Bangalore style coconut chutney | ಬೆಂಗಳೂರು ಶೈಲಿಯ ಕಾಯಿ ಚಟ್ನಿ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ತೆಂಗಿನ ತುರಿ
- 2 - 4 ಹಸಿರು ಮೆಣಸಿನಕಾಯಿ
- 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
- 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡ್ಲೆ ಪಪ್ಪು
- ಸ್ವಲ್ಪ ಕೊತಂಬರಿ ಸೊಪ್ಪು
- ನಾಲ್ಕು ಕರಿಬೇವು
- 2 ಎಸಳು ಬೆಳ್ಳುಳ್ಳಿ
- ಸ್ವಲ್ಪ ಹುಣಿಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟಿಸ್ಪೂನ್ ಎಣ್ಣೆ
- 4 ಕರಿಬೇವಿನ ಎಲೆ
- 1/4 ಟಿಸ್ಪೂನ್ ಸಾಸಿವೆ
- ಒಂದು ಚಿಟಿಕೆ ಇಂಗು
ಬೆಂಗಳೂರು ಶೈಲಿಯ ಕಾಯಿ ಚಟ್ನಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ನೆಲಗಡಲೆ ಅಥವಾ ಶೇಂಗಾವನ್ನು ಹುರಿಯಿರಿ.
- ನಂತರ ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಹುರಿದ ನೆಲಗಡಲೆ, ಹುರಿಗಡಲೆ, ಹಸಿರುಮೆಣಸಿನ ಕಾಯಿ, ಕೊತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಉಪ್ಪು ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ