ಗುರುವಾರ, ಮೇ 30, 2019

Ragi dose recipe in Kannada | ರಾಗಿ ದೋಸೆ ಮಾಡುವ ವಿಧಾನ

Ragi dose recipe in Kannada

Ragi dose recipe in Kannada | ರಾಗಿ ದೋಸೆ ಮಾಡುವ ವಿಧಾನ

ರಾಗಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 3/4 ಕಪ್ ರಾಗಿ 
  2. 1/4 ಕಪ್ ದೋಸೆ ಅಕ್ಕಿ
  3. 1/4 ಕಪ್ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 - 1/2 ಕಪ್ ತೆಳು ಅವಲಕ್ಕಿ
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ರಾಗಿ ದೋಸೆ ಮಾಡುವ ವಿಧಾನ:

  1. ರಾಗಿ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ರಾಗಿ ಹಿಟ್ಟು ಬಳಸುತ್ತೀರಾದಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ ನೆನೆಸಿ, ಅರೆದ ಮೇಲೆ ಸೇರಿಸಬಹುದು. 
  2. ನೆನೆಸಿದ ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಅವಲಕ್ಕಿ ತೊಳೆದು ಸೇರಿಸಿ. ಗಟ್ಟಿ ಅವಲಕ್ಕಿ ಆದಲ್ಲಿ, ೧೦ ನಿಮಿಷ ನೆನೆಸಿ ಸೇರಿಸಿ. 
  4. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  6. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  8. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  9. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಮೇ 27, 2019

Custard powder pudding recipe in Kannada | ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ

Custard powder pudding recipe in Kannada

Custard powder pudding recipe in Kannada | ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ

ಕಸ್ಟರ್ಡ್ ಪೌಡರ್ ಪುಡ್ಡಿಂಗ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್
  2. 3 ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  3. 1 ಕಪ್ ಹಾಲು 
  4. 1 ಚಮಚ ಬೆಣ್ಣೆ
  5. 1 ಕಪ್ ಹಣ್ಣು ಬಡಿಸಲು

ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
  2. ಅದಕ್ಕೆ ಅರ್ಧ ಕಪ್ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. 
  3. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ತೆಗೆದುಕೊಳ್ಳಿ. 
  4. ಅದಕ್ಕೆ ಮೂರು ಟೇಬಲ್ ಚಮಚ ಸಕ್ಕರೆ ಹಾಕಿ ಕುದಿಯಲು ಇಡೀ. 
  5. ಹಾಲು ಸ್ವಲ್ಪ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಹಾಲು ಮತ್ತು ಕಸ್ಟರ್ಡ್ ಪೌಡರ್ ನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಗಂಟಿಲ್ಲದಂತೆ ಕಲಸಿಕೊಳ್ಳಿ. 
  6. ಕುದಿಸಿದ ನಂತ್ರ, ಉರಿ ಕಡಿಮೆ ಮಾಡಿ, ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. 
  7. ಸ್ವಲ್ಪ ದಪ್ಪ ಆದಮೇಲೆ ಸ್ಟವ್ ಆಫ್ ಮಾಡಿ. 
  8. ಒಂದು ಚಮಚ ಬೆಣ್ಣೆ ಹಾಕಿ ಕಲಸಿ. 
  9. ಬಿಸಿ ಆರಿದ ಮೇಲೆ ಒಂದು 15 ನಿಮಿಷ ಫ್ರಿಡ್ಜ್ ನಲ್ಲಿಡಿ. 
  10. ತಣ್ಣಗಾದ ಮೇಲೆ, ಕತ್ತರಿಸಿದ ಹಣ್ಣುಗಳಿಂದ ಅಲಂಕರಿಸಿ ಸವಿದು ಆನಂದಿಸಿ. 

ಗುರುವಾರ, ಮೇ 23, 2019

Alugadde masale palya recipe in Kannada | ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ

Alugadde masale palya recipe in Kannada

Alugadde masale palya recipe in Kannada | ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ 

ಆಲೂಗಡ್ಡೆ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 4  ಮಧ್ಯಮ ಗಾತ್ರದ ಆಲೂಗಡ್ಡೆ
  2. 1 ದೊಡ್ಡ ಗಾತ್ರದ ಈರುಳ್ಳಿ
  3. 1 ಟೊಮೇಟೊ
  4. 1/2 ಚಮಚ ಸಾಸಿವೆ 
  5. 1/2 ಚಮಚ ಜೀರಿಗೆ
  6. 1 ಒಣಮೆಣಸು
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 5 - 6 ಕರಿಬೇವಿನ ಎಲೆ
  10. 1 ಟೀಸ್ಪೂನ್ ಕಿಚನ್ ಕಿಂಗ್ ಮಸಾಲಾ (ಅಥವಾ 1/2 ಟೀಸ್ಪೂನ್ ಗರಂ ಮಸಾಲಾ)
  11. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  12. ನಿಮ್ಮ ರುಚಿ ಪ್ರಕಾರ ಉಪ್ಪು 
  13. 2 ಟೇಬಲ್ ಚಮಚ ಅಡುಗೆ ಎಣ್ಣೆ

 ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಆಲೂಗಡ್ಡೆ, ಟೊಮೇಟೊ ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿಕೊಳ್ಳಿ. 
  3. ಸಾಸಿವೆ ಸಿಡಿದ ಮೇಲೆ ಚೂರು ಮಾಡಿದ ಒಣಮೆಣಸು ಸೇರಿಸಿ. 
  4. ಅದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಕಿ. 
  5. ಕರಿಬೇವು, ಅರಿಶಿನ ಮತ್ತು ಇಂಗು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  6.  ನಂತರ ಕತ್ತರಿಸಿದ ಟೊಮೇಟೊ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.
  7. ಆಮೇಲೆ ಕತ್ತರಿಸಿದ ಆಲೂಗಡ್ಡೆ ಹಾಕಿ, ಒಮ್ಮೆ ಮಗುಚಿ.
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  9. ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಆಲೂಗಡ್ಡೆ ಮೆತ್ತಗಾಗುವವರೆಗೆ ಬೇಯಿಸಿ.
  10. ಕೊನೆಯಲ್ಲಿ ಕಿಚನ್ ಕಿಂಗ್ ಮಸಾಲಾ (ಅಥವಾ ಗರಂ ಮಸಾಲಾ) ಮತ್ತು ಅಚ್ಚಖಾರದ ಪುಡಿ ಸೇರಿಸಿ ಮಗುಚಿ. 
  11. ಸ್ಟವ್ ಆಫ್ ಮಾಡಿ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಮೇ 17, 2019

Goddu saaru recipe in Kannada | ಗೊಡ್ಡು ಸಾರು ಮಾಡುವ ವಿಧಾನ

Goddu saaru recipe in Kannada

Goddu saaru recipe in Kannada | ಗೊಡ್ಡು ಸಾರು ಮಾಡುವ ವಿಧಾನ

ಗೊಡ್ಡು ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಟೇಬಲ್ ಚಮಚ ತೊಗರಿಬೇಳೆ
  2. 1 ಟೇಬಲ್ ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
  3. 2 - 4 ಒಣಮೆಣಸಿನಕಾಯಿ
  4. 1/4 ಕಪ್ ತೆಂಗಿನ ತುರಿ
  5. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  6. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  7. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  8. ಚಿಟಿಕೆ ಅರಿಶಿನ
  9. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಒಣಮೆಣಸಿನಕಾಯಿ
  4. ಇಂಗು ಒಂದು ಚಿಟಿಕೆ
  5. 5 - 6 ಕರಿಬೇವಿನ ಎಲೆ
  6. 1 ಟೇಬಲ್ ಚಮಚ ತುಪ್ಪ (ಅಥವಾ ಎಣ್ಣೆ)

 ಗೊಡ್ಡು ಸಾರು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತೊಗರಿಬೇಳೆ, ಕೊತ್ತಂಬರಿ ಬೀಜ ಮತ್ತು ಒಣಮೆಣಸನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿಯಿರಿ.
  2. ಬೇಳೆಗಳು ಕಂದು ಬಣ್ಣ ಬಂದು, ಸುವಾಸನೆ ಬರುವವರೆಗೆ ಹುರಿಯಬೇಕು. 
  3. ಬಿಸಿ ಆರಿದ ಮೇಲೆ, ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ. 
  4. ಆಮೇಲೆ ಅದೇ ಬಾಣಲೆಯಲ್ಲಿ ತುಪ್ಪ (ಅಥವಾ ಎಣ್ಣೆ), 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಒಣಮೆಣಸು, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  5. ಅದಕ್ಕೆ ಉಪ್ಪು, ಬೆಲ್ಲ, ಹುಣಿಸೆ ರಸ, ಚಿಟಿಕೆ ಅರಿಶಿನ ಮತ್ತು ಒಂದು ಲೋಟ ನೀರು ಸೇರಿಸಿ ಕುದಿಸಿ. 
  6. ಅರೆದ ಮಸಾಲೆಯನ್ನು ಸೇರಿಸಿ ಕುದಿಸುವುದನ್ನು ಮುಂದುವರೆಸಿ. 
  7. ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ. 
  8. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಮೇ 14, 2019

Malpuri recipe in Kannada | ಮಾಲ್ಪುರಿ ಮಾಡುವ ವಿಧಾನ

Malpuri recipe in Kannada

Malpuri recipe in Kannada |ಮಾಲ್ಪುರಿ ಮಾಡುವ ವಿಧಾನ

ಮಾಲ್ಪುರಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು
  2. 1/4 ಕಪ್ ಸಕ್ಕರೆ
  3. ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  4. ಒಂದು ಚಿಟಿಕೆ ಹಳದಿ ಬಣ್ಣ ಅಥವಾ ಅರಿಶಿನ
  5. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  6. ಚಿಟಿಕೆ ಅಡುಗೆ ಸೋಡಾ
  7. ನೀರು ಸುಮಾರು ಒಂದು ಲೋಟ
  8. ಎಣ್ಣೆ ಮಾಲ್ಪುರಿ ಕಾಯಿಸಲು

ಮಾಲ್ಪುರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಸಕ್ಕರೆ ಮತ್ತು ಏಲಕ್ಕಿ ಪುಡಿ ತೆಗೆದುಕೊಳ್ಳಿ.
  2. ಅದಕ್ಕೆ ಉಪ್ಪು, ಹಳದಿ ಬಣ್ಣ (ಅಥವಾ ಅರಿಶಿನ) ಮತ್ತು ಅಡುಗೆ ಸೋಡಾ ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ದಪ್ಪ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಸುಮಾರು ಒಂದು ಕಪ್ ನೀರು ಬೇಕಾಗುವುದು. 
  4. ಒಂದು ಘಂಟೆ ಹಿಟ್ಟನ್ನು ಪಕ್ಕಕ್ಕಿಡಿ. 
  5. ಆಮೇಲೆ ಒಂದು ಅಗಲವಾದ ಬಾಣಲೆಯಲ್ಲಿ, ಅಥವಾ ದೋಸೆ ಕಲ್ಲಿನಲ್ಲಿ, ಸ್ವಲ್ಪ ಎಣ್ಣೆ ಬಿಸಿಮಾಡಿ. ಸುಮಾರು ಅರ್ಧ ಸೆಂಟಿಮೀಟರ್ ನಷ್ಟು ಎಣ್ಣೆ ಇದ್ದರೆ ಸಾಕು. 
  6. ನಂತರ ಒಂದು ಸೌಟು ಹಿಟ್ಟು ಸುರಿಯಿರಿ. 
  7. ಅಂಚು ಕಂದು ಬಣ್ಣಕ್ಕೆ ತಿರುಗಿದಾಗ, ಸಟ್ಟುಗದ ಸಹಾಯದಿಂದ ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ. 
  8. ಹೀಗೆ ಎಲ್ಲ ಮಾಲ್ಪುರಿ ಮಾಡಿ. ಸವಿದು ಆನಂದಿಸಿ. 

ಶುಕ್ರವಾರ, ಮೇ 10, 2019

Pav bhaji recipe in Kannada | ಪಾವ್ ಭಾಜಿ ಮಾಡುವ ವಿಧಾನ

Pav bhaji recipe in Kannada

Pav bhaji recipe in Kannada | ಪಾವ್ ಭಾಜಿ ಮಾಡುವ ವಿಧಾನ 

ಪಾವ್ ಭಾಜಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1 ಕ್ಯಾರಟ್
  3. 1/2 ಕಪ್ ನೆನೆಸಿದ ಅಥವಾ ಹಸಿಬಟಾಣಿ
  4. 1 ಸಣ್ಣ ಗಾತ್ರದ ದೊಣ್ಣೆಮೆಣಸು
  5. 2 ಚಮಚ ಸಣ್ಣದಾಗಿ ಕೊಚ್ಚಿದ ಶುಂಠಿ-ಬೆಳ್ಳುಳ್ಳಿ ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 
  6. 1 ದೊಡ್ಡ ಕತ್ತರಿಸಿದ ಈರುಳ್ಳಿ 
  7. 2 ಕತ್ತರಿಸಿದ ಟೊಮೇಟೊ
  8. 2 ಚಿಟಿಕೆ ಅರಿಶಿನ ಪುಡಿ 
  9. 1 ಟೇಬಲ್ ಚಮಚ ಪಾವ್ ಭಾಜಿ ಮಸಾಲಾ
  10. 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಹೊಂದಿಸಿ)
  11. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  12. 2 ಟೇಬಲ್ ಚಮಚ ಅಡುಗೆ ಎಣ್ಣೆ
  13. 1 ಟೇಬಲ್ ಚಮಚ ಬೆಣ್ಣೆ
  14. ಉಪ್ಪು ರುಚಿಗೆ ತಕ್ಕಷ್ಟು

ಪಾವ್ ಭಾಜಿ ಮಾಡುವ ವಿಧಾನ:

  1. ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆ, ಬಟಾಣಿ, ಕತ್ತರಿಸಿದ ಕ್ಯಾರಟ್ ಮತ್ತು ಕತ್ತರಿಸಿದ ದೊಣ್ಣೆಮೆಣಸನ್ನು (ಅರ್ಧ ಭಾಗ) ಕುಕ್ಕರ್ ನಲ್ಲಿ ತೆಗೆದುಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಬೇಯಿಸಿದ ನಂತರ ಚೆನ್ನಾಗಿ ಹಿಸುಕಿ ಅಥವಾ ಮ್ಯಾಶ್ ಮಾಡಿ ಪಕ್ಕಕ್ಕಿಡಿ.
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಣ್ಣದಾಗಿ ಕೊಚ್ಚಿದ ಶುಂಠಿ-ಬೆಳ್ಳುಳ್ಳಿ (ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್) ಸೇರಿಸಿ ಹುರಿಯಿರಿ. 
  5. ಆಮೇಲೆ ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. 
  6. ನಂತರ ಉಳಿದ ಅರ್ಧ ಭಾಗ ದೊಣ್ಣೆಮೆಣಸು ಹಾಕಿ ಹುರಿಯಿರಿ. 
  7. ನಂತರ ಕತ್ತರಿಸಿದ ಟೊಮೇಟೊ ಹಾಕಿ. ಅರಶಿನ ಪುಡಿ ಮತ್ತು ಉಪ್ಪು ಸೇರಿಸಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.
  8. ಅದಕ್ಕೆ ಬೇಯಿಸಿ, ಹಿಸುಕಿದ ತರಕಾರಿ ಹಾಕಿ. ಪಾವ್ ಭಾಜಿ ಮಸಾಲಾ ಪುಡಿ ಸೇರಿಸಿ.  
  9. ನಿಮ್ಮ ಖಾರಕ್ಕನುಗುಣವಾಗಿ ಅಚ್ಚಖಾರದ ಪುಡಿ ಸೇರಿಸಿ. ಉಪ್ಪು ಹೊಂದಿಸಿ. 
  10. ಒಂದೆರಡು ನಿಮಿಷ ಕುದಿಸಿ.
  11. ಕೊನೆಯಲ್ಲಿ ಬೆಣ್ಣೆ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಭಾಜಿ ತಯಾರಾಯಿತು. 
  12. ಹೆಂಚು ಅಥವಾ ದೋಸೆಕಲ್ಲಿನಲ್ಲಿ ಬೆಣ್ಣೆ  ಬಿಸಿ ಮಾಡಿ, ಪಾವ್ ಅಥವಾ ಬ್ರೆಡ್ ನ್ನು ಟೋಸ್ಟ್ ಮಾಡಿ. ಭಾಜಿಯೊಂದಿಗೆ ಬಡಿಸಿ. 

ಮಂಗಳವಾರ, ಮೇ 7, 2019

Mushti dose recipe in Kannada | ಮುಷ್ಟಿ ದೋಸೆ ಮಾಡುವ ವಿಧಾನ

Mushti dose recipe in Kannada

Mushti dose recipe in Kannada | ಮುಷ್ಟಿ ದೋಸೆ ಮಾಡುವ ವಿಧಾನ

ಮುಷ್ಟಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 2 ಟೇಬಲ್ ಸ್ಪೂನ್ ಉದ್ದಿನಬೇಳೆ
  3. 1/2 ಟೀಸ್ಪೂನ್ ಮೆಂತ್ಯ
  4. 1/2 ಕಪ್ ತೆಂಗಿನತುರಿ
  5. 1 ಕಪ್ ತೆಳು ಅವಲಕ್ಕಿ ಅಥವಾ ಗಟ್ಟಿ ಅವಲಕ್ಕಿ
  6. ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ಮುಷ್ಟಿ ದೋಸೆ ಮಾಡುವ ವಿಧಾನ:

  1. ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿ ಮತ್ತು ಬೇಳೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ತೆಂಗಿನತುರಿ ಸೇರಿಸಿ. ಅವಲಕ್ಕಿ ತೊಳೆದು ಸೇರಿಸಿ. ಗಟ್ಟಿ ಅವಲಕ್ಕಿ ಆದಲ್ಲಿ, ೧೦ ನಿಮಿಷ ನೆನೆಸಿ ಸೇರಿಸಿ. 
  4. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  6. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ. 
  8. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ತೆಂಗಿನತುರಿ ಮತ್ತು ಅವಲಕ್ಕಿ ಸೇರಿಸಿದ ಕಾರಣ, ದೊಡ್ಡ ಉರಿಯಲ್ಲಿ ಬೇಯಿಸಿದರೆ ದೋಸೆಯ ಕೆಳಭಾಗ ಕಪ್ಪಾಗಬಹುದು. 
  9. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಮೇ 3, 2019

Beetroot saaru recipe in Kannada | ಬೀಟ್ರೂಟ್ ಸಾರು ಮಾಡುವ ವಿಧಾನ

Beetroot saaru recipe in Kannada

Beetroot saaru recipe in Kannada | ಬೀಟ್ರೂಟ್ ಸಾರು ಮಾಡುವ ವಿಧಾನ

ಬೀಟ್ರೂಟ್ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಮಧ್ಯಮ ಗಾತ್ರದ ಬೀಟ್ರೂಟ್
  2. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
  4. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1 ಮಧ್ಯಮ ಗಾತ್ರದ ಟೊಮೇಟೊ 
  2. 2 ಒಣಮೆಣಸಿನಕಾಯಿ
  3. 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
  4. 1/2 ಟೀಸ್ಪೂನ್ ಜೀರಿಗೆ
  5. ದೊಡ್ಡ ಚಿಟಿಕೆ ಮೆಂತ್ಯ
  6. ಒಂದು ಚಿಟಿಕೆ ಸಾಸಿವೆ
  7. 1/4 ಕಪ್ ತೆಂಗಿನ ತುರಿ (ಬೇಕಾದಲ್ಲಿ)
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. ಇಂಗು ಒಂದು ಚಿಟಿಕೆ
  4. 5 - 6 ಕರಿಬೇವಿನ ಎಲೆ
  5. 2 ಟೀಸ್ಪೂನ್ ತುಪ್ಪ / ಅಡುಗೆ ಎಣ್ಣೆ

ಬೀಟ್ರೂಟ್ ಸಾರು ಮಾಡುವ ವಿಧಾನ:

  1. ಬೀಟ್ರೂಟ್  ನ್ನು ಸಿಪ್ಪೆ ತೆಗೆದು, ದೊಡ್ಡದಾಗಿ ಕತ್ತರಿಸಿ. ಒಂದು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
  2. ಅದೇ ಸಮಯದಲ್ಲಿ ಒಂದು ಬಾಣಲೆಯಲ್ಲಿ, ಒಂದು ಚಮಚ ಎಣ್ಣೆ ಬಿಸಿ ಮಾಡಿ, ಮಸಾಲೆ ಪದಾರ್ಥಗಳನ್ನು (ಒಣಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಸಾಸಿವೆ) ಹುರಿಯಿರಿ.  
  3. ಅದಕ್ಕೆ ಕತ್ತರಿಸಿದ ಟೊಮೇಟೊ ಸೇರಿಸಿ, ಮೆತ್ತಗಾಗುವವರೆಗೆ ಹುರಿಯಿರಿ. 
  4. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ. ಬೇಯಿಸಿದ ಬೀಟ್ರೂಟ್ ಸೇರಿಸಿ ನುಣ್ಣನೆ ಅರೆಯಿರಿ. ಬೇಕಾದಲ್ಲಿ ತೆಂಗಿನತುರಿ ಸೇರಿಸಿಬಹುದು.
  5. ಆಮೇಲೆ ಬೀಟ್ರೂಟ್ ಬೇಯಿಸಿದ ನೀರಿಗೆ ಉಪ್ಪು, ಹುಣಿಸೇಹಣ್ಣು ಮತ್ತು ಬೆಲ್ಲ ಹಾಕಿ ಕುದಿಸಿ. 
  6. ಅದೇ ಸಮಯದಲ್ಲಿ ಅರೆದ ಬೀಟ್ರೂಟ್ ಮಸಾಲೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  7. ಚೆನ್ನಾಗಿ ಕುದಿಯಲು ಶುರುವಾದ ಮೇಲೆ ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  8. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಇಂಗಿನ ಬದಲಾಗಿ ಜಜ್ಜಿದ ಬೆಳ್ಳುಳ್ಳಿ ಸೇರಿಸಬಹುದು.
  9. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...