ಶುಕ್ರವಾರ, ಫೆಬ್ರವರಿ 28, 2020

Akki usli recipe in Kannada | ಅಕ್ಕಿ ಉಸ್ಲಿ ಮಾಡುವ ವಿಧಾನ

Akki usli recipe in Kannada

Akki usli recipe in Kannada | ಅಕ್ಕಿ ಉಸ್ಲಿ ಮಾಡುವ ವಿಧಾನ 


ಅಕ್ಕಿ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 3 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 1 ದೊಡ್ಡ ಈರುಳ್ಳಿ
  6. 4-5 ಕರಿ ಬೇವಿನ ಎಲೆ
  7. 1 ಮಧ್ಯಮ ಗಾತ್ರದ ಕ್ಯಾರಟ್
  8. 5 - 6 ಬೀನ್ಸ್
  9. 2 ಟೇಬಲ್ ಚಮಚ ಹಸಿ ಬಟಾಣಿ
  10. 1 ಮಧ್ಯಮ ಗಾತ್ರದ ಆಲೂಗಡ್ಡೆ
  11. ದೊಡ್ಡ ಚಿಟಿಕೆ ಅರಶಿನ ಪುಡಿ
  12. 6-8 ಟೀಸ್ಪೂನ್ ಅಡುಗೆ ಎಣ್ಣೆ
  13. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  14. 2 ಟೀಸ್ಪೂನ್ ಬೆಲ್ಲ
  15. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು

ಅಕ್ಕಿ ಉಸ್ಲಿ ಮಾಡುವ ವಿಧಾನ:

  1. ಅಕ್ಕಿಯನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  2. ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತರಕಾರಿಗಳನ್ನು ಕತ್ತರಿಸಿಟ್ಟು ಕೊಳ್ಳಿ.
  3. ಒಂದು ಕುಕ್ಕರ್ ಬಿಸಿಮಾಡಿ, ತುಪ್ಪ (ಅಥವಾ ಎಣ್ಣೆ) ಹಾಕಿ. ಸಾಸಿವೆ ಮತ್ತು ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ. 
  4. ಸಾಸಿವೆ ಸಿಡಿದ ಕೂಡಲೇ ಕರಿಬೇವು ಮತ್ತು ಇಂಗು ಸೇರಿಸಿ. 
  5. ನಂತ್ರ ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಮೇಲೆ ಬಟಾಣಿ ಮತ್ತು ಕತ್ತರಿಸಿದ ತರಕಾರಿಗಳನ್ನು ಹಾಕಿ, ಒಂದೆರಡು ನಿಮಿಷ ಹುರಿಯಿರಿ. 
  7. ನಂತರ ಹುರಿದ ಅಕ್ಕಿಯನ್ನು ತೊಳೆದು ಸೇರಿಸಿ, ಕೈಯಾಡಿಸಿ. 
  8. ಸಾರಿನ ಪುಡಿ ಅಥವಾ ರಸಂ ಪೌಡರ್ ಸೇರಿಸಿ. 
  9.  ನೀರು ಮತ್ತು ಅರಶಿನ ಪುಡಿ ಸೇರಿಸಿ ಹುರಿಯಿರಿ. ಈ ಉಸ್ಲಿಗೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತದೆ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  11. ರುಚಿಗೆ ತಕ್ಕಂತೆ ಹುಣಿಸೆರಸ ಮತ್ತು ಬೆಲ್ಲವನ್ನೂ ಸೇರಿಸಿ. 
  12. ಒಮ್ಮೆ ಮಗುಚಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಬೇಯಿಸಿ. 
  13. ಕುಕ್ಕರ್ ಒತ್ತಡ ಕಡಿಮೆ ಆದ ಮೇಲೆ, ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಉದುರಿಸಿ, ಬಡಿಸಿ.

ಬುಧವಾರ, ಫೆಬ್ರವರಿ 26, 2020

Tomato kurma in Kannada | ಟೊಮೇಟೊ ಕೂರ್ಮ ಮಾಡುವ ವಿಧಾನ

Tomato kurma in Kannada

Tomato kurma in Kannada | ಟೊಮೇಟೊ ಕೂರ್ಮ ಮಾಡುವ ವಿಧಾನ 


 ಬಿಳಿ ಸಾಗು ಅಥವಾ ಕೂರ್ಮ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ಟೊಮೇಟೊ
  2. 1 ಈರುಳ್ಳಿ
  3. 1/2 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ-ಬೆಳ್ಳುಳ್ಳಿ ಅಥವಾ ಪೇಸ್ಟ್
  5. 1 - 2 ಹಸಿರುಮೆಣಸಿನಕಾಯಿ
  6. 4 - 5 ಕರಿಬೇವಿನ ಎಲೆ
  7. 3 ಟೇಬಲ್ ಚಮಚ ಅಡುಗೆ ಎಣ್ಣೆ
  8. ದೊಡ್ಡ ಚಿಟಿಕೆ ಅರಿಶಿನ
  9. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 1/4 ಕಪ್ ತೆಂಗಿನತುರಿ
  2. 3 - 4 ಒಣಮೆಣಸಿನಕಾಯಿ
  3. 2 ಟೀಸ್ಪೂನ್ ಎಳ್ಳು
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಮೆಂತ್ಯ
  7. 2 ಏಲಕ್ಕಿ
  8. 2 ಸೆಮೀ ಚಕ್ಕೆ
  9. 4 - 5 ಲವಂಗ

ಟೊಮೇಟೊ ಕೂರ್ಮ ಮಾಡುವ ವಿಧಾನ:

  1. ತೆಂಗಿನತುರಿ ಹೊರತುಪಡಿಸಿ, ಮಸಾಲೆಗೆ ಪಟ್ಟಿ ಮಾಡಿದ ಎಲ್ಲಾ ಪದಾರ್ಥಗಳನ್ನು ಒಂದು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಹುರಿಯಿರಿ.
  2. ಬಿಸಿ ಆರಿದ ಮೇಲೆ, ತೆಂಗಿನತುರಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.  
  3. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಸೇರಿಸಿ.
  4. ಜೀರಿಗೆ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ. 
  5. ಸೀಳಿದ ಹಸಿಮೆಣಸಿನಕಾಯಿ ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.  
  6. ನಂತ್ರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ. 
  7. ಅರಿಶಿನ ಮತ್ತು ಉಪ್ಪು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  8. ಆಮೇಲೆ ಅರೆದ ಮಸಾಲೆ ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ ಪುನಃ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಿಮ್ಮ ರುಚಿಗೆ ತಕ್ಕಂತೆ ಹುಳಿ ಮತ್ತು ಸಿಹಿ ಹೊಂದಿಸಿಕೊಳ್ಳಿ. 
  11. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿ.  ಸ್ಟವ್ ಆಫ್ ಮಾಡಿ. 
  12. ಅನ್ನ, ಪೂರಿ, ದೋಸೆ, ಚಪಾತಿ ಮತ್ತು ರೊಟ್ಟಿ ಜೊತೆ ಬಡಿಸಿ. 

ಮಂಗಳವಾರ, ಫೆಬ್ರವರಿ 18, 2020

Mosaru dose recipe in Kannada | ಮೊಸರು ದೋಸೆ ಮಾಡುವ ವಿಧಾನ

Mosaru dose recipe in Kannada

Mosaru dose recipe in Kannada | ಮೊಸರು ದೋಸೆ ಮಾಡುವ ವಿಧಾನ 

ಸೋರೆಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1 ಕಪ್ ಮಜ್ಜಿಗೆ ಅಥವಾ ಮೊಸರು
  3. 1 ಟೀಸ್ಪೂನ್ ಮೆಂತ್ಯ
  4. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  5. 1/2 ಚಮಚ ಜೀರಿಗೆ
  6. ಸ್ವಲ್ಪ ಕರಿಬೇವು ಸಣ್ಣಗೆ ಹೆಚ್ಚಿದ್ದು
  7. ಉಪ್ಪು ರುಚಿಗೆ ತಕ್ಕಷ್ಟು
  8. 1/2 ಟೀಸ್ಪೂನ್ ಸಕ್ಕರೆ

ಮೊಸರು ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಮೆಂತೆಯನ್ನು ತೊಳೆಯಿರಿ. 
  2. ಒಂದು ಕಪ್ ಮೊಸರಿನಲ್ಲಿ 7 - 8 ಗಂಟೆಗಳ ಕಾಲ ನೆನೆಯಲು ಬಿಡಿ.
  3. ನೆನೆಸಿದ ನಂತರ ಮಿಕ್ಸಿ ಜಾರಿಗೆ ಹಾಕಿ. 
  4. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
  5. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಹೆಚ್ಚು ನೀರು ಸೇರಿಸಬೇಡಿ. 
  6. ಮುಚ್ಚಳ ಮುಚ್ಚಿ 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  7. ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. 
  8. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ತೆಳ್ಳಗೆ ದೋಸೆ ಮಾಡಿ. 
  10. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  11. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.
  12. ಮೃದುವಾದ ದೋಸೆ ಬೇಕಾದಲ್ಲಿ, ದೋಸೆ ಹಿಟ್ಟಿಗೆ ಅರ್ಧ ಚಮಚ ಜೀರಿಗೆ ಮತ್ತು ಸ್ವಲ್ಪ ಕರಿಬೇವು ಸೊಪ್ಪು ಸೇರಿಸಿ. 
  13. ಸ್ವಲ್ಪ ನೀರು ಸೇರಿಸಿ, ಹಿಟ್ಟು ತೆಳ್ಳಗೆ ಮಾಡಿಕೊಳ್ಳಿ. ಮತ್ತೆ ದೋಸೆ ಮಾಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಫೆಬ್ರವರಿ 15, 2020

Curd in 1 hour recipe in Kannada | ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ

Curd in 1 hour recipe in Kannada

Curd in 1 hour recipe in Kannada | ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ

ಗಟ್ಟಿಮೊಸರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಲೀಟರ್ ಹಾಲು
  2. 5 - 6 ಟೇಬಲ್ ಚಮಚ ಮೊಸರು

ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ:

  1. ಹಾಲನ್ನು ಕುದಿಸಿ.
  2. ಬಿಸಿ ಕಡಿಮೆ ಆದ ಮೇಲೆ (ಉಗುರು ಬೆಚ್ಚಗೆ ಗಿಂತ ಸ್ವಲ್ಪ ಜಾಸ್ತಿ ಬಿಸಿ ಇರಲಿ), ಮೊಸರು ಸೇರಿಸಿ.
  3. ಚೆನ್ನಾಗಿ ಎತ್ತಿಹಾಕಿ ಮಿಕ್ಸ್ ಮಾಡಿ.  
  4. ಮೊಸರು ಮಾಡಲು ಎರಡು ಪಾತ್ರೆಗೆ ಹಾಕಿ. 
  5. ಒಂದು ಪಾತ್ರೆಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಅದರಲ್ಲಿ ಮೊದಲನೇ ಹಾಲಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. ಈ ವಿಧಾನದಲ್ಲಿ ಸುಮಾರು ಎರಡು ಘಂಟೆ ಬೇಕಾಗುತ್ತದೆ. 
  6. ಎರಡನೇ ವಿಧಾನದಲ್ಲಿ, ಒಂದು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಸ್ವಲ್ಪ ನೀರು ಬಿಸಿ ಮಾಡಿ. ನಂತರ ಸ್ಟವ್ ಆಫ್ ಮಾಡಿ. 
  7. ಒಂದು ಸ್ಟಾಂಡ್ ಇಟ್ಟು, ಹಾಲಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. 
  8. ನಂತ್ರ ಪಾತ್ರೆ ಅಥವಾ ಕುಕ್ಕರ್ ನ ಮುಚ್ಚಳವನ್ನೂ ಮುಚ್ಚಿ. 
  9. ಈ ವಿಧಾನದಲ್ಲಿ ಒಂದೇ ಘಂಟೆಯಲ್ಲಿ ಮೊಸರು ತಯಾರಾಗುತ್ತದೆ. 
  10. ಮಾಡಿ ನೋಡಿ. ಮೇಲೆ ಇರುವ ವಿಡಿಯೋವನ್ನು ಒಮ್ಮೆ ನೋಡಿ. 

ಗುರುವಾರ, ಫೆಬ್ರವರಿ 13, 2020

Gasagase haalu recipe in Kannada | ಗಸಗಸೆ ಹಾಲು ಮಾಡುವ ವಿಧಾನ

Gasagase haalu recipe in Kannada

Gasagase haalu recipe in Kannada | ಗಸಗಸೆ ಹಾಲು ಮಾಡುವ ವಿಧಾನ


ಗಸಗಸೆ ಹಾಲಿನ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೇಬಲ್ ಚಮಚ ಗಸಗಸೆ
  2. 10 - 12 ಬಾದಾಮಿ
  3. ಒಂದು ಏಲಕ್ಕಿ
  4. 1/4 ಕಪ್ ತೆಂಗಿನತುರಿ
  5. 2 ಟೇಬಲ್ ಚಮಚ ಬೆಲ್ಲ
  6. 2 ಕಪ್ ನೀರು

ಗಸಗಸೆ ಹಾಲು ಮಾಡುವ ವಿಧಾನ:

  1. ಗಸಗಸೆ ಮತ್ತು ಬಾದಾಮಿಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ.
  2. ನೆನೆಸಿ ಆದ ಮೇಲೆ ಬಾದಾಮಿ ಸಿಪ್ಪೆ ತೆಗೆಯಿರಿ. ಬಾದಾಮಿ ನೆನೆಸಿದ ನೀರು ಉಪಯೋಗಿಸುವುದು ಬೇಡ. ಗಸಗಸೆ ನೆನೆಸಿದ ನೀರು ಬಳಸಬಹುದು. 
  3. ಸಿಪ್ಪೆ ತೆಗೆದ ಬಾದಾಮಿ ಮತ್ತು ನೆನೆಸಿದ ಗಸಗಸೆಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಏಲಕ್ಕಿ ಸೇರಿಸಿ. 
  5. ತೆಂಗಿನತುರಿ ಸೇರಿಸಿ. 
  6. ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ. ಬೆಲ್ಲದ ಬದಲು ಬೇರೆ ಸಿಹಿ ಪದಾರ್ಥ ಸೇರಿಸಬಹುದು. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ. 
  8. ಶೋಧಿಸಿ, ಉಳಿದಿದ್ದನ್ನು ಪುನಃ ಅರೆಯಿರಿ, ಪುನಃ ಶೋಧಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು ಸುಮಾರು ಎರಡು ಕಪ್ ನೀರು ಸೇರಿಸಿದ್ದೇನೆ.
  10. ನಂತ್ರ ಕುಡಿದು ಆನಂದಿಸಿ. ಕುದಿಸುವ ಅವಶ್ಯಕತೆ ಇಲ್ಲ. 


ಶನಿವಾರ, ಫೆಬ್ರವರಿ 8, 2020

Peanut butter recipe in Kannada | ಶೇಂಗಾ ಬೆಣ್ಣೆ ಮಾಡುವ ವಿಧಾನ

Peanut butter recipe in Kannada

Peanut butter recipe in Kannada | ಶೇಂಗಾ ಬೆಣ್ಣೆ ಮಾಡುವ ವಿಧಾನ

ಶೇಂಗಾ ಬೆಣ್ಣೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ನೆಲಗಡಲೆ ಅಥವಾ ಶೇಂಗಾ
  2. ದೊಡ್ಡ ಚಿಟಿಕೆ ಉಪ್ಪು
  3. 1 ಚಮಚ ತೆಂಗಿನೆಣ್ಣೆ (ಬೇಕಾದಲ್ಲಿ; ಬೇರೆ ಎಣ್ಣೆ ಬಳಸಬಹುದು)
  4. 1 ಚಮಚ ಬೆಲ್ಲ ಅಥವಾ ಜೇನುತುಪ್ಪ

ಶೇಂಗಾ ಬೆಣ್ಣೆ ಮಾಡುವ ವಿಧಾನ:

  1. ಶೇಂಗಾ ಅಥವಾ ಕಡ್ಲೆಕಾಯಿಯನ್ನು ದಪ್ಪ ತಳದ ಬಾಣಲೆಯಲ್ಲಿ ತೆಗೆದುಕೊಂಡು ಅಲ್ಲಲ್ಲಿ ಕಂದುಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ, ಮಧ್ಯಮ ಉರಿಯಲ್ಲಿ ಹುರಿಯಿರಿ.
  2. ಬಿಸಿ ಆರಿದ ಮೇಲೆ ಸಿಪ್ಪೆ ತೆಗೆಯಿರಿ. 
  3. ಮಿಕ್ಸಿಜಾರಿನಲ್ಲಿ ತೆಗೆದುಕೊಂಡು ಪುಡಿ ಮಾಡಿ. 
  4. ಆಮೇಲೆ ಉಪ್ಪು, ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ. 
  5. ಶೆಂಗಾ ಎಣ್ಣೆ ಬಿಟ್ಟು, ಪೇಸ್ಟ್ ಆಗುವವರೆಗೆ ಅರೆಯಿರಿ (ಮೇಲಿರುವ ವಿಡಿಯೋ ನೋಡಿ)
  6. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಫ್ರಿಡ್ಜ್ ನಲ್ಲಿ ಮೂರು ತಿಂಗಳು, ಹೊರಗೆ ಒಂದು ತಿಂಗಳು ಇಡಬಹುದು. 
  7. ಬ್ರೆಡ್, ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ. ಸ್ಯಾಂಡ್ವಿಚ್ ನಲ್ಲೂ ಬಳಸಬಹುದು. 


ಬುಧವಾರ, ಫೆಬ್ರವರಿ 5, 2020

Tomato thambli recipe in kannada | ಟೊಮೇಟೊ ತಂಬ್ಳಿ ಮಾಡುವ ವಿಧಾನ

Tomato thambli recipe in kannada

Tomato thambli recipe in kannada | ಟೊಮೇಟೊ ತಂಬ್ಳಿ ಮಾಡುವ ವಿಧಾನ

ಟೊಮೇಟೊ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಗಾತ್ರದ ಟೊಮೇಟೊ ಹಣ್ಣು 
  2. 1/2 ಕಪ್ ಮೊಸರು
  3. 1 - 2 ಹಸಿಮೆಣಸಿನಕಾಯಿ
  4. 1/4 ಕಪ್ ತೆಂಗಿನ ತುರಿ 
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 
  7. 1 ಟೀಸ್ಪೂನ್ ತುಪ್ಪ ಅಥವಾ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಟೊಮೇಟೊ ತಂಬ್ಳಿ ಮಾಡುವ ವಿಧಾನ:

  1. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. 
  2. ದೊಡ್ಡದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಟೊಮೇಟೊ ಸೇರಿಸಿ ಹುರಿಯಿರಿ. 
  3. ನಂತರ ಮಿಕ್ಸಿಯಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಳ್ಳಿ. 
  4. ಅದಕ್ಕೆ ತೆಂಗಿನ ತುರಿ ಸೇರಿಸಿ.
  5. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  6. ನಂತ್ರ ಒಂದು ಬೌಲ್ ನಲ್ಲಿ ಅರೆದ ಮಿಶ್ರಣ ಹಾಕಿ, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
  7. ಮೊಸರನ್ನು ಸೇರಿಸಿ, ಮಗುಚಿ ಪಕ್ಕಕ್ಕಿಡಿ.
  8. ಎಣ್ಣೆ, ಮೆಣಸಿನಕಾಯಿ, ಜೀರಿಗೆ ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. 
  9. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ.  
  10. ಬಿಸಿಯಾದ ಅನ್ನ, ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

Related Posts Plugin for WordPress, Blogger...