಡಿ. 
  7. ತಂಬ್ಳಿ ಮಾಡಲು, ತೆಂಗಿನ ತುರಿ ಮತ್ತು ೧ - ೨ ಚಮಚ ನೆಲ್ಲಿಕಾಯಿ ಪುಡಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ. 
  8. ಉಪ್ಪು ಮತ್ತು ಮಜ್ಜಿಗೆ (ಅಥವಾ ಮೊಸರು) ಸೇರಿಸಿ. 
  9. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಏಪ್ರಿಲ್ 12, 2018

Ranjaka recipe in Kannada | ರಂಜಕ ಮಾಡುವ ವಿಧಾನ

Ranjaka recipe in Kannada

Ranjaka recipe in Kannada | ರಂಜಕ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ಕೆಂಪು ಹಣ್ಣುಮೆಣಸಿನಕಾಯಿ
  2. 1/4 ಕಪ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಂತೆ
  3. 4 ನಿಂಬೆಹಣ್ಣು
  4. 2 ಟೇಬಲ್ ಚಮಚ ಎಣ್ಣೆ
  5. 1 ಚಮಚ ಸಾಸಿವೆ
  6. 2 ಚಮಚ ಮೆಂತೆ
  7. 1 ಚಮಚ ಇಂಗು

ರಂಜಕ ಮಾಡುವ ವಿಧಾನ:

  1. ಕೆಂಪು ಹಣ್ಣುಮೆಣಸಿನಕಾಯಿಯನ್ನು ತೊಳೆದು, ತೊಟ್ಟು ತೆಗೆದು ನೀರಾರಿಸಿ. 
  2. ಒಂದು ಪ್ಯಾನ್ ಗೆ ಎಣ್ಣೆ ಹಾಕಿ ,ಅದರಲ್ಲಿ ಸಾಸಿವೆ ,ಇಂಗು ,ಮೆಂತೆಕಾಳು ಹಾಕಿ ಒಗ್ಗರಣೆ ಮಾಡಿ ತಣ್ಣಗಾಗಲು ಬಿಡಿ.
  3. ನಿಂಬೆಹಣ್ಣು ಕತ್ತರಿಸಿ ರಸ ತೆಗೆದಿಟ್ಟುಕೊಳ್ಳಿ. 
  4. ಮೆಣಸಿನಕಾಯಿಯನ್ನು 3 - 4 ತುಂಡು ಮಾಡಿಟ್ಟುಕೊಳ್ಳಿ. 
  5. ಮಿಕ್ಸಿ ಅಥವಾ ಗ್ರೈಂಡರ್ ಗೆ ಕತ್ತರಿಸಿದ ಹಣ್ಣುಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಅರೆಯಿರಿ. 
  6. ಅರೆಯುವಾಗ ಬೇಕಾದಲ್ಲಿ ನಿಂಬೆರಸ ಸೇರಿಸಿ. ಆದರೆ ನೀರು ಸೇರಿಸಬೇಡಿ. 
  7. ಕೊನೆಯಲ್ಲಿ ಒಗ್ಗರಣೆ ಸೇರಿಸಿ ಪುನಃ ಅರೆಯಿರಿ.
  8. ಒಂದು ಗಾಜಿನ ಬಾಟಲಿ ಗೆ ಹಾಕಿ ಫ್ರಿಡ್ಜ್ ನಲ್ಲಿ ಇಡಿ. 
  9. 4-5 ದಿನ ಬಿಟ್ಟು ಚಪಾತಿ, ರೊಟ್ಟಿ ಅಥವಾ ಅನ್ನದೊಂದಿಗೆ ಸವಿಯಿರಿ.

ಮಂಗಳವಾರ, ಏಪ್ರಿಲ್ 10, 2018

Aloo chips recipe in Kannada | ಬಿಸಿಲಿನಲ್ಲಿ ಒಣಗಿಸಿದ ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ

Aloo chips recipe in Kannada

Aloo chips recipe in Kannada | ಬಿಸಿಲಿನಲ್ಲಿ ಒಣಗಿಸಿದ ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ತಾಜಾ ಆಲೂಗಡ್ಡೆ 
  2. ಅಚ್ಚ ಖಾರದ ಪುಡಿ ನಿಮ್ಮ ರುಚಿ ಪ್ರಕಾರ
  3. ಉಪ್ಪು ನಿಮ್ಮ ರುಚಿ ಪ್ರಕಾರ
  4. ಸೈನ್ದವ ಲವಣ ಬೇಕಾದಲ್ಲಿ
  5. ಸ್ವಲ್ಪ ಇಂಗು
  6. ಎಣ್ಣೆ ಕಾಯಿಸಲು

ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ. 
  2. ನಂತರ ಆಲೂಗಡ್ಡೆಯನ್ನು ಸ್ಲಯ್ಸರ್ ಮುಖಾಂತರ ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ. 
  3. ಕತ್ತರಿಸಿದ ನಂತ್ರ ಎರಡರಿಂದ ಮೂರು ಬಾರಿ ನೀರು ಬದಲಾಯಿಸಿ ತೊಳೆಯಿರಿ. 
  4. ಆಮೇಲೆ ಒಂದು ಪಾತ್ರೆಯಲ್ಲಿ ನೀರು ಮತ್ತು ಸ್ವಲ್ಪ ಉಪ್ಪು (ಎರಡು ಆಲೂಗಡ್ಡೆಗೆ ಸುಮಾರು ಒಂದು ಚಮಚ ಉಪ್ಪು) ಹಾಕಿ ಕುದಿಯಲು ಇಡಿ. 
  5. ಕುದಿಯುವ ನೀರಿಗೆ, ಕತ್ತರಿಸಿದ ಆಲೂಗಡ್ಡೆ ಹಾಕಿ ಎರಡರಿಂದ ಮೂರು ನಿಮಿಷ ಕುದಿಸಿ. 
  6. ಸ್ಟವ್ ಆಫ್ ಮಾಡಿ, ನೀರನ್ನು ಬಸಿಯಿರಿ. 
  7. ನಂತ್ರ ಬಟ್ಟೆಯ ಮೇಲೆ ಹರಡಿ, ಬಿಸಿಲಿನಲ್ಲಿ ಗರಿಗರಿಯಾಗುವವರೆಗೆ ಒಣಗಿಸಿ. 
  8. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಣಗಿಸಿದ ಆಲೂಗಡ್ಡೆ ಬಿಲ್ಲೆಗಳನ್ನು ಬಿಸಿ ಎಣ್ಣೆಗೆ ಹಾಕಿ ಕಾಯಿಸಿ. ಬೇಗ ಬೇಗ ಕಾಯಿಸಬೇಕು. ಚಿಪ್ಸ್ ಕಂದು ಬಣ್ಣಕ್ಕೆ ತಿರುಗದಂತೆ ಎಚ್ಚರ ವಹಿಸಿ. 
  9. ಒಂದು ಸಣ್ಣ ಬಟ್ಟಲಿನಲ್ಲಿ ಅಚ್ಚಖಾರದ ಪುಡಿ, ಉಪ್ಪು ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿಟ್ಟುಕೊಳ್ಳಿ. ಬೇಕಾದಲ್ಲಿ ಸೈನ್ದವ ಲವಣ ಮತ್ತು ಚಾಟ್ ಮಸಾಲಾ ಬಳಸಬಹುದು. 
  10. ಕಾಯಿಸಿದ ಚಿಪ್ಸ್ ಗೆ, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.

ಮಂಗಳವಾರ, ಏಪ್ರಿಲ್ 3, 2018

Sandige menasu recipe in Kannada | ಸಂಡಿಗೆ ಮೆಣಸು ಮಾಡುವ ವಿಧಾನ

Sandige menasu recipe in Kannada
Sandige menasu recipe in Kannada | ಸಂಡಿಗೆ ಮೆಣಸು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 1/4 kg ಹಸಿಮೆಣಸಿನಕಾಯಿ
  2. 1/4 ಟೀಸ್ಪೂನ್ ಇಂಗು
  3. 2.5 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
  4. 1/2 ಕಪ್ ಹುಳಿ ಮಜ್ಜಿಗೆ

ಸಂಡಿಗೆ ಮೆಣಸು ಮಾಡುವ ವಿಧಾನ:

  1. ಹಸಿಮೆಣಸಿನಕಾಯಿಯನ್ನು ತೊಳೆದು, ತೊಟ್ಟನ್ನು ತೆಗೆದು, ಸಣ್ಣದಾಗಿ ಸೀಳಿ. 
  2. ಒಂದು ಪಾತ್ರೆಯಲ್ಲಿ ನೀರು ಮತ್ತು ಎರಡು ಚಮಚದಷ್ಟು ಉಪ್ಪು ಹಾಕಿ ಉಪ್ಪು ಹಾಕಿ ಕುದಿಸಿ. 
  3. ಕುದಿಯುವ ನೀರಿಗೆ ಸೀಳಿದ ಹಸಿಮೆಣಸಿನಕಾಯಿ ಹಾಕಿ, ಒಮ್ಮೆ ಮಗುಚಿ, ಸ್ಟವ್ ಆಫ್ ಮಾಡಿ. 
  4. ಸುಮಾರು ಐದು ನಿಮಿಷದ ನಂತರ, ನೀರನ್ನು ಬಸಿದು ತೆಗೆಯಿರಿ.
  5. ಬಿಸಿಲಿನಲ್ಲಿ ಸುಮಾರು ಮೂರು ದಿನಗಳ ಕಾಲ ಚೆನ್ನಾಗಿ ಒಣಗಿಸಿ. 
  6. ನಂತರ ಒಂದು ಪಾತ್ರೆಯಲ್ಲಿ, ಹುಳಿ ಮಜ್ಜಿಗೆ, ಅರ್ಧ ಚಮಚ ಉಪ್ಪು ಮತ್ತು ಇಂಗನ್ನು ಹಾಕಿ ಕಲಸಿ. 
  7. ಒಣಗಿಸಿದ ಹಸಿಮೆಣಸಿನಕಾಯಿ ಹಾಕಿ, ರಾತ್ರೆಯಿಡೀ ನೆನೆಯಲು ಬಿಡಿ. ಒಂದೆರಡು ಬಾರಿ ಮಗುಚಿ. 
  8. ಮರುದಿವಸ ಪುನಃ ಮಗುಚಿ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು ಅಥವಾ ಒಗ್ಗರಣೆಗೂ ಹಾಕಬಹುದು. 

ಸೋಮವಾರ, ಏಪ್ರಿಲ್ 2, 2018

Cabbage ricebath recipe in Kannada | ಕೋಸು ರೈಸ್ ಬಾತ್ ಮಾಡುವ ವಿಧಾನ

Cabbage ricebath recipe in Kannada

Cabbage ricebath recipe in Kannada | ಕೋಸು ರೈಸ್ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 2 ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು
  3. 4 ಟೇಬಲ್ ಚಮಚ ಅಡುಗೆ ಎಣ್ಣೆ 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 1 ಟೀಸ್ಪೂನ್ ಕಡಲೆಬೇಳೆ 
  7. 4 - 5 ಕರಿಬೇವಿನ ಎಲೆ 
  8. 7 - 8 ಗೋಡಂಬಿ
  9. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  10. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
  11. 1/4 ಟೀಸ್ಪೂನ್ ಅರಶಿನ ಪುಡಿ
  12. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 4 ಟೀಸ್ಪೂನ್ ಕೊತ್ತಂಬರಿ ಬೀಜ
  5. ಅರ್ಧ ಬೆರಳುದ್ದ ಚಕ್ಕೆ 
  6. 5 - 6 ಲವಂಗ 
  7. 1/4 ಟೀಸ್ಪೂನ್ ಗಸಗಸೆ
  8. 2 - 4 ಟೇಬಲ್ ಚಮಚ ತೆಂಗಿನ ತುರಿ

ಕೋಸು ರೈಸ್ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  2. ಎಲೆಕೋಸನ್ನು ತೊಳೆದು, ಸಣ್ಣಗೆ ಕತ್ತರಿಸಿಟ್ಟು ಕೊಳ್ಳಿ. 
  3. ಮಸಾಲೆ ಪುಡಿಗೆ, ಒಂದು ಬಾಣಲೆಯಲ್ಲಿ 2 - 4 ಕೆಂಪು ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ, 2 ಟೀಸ್ಪೂನ್ ಕಡಲೆಬೇಳೆ, 4 ಟೀಸ್ಪೂನ್ ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆ ಹುರಿಯಿರಿ. 
  4. ಅದಕ್ಕೆ ಚಕ್ಕೆ, ಲವಂಗ ಮತ್ತು ಗಸಗಸೆ ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ. 
  5. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. ಇದರ ಬದಲಾಗಿ ವಾಂಗೀಬಾತ್ ಪುಡಿ ಸಹ ಉಪಯೋಗಿಸಬಹುದು. 
  6. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  7. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬೇಕಾದಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಬಹುದು. 
  8. ಅರಿಶಿನ ಮತ್ತು ಇಂಗನ್ನು ಸೇರಿಸಿ. 
  9. ನಂತರ ಹೆಚ್ಚಿದ ಎಲೆಕೋಸು ಒಂದೆರಡು ನಿಮಿಷ ಹುರಿಯಿರಿ. 
  10. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
  11. ಅಗತ್ಯವಿದ್ದಷ್ಟು ನೀರು ಸೇರಿಸಿ ಕೋಸನ್ನು ಮೆತ್ತಗೆ ಬೇಯಿಸಿಕೊಳ್ಳಿ. 
  12. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. (ವಾಂಗೀಬಾತ್ ಪೌಡರ್ ಹಾಕುವುದಾದಲ್ಲಿ ಸ್ವಲ್ಪ ಕಾಯಿ ತುರಿಯನ್ನೂ ಹಾಕಿ). ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  13. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.
Related Posts Plugin for WordPress, Blogger...