ನಮ್ಮ ಬಗ್ಗೆ

ಕನ್ನಡ-ಅಡುಗೆಗೆ ಸ್ವಾಗತ. ಇದು ಒಂದು ಅಡುಗೆಯ ವೆಬ್‌ಸೈಟ್ ಆಗಿದ್ದು, ಇದರ ಹಿಂದೆ ಒಂದಷ್ಟು ಕನ್ನಡಿಗರ ಶ್ರಮವಿದೆ. ನಮ್ಮ ಗುರಿ ಕರ್ನಾಟಕದ ವಿವಿಧ ಅಡುಗೆಗಳನ್ನು ಗುರುತಿಸಿ, ಪ್ರಯತ್ನಿಸಿ, ಎಲ್ಲರೂ ಸಾಧಾರಣವಾಗಿ ಇಷ್ಟ ಪಡುವ ಅಡುಗೆಗಳನ್ನು ಸರಳ ರೀತಿಯಲ್ಲಿ ನಿಮಗೆ ಒದಗಿಸುವುದು. ಈ ವೆಬ್‌ಸೈಟ್ ಪ್ರಾರಂಭಿಸಿದ ಇನ್ನೊಂದು ಉದ್ದೇಶ, ಇತರರಿಗೆ ಕನ್ನಡ ಅಡುಗೆಯ ಪರಿಚಯ ಮಾಡಿಸುವುದು ಮತ್ತು ಹೊಸದಾಗಿ ಅಡುಗೆ ಕಲಿಯುತ್ತಿರುವವರಿಗೆ ಪ್ರೇರೇಪಿಸುವುದಾಗಿದೆ. ಸುಮಾರು ವರ್ಷಗಳ ಅಡುಗೆ ಅನುಭವದಿಂದ ಮತ್ತು ಮೂಲತ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ ನಮ್ಮ ತಂಡ ಈ ವೆಬ್‌ಸೈಟ್ ಗೆ ನ್ಯಾಯ ಒದಗಿಸಬಲ್ಲೆವೆಂಬ ಆತ್ಮ ವಿಶ್ವಾಸ ಹೊಂದಿದ್ದೇವೆ. ನೀವು ಈ ವೆಬ್‌ಸೈಟ್ ನಲ್ಲಿ ಸಸ್ಯಾಹಾರಿ ಅಡುಗೆಗಳನ್ನು ಮಾತ್ರ ಕಾಣ ಬಲ್ಲಿರಿ. ಮತ್ತು ಇದೊಂದು ದ್ವಿಭಾಷಾ ವೆಬ್‌ಸೈಟ್ ಆಗಿದ್ದು ಕನ್ನಡ ಮತ್ತು ಇಂಗ್ಲೀಶ್ ಆವೃತಿಗಳಿವೆ. ಇಂಗ್ಲೀಶ್ ಆವೃತಿಯನ್ನು ನೀವು ಈ ಲಿಂಕ್ ನಲ್ಲಿ ಕಾಣ ಬಹುದು. "www.vegrecipesofkarnataka.com".
ಕರ್ನಾಟಕ ರಾಜ್ಯ ವಿವಿಧ ಧಾರ್ಮಿಕ ಮತ್ತು ಭಾಷಾ ಜನಾಂಗೀಯವನ್ನು ಹೊಂದಿದ ರಾಜ್ಯವಾಗಿದ್ದು ಅಡುಗೆಯಲ್ಲೂ ಸಹ ವೈವಿದ್ಯಗಳನ್ನು ಕಾಣಬಹುದು. ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಜನಪ್ರಿಯ ಅಡುಗೆಗಳಿದ್ದು, ಅನೇಕ ಸಸ್ಯಾಹಾರ ಅಡುಗೆಯಲ್ಲಿ ನಮ್ಮ ರಾಜ್ಯ ಪ್ರಸಿದ್ಧವಾಗಿದೆ. ಕನ್ನಡ ಅಡುಗೆ ಬಹಳ ಹಳೆಯ ಕಾಲದಿಂದ ಅಸ್ತಿತ್ವದಲ್ಲಿರುವ ಪಾಕ ಪದ್ಧತಿಗಳಲ್ಲಿ ಒಂದಾಗಿದೆ.
ಈ ಅಡುಗೆ ವೆಬ್‌ಸೈಟ್ ಶ್ರೀಮತಿ ಲತಾ ಹೊಳ್ಳ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಮೂಲತಃ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿದ್ದ ಅವರು ದುಬಾಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಇಂಜಿನಿಯರ್ ಆಗಿ 10 ವರ್ಷ ಸೇವೆ ಸಲ್ಲಿಸಿರುತ್ತಾರೆ. ಈಗ ವೆಬ್‌ಸೈಟ್ ಡಿಸೈನ್ ಅಂಡ್ ಡೆವೆಲಪ್‌ಮೆಂಟ್ ಕೆಲಸವನ್ನು, "ಚುಕ್ಕಿಸ್ ವೆಬ್ ಸಾಫ್ಟ್ ಸಲ್ಯೂಶನ್ಸ್" ಎಂಬ ಹೆಸರಿನಲ್ಲಿ ನಡೆಸುತ್ತಿದ್ದಾರೆ. ಅವರೀಗ 6 ವರ್ಷದ ಮಗ ಶ್ರೀವತ್ಸ ಮತ್ತು ಪತಿ ರಾಘವೇಂದ್ರ ಹೊಳ್ಳರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಇಲ್ಲಿರುವ ಎಲ್ಲ ಅಡುಗೆಗಳು ನಾವು ನಮ್ಮ ಅಡುಗೆಮನೆಯಲ್ಲಿ ಮಾಡಿ, ರುಚಿನೋಡಿ, ಸಾಧ್ಯವಾದಷ್ಟು ಸಲಹೆ ಸೂಚನೆಗಳೊಂದಿಗೆ ವಿವರಿಸಿರುತ್ತೇವೆ. ಈ ವೆಬ್‌ಸೈಟ್ ನಲ್ಲಿರುವ ಎಲ್ಲ ಚಿತ್ರಗಳು ನಾವು ನಮ್ಮ ಅಡುಗೆಮನೆಗಳಲ್ಲಿ ತೆಗೆದವುಗಳಾಗಿದ್ದು, ಸ್ವಲ್ಪ ಮಟ್ಟಿಗೆ ಸಾಫ್ಟ್‌ವೇರ್ ಬಳಸಿಕೊಂಡು ಶುಭ್ರ ಮತ್ತು ಹೊಳಪಿಗೋಸ್ಕರ ಬದಲಾಯಿಸಲಾಗಿದೆ.

ನಿಮಗೆ ಯಾವುದಾದರೂ ಅಡುಗೆ ಅಥವಾ ಈ ವೆಬ್‌ಸೈಟ್ ನ ಬಗ್ಗೆ ಅನುಮಾನವಿದ್ದಲ್ಲಿ, ನಮ್ಮನ್ನು ಪ್ರಶ್ನಿಸಬಹುದು. ಹಾಗೆ ಪ್ರಶ್ನಿಸಲು ಈ ವೆಬ್‌ಸೈಟ್ ನಾ "ಸಂಪರ್ಕಿಸಿ" ವಿಭಾಗವನ್ನು ಉಪಯೋಗಿಸಿ. ಇಲ್ಲವೇ ನೇರವಾಗಿ "kannadavegrecipes@gmail.com" ಗೆ ಇ-ಮೇಲ್ ಕಳುಹಿಸಿ. ನಿಮ್ಮ ಸಲಹೆ, ಸೂಚನೆಗಳನ್ನು ನಾವು ಸ್ವಾಗತಿಸುತ್ತೇವೆ.
ನಮ್ಮೊಂದಿಗೆ ಸಂಪರ್ಕದಲ್ಲಿರಲು ಈ ಕೆಳಗೆ ನೀಡಲಾಗಿರುವ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಿ. Like ourFacebook Page, Join our Facebook Group, follow us on Google+ and Pinterest and Twitter

2 ಕಾಮೆಂಟ್‌ಗಳು:

Related Posts Plugin for WordPress, Blogger...