ಮಂಗಳವಾರ, ಆಗಸ್ಟ್ 30, 2016

Shenga or Nelagadale unde recipe in Kannada | ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ

Shenga or Nelagadale unde recipe in Kannada

Shenga or Nelagadale unde recipe in Kannada | ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಶೇಂಗಾ ಅಥವಾ ನೆಲಗಡಲೆ
  2. 3/4 ಕಪ್ ಬೆಲ್ಲ
  3. 1/4 ಕಪ್ ಕೊಬ್ಬರಿ
  4. 1/4 ಕಪ್ ಎಳ್ಳು
  5. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ನೆಲಗಡಲೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  2. ನಂತರ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಅಥವಾ ಚೆನ್ನಾಗಿ ಉಬ್ಬುವವರೆಗೆ ಹುರಿಯಿರಿ. 
  3. ನಂತರ ತುರಿದ ಕೊಬ್ಬರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. 
  4. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ಪಲ್ಸ್ ಬಟನ್ ಉಪಯೋಗಿಸಿ ಬುರ್-ಬುರ್ ಮಾಡಿದರೆ ಸಾಕು. ತುಂಬ ಹೊತ್ತು ಮಿಕ್ಸಿ ರನ್ ಮಾಡಬೇಡಿ. 
  5. ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪಲ್ಸ್ ಬಟನ್ ಉಪಯೋಗಿಸಿ 3 - 4 ಸಲ ಬುರ್-ಬುರ್ ಮಾಡಿ.
  6. ಒಂದು ಬಟ್ಟಲಿಗೆ ಪುಡಿ ಮಾಡಿದ ಶೇಂಗಾ-ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. 
  7. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಸವಿದು ಆನಂದಿಸಿ.


ಸೋಮವಾರ, ಆಗಸ್ಟ್ 29, 2016

Kayi kadubu recipe in Kannada | ಕಾಯಿ ಕಡುಬು ಮಾಡುವ ವಿಧಾನ

Kayi kadubu recipe in Kannada

Kayi kadubu recipe in Kannada | ಕಾಯಿ ಕಡುಬು ಮಾಡುವ ವಿಧಾನ 

 ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ
  4. 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  5. 1 - 2 ಏಲಕ್ಕಿ
  6. 2 ಟೀಸ್ಪೂನ್ ತುಪ್ಪ 
  7. ಉಪ್ಪು ರುಚಿಗೆ ತಕ್ಕಷ್ಟು
  8. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ

ಕಾಯಿ ಕಡುಬು ಮಾಡುವ ವಿಧಾನ :

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  3. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಮಿಕ್ಸಿ ಜಾರಿಗೆ ತೆಂಗಿನ ತುರಿ ಮತ್ತು ಏಲಕ್ಕಿ ಹಾಕಿ ನೀರು ಹಾಕದೆ ಪುಡಿ ಮಾಡಿ. 
  5. ಪುಡಿಮಾಡಿದ ತೆಂಗಿನ ತುರಿ ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಹೂರಣ ಸಿದ್ಧ ಮಾಡಿಕೊಳ್ಳಿ. 
  6. ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  7. ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ತುಪ್ಪ ಸವರಿದ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ ಮೇಲೆ ವೃತ್ತಾಕಾರವಾಗಿ ತಟ್ಟಿ ಅಥವಾ ಲಟ್ಟಿಸಿ. 
  8. ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ. 
  9. ಸೆಕೆಯಲ್ಲಿ (ಆವಿಯಲ್ಲಿ) ಬಾಳೆ ಎಲೆ ಅಥವಾ ತುಪ್ಪ ಹಚ್ಚಿದ ಪ್ಲೇಟ್ ನಲ್ಲಿಟ್ಟು 8 - 10 ನಿಮಿಷ ಬೇಯಿಸಿ. 
  10. ಬೇಕಾದಲ್ಲಿ ಮೋದಕದ ಆಕಾರದಲ್ಲೂ ಮಾಡ ಬಹುದು.


Pudina pulao recipe in Kannada | ಪುದೀನಾ ಪಲಾವ್ ಮಾಡುವ ವಿಧಾನ

Pudina pulao recipe in Kannada

Pudina pulao recipe in Kannada | ಪುದೀನಾ ಪಲಾವ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಸಣ್ಣ ಕ್ಯಾರೆಟ್
  3. 1 ಸಣ್ಣ ಆಲೂಗಡ್ಡೆ
  4. 5 - 6 ಬೀನ್ಸ್
  5. 1/2 ದೊಣ್ಣೆ ಮೆಣಸಿನಕಾಯಿ (ಬೇಕಾದಲ್ಲಿ)
  6. 1/4 ಕಪ್ ನೆನೆಸಿದ ಬಟಾಣಿ
  7. 2 ದೊಡ್ಡ ಈರುಳ್ಳಿ
  8. 2 ಟೊಮ್ಯಾಟೋ (ಅಥವಾ ನಿಂಬೆ ರಸ)
  9. 1/2 ಟೀಸ್ಪೂನ್ ಜೀರಿಗೆ
  10. 1 ಚಕ್ರ ಮೊಗ್ಗು 
  11. 1 ಪುಲಾವ್ ಎಲೆ
  12. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  13. 8-10 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
  14. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  15. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 1/2 ಕಪ್ ತೆಂಗಿನತುರಿ
  2. 2ಸೆಮೀ ಉದ್ದದ ಶುಂಠಿ
  3. 5-6 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1-2 ಹಸಿರುಮೆಣಸಿನಕಾಯಿ
  7. 1 ಬೆರಳುದ್ದ ಚಕ್ಕೆ
  8. 8-10 ಲವಂಗ
  9. 1 ಏಲಕ್ಕಿ
  10. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  11. ಒಂದು ಹಿಡಿ ಪುದೀನಾ ಎಲೆ
  12. 1/2 ಕಪ್ ನೀರು ಅರೆಯಲು

ಪುದೀನಾ ಪಲಾವ್ ಮಾಡುವ ವಿಧಾನ:

  1. ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಹ ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
  2. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು 1/2 ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  3. ಈಗ ಒಂದು 5ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪ ಹಾಕಿ. ಚಕ್ರ ಮೊಗ್ಗು ಮತ್ತು ಪುಲಾವ್ ಎಲೆ ಹಾಕಿ ಹುರಿಯಿರಿ.
  4. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
  5. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ. ನಿಂಬೆ ರಸ ಹಾಕುವುದಾದಲ್ಲಿ ಕೊನೆಯಲ್ಲಿ ಬಡಿಸುವ ಮುನ್ನ ಸೇರಿಸಿ. 
  6. ಈಗ ಕತ್ತರಿಸಿದ ತರಕಾರಿ, ಅರೆದ ಮಸಾಲೆ ಮತ್ತು ಅರಶಿನ ಪುಡಿ ಹಾಕಿ ಪುನಃ 5 ನಿಮಿಷಗಳ ಕಾಲ ಹುರಿಯಿರಿ.
  7. ಮಸಾಲೆ ಹುರಿಯುತ್ತಿರುವಾಗಲೇ 1 ಕಪ್ ಅಕ್ಕಿ ತೊಳೆದು ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  8. ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  9. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಟೊಮೇಟೊ ಬದಲಾಗಿ ನಿಂಬೆ ರಸ ಹಾಕುವುದಾದಲ್ಲಿ ಈಗ ಹಾಕಿ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.

ಶುಕ್ರವಾರ, ಆಗಸ್ಟ್ 26, 2016

Bangalore style coconut chutney | ಬೆಂಗಳೂರು ಶೈಲಿಯ ಕಾಯಿ ಚಟ್ನಿ ಮಾಡುವ ವಿಧಾನ

Bangalore style coconut chutney

Bangalore style coconut chutney | ಬೆಂಗಳೂರು ಶೈಲಿಯ ಕಾಯಿ ಚಟ್ನಿ



ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ 
  2. 2 - 4 ಹಸಿರು ಮೆಣಸಿನಕಾಯಿ 
  3. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ 
  4. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡ್ಲೆ ಪಪ್ಪು
  5. ಸ್ವಲ್ಪ ಕೊತಂಬರಿ ಸೊಪ್ಪು
  6. ನಾಲ್ಕು ಕರಿಬೇವು
  7. 2 ಎಸಳು ಬೆಳ್ಳುಳ್ಳಿ
  8. ಸ್ವಲ್ಪ ಹುಣಿಸೆ ಹಣ್ಣು 
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. 4 ಕರಿಬೇವಿನ ಎಲೆ
  3. 1/4 ಟಿಸ್ಪೂನ್ ಸಾಸಿವೆ 
  4. ಒಂದು ಚಿಟಿಕೆ ಇಂಗು

 ಬೆಂಗಳೂರು ಶೈಲಿಯ ಕಾಯಿ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೆಲಗಡಲೆ ಅಥವಾ ಶೇಂಗಾವನ್ನು ಹುರಿಯಿರಿ. 
  2. ನಂತರ ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಹುರಿದ ನೆಲಗಡಲೆ, ಹುರಿಗಡಲೆ, ಹಸಿರುಮೆಣಸಿನ ಕಾಯಿ, ಕೊತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಉಪ್ಪು ಹಾಕಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  4. ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಗುರುವಾರ, ಆಗಸ್ಟ್ 25, 2016

Rave unde recipe in Kannada | ರವೆ ಉಂಡೆ ಮಾಡುವ ವಿಧಾನ

Rave unde recipe in Kannada

Rave unde recipe in Kannada | ರವೆ ಉಂಡೆ ಮಾಡುವ ವಿಧಾನ

ರವೆ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೀಡಿಯಂ ಅಥವಾ ಸಣ್ಣ ರವೆ 
  2. 3/4 ಕಪ್ ಸಕ್ಕರೆ 
  3. 1/2 ಕಪ್ ತೆಂಗಿನ ತುರಿ ಅಥವಾ ಕೊಬ್ಬರಿ
  4. 1/4 ಕಪ್ ಕುದಿಸಿದ ಹಾಲು
  5. 2 ಟೇಬಲ್ ಚಮಚ ತುಪ್ಪ
  6. 8 - 10 ಗೋಡಂಬಿ ಚೂರು ಮಾಡಿದ್ದು
  7. 1 ಟೇಬಲ್ ಚಮಚ ಒಣ ದ್ರಾಕ್ಷಿ
  8. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ರವೆ ಉಂಡೆ ಮಾಡುವ ವಿಧಾನ :

  1. ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. 
  2. ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದು ಎತ್ತಿಡಿ. 
  3. ಸಾರಣಿಸಿ ಅಥವಾ ಜರಡಿ ಹಿಡಿದು ನಯವಾದ ಅಕ್ಕಿ ಹಿಟ್ಟನ್ನು ಸಿದ್ಧ ಮಾಡಿ. 
  4. ನಂತರ ಅದೇ ಬಾಣಲೆಗೆ ರವೆಯನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. 
  5. ನಂತರ ತೆಂಗಿನ ತುರಿಯನ್ನು ಸೇರಿಸಿ ಒಂದೆರಡು ನಿಮಿಷಗಳ ಕಾಲ ಹುರಿಯಿರಿ.
  6. ಒಂದು ಅಗಲವಾದ ಬಟ್ಟಲಿಗೆ ಹುರಿದ ರವೆ, ತೆಂಗಿನ ತುರಿ, ದ್ರಾಕ್ಷಿ, ಗೋಡಂಬಿ ಮತ್ತು ಪುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಕಲಸಿ. 
  7. ಸ್ವಲ್ಪ ಸ್ವಲ್ಪವೇ ಪ್ರಮಾಣಕ್ಕೆ ಹಾಲು ಚಿಮುಕಿಸುತ್ತಾ ಉಂಡೆಗಳನ್ನು ಮಾಡಿ. ಸವಿದು ಆನಂದಿಸಿ.


ಮಂಗಳವಾರ, ಆಗಸ್ಟ್ 23, 2016

Hasi thambittu recipe in Kannada | ತಂಬಿಟ್ಟು ಮಾಡುವ ವಿಧಾನ

Hasi thambittu recipe in Kannada

Hasi thambittu recipe in Kannada | ತಂಬಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ದೋಸೆ ಅಕ್ಕಿ
  2. 1/4 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ (ನಾನು ಸ್ವಲ್ಪ ಕಡಿಮೆ ಉಪಯೋಗಿಸಿದ್ದೇನೆ)
  4. 1/4 ಕಪ್ ಗಿಂತ ಸ್ವಲ್ಪ ಕಡಿಮೆ ನೀರು
  5. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ತಂಬಿಟ್ಟು ಮಾಡುವ ವಿಧಾನ :

  1. ಅಕ್ಕಿಯನ್ನು ತೊಳೆದು 1 ಗಂಟೆ ಕಾಲ ನೆನೆಯಲು ಬಿಡಿ. 
  2. 1 ಗಂಟೆಯ ನಂತರ ನೀರನ್ನು ಸಂಪೂರ್ಣ ಬಗ್ಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ. 
  3. ಸಾರಣಿಸಿ ಅಥವಾ ಜರಡಿ ಹಿಡಿದು ನಯವಾದ ಅಕ್ಕಿ ಹಿಟ್ಟನ್ನು ಸಿದ್ಧ ಮಾಡಿ. 
  4. ತೆಂಗಿನ ತುರಿಯನ್ನು ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿ ಸೇರಿಸಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ಕಲಸಿ ಪಕ್ಕಕ್ಕಿಡಿ. 
  5. ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. ಒಂದೆಳೆ ಪಾಕ ಮಾಡಿ. 
  6. ಒಂದೆಳೆ ಪಾಕ ಬಂದ ಮೇಲೆ ಸ್ಟವ್ ಆಫ್ ಮಾಡಿ. 
  7. ಕೂಡಲೇ ಅಕ್ಕಿ ಹಿಟ್ಟು ಮತ್ತು ತೆಂಗಿನ ತುರಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ.
    ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿ ಸವಿಯಿರಿ.


ಸೋಮವಾರ, ಆಗಸ್ಟ್ 22, 2016

Malnad style kodu bale recipe in Kannada | ಕೋಡುಬಳೆ ಮಾಡುವ ವಿಧಾನ

Malnad style kodu bale recipe in Kannada | ಕೋಡುಬಳೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು 
  2. 1/2 ಕಪ್ ಮೈದಾ ಹಿಟ್ಟು
  3. 1/2 ಕಪ್ ತೆಂಗಿನ ತುರಿ 
  4. 3 - 6 ಕೆಂಪು ಮೆಣಸಿನಕಾಯಿ
  5. 1/4 ಟೀಸ್ಪೂನ್ ಸಾಸಿವೆ
  6. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  7. 1 ಸಣ್ಣನೆಲ್ಲಿಕಾಯಿ ಗಾತ್ರದ ಬೆಣ್ಣೆ ಅಥವಾ 1 ಟೇಬಲ್ ಚಮಚ ಬಿಸಿ ಎಣ್ಣೆ
  8. ಎಣ್ಣೆ ಕೋಡುಬಳೆ ಕಾಯಿಸಲು


ಕೋಡುಬಳೆ ಮಾಡುವ ವಿಧಾನ:

  1. ಮೈದಾ ಹಿಟ್ಟನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಸೆಕೆಯಲ್ಲಿ ೧೦ ನಿಮಿಷ ಬೇಯಿಸಿಕೊಳ್ಳಿ (ಇಡ್ಲಿ ಬೇಯಿಸಿದ ಹಾಗೆ).
  2. ಅಕ್ಕಿ ಹಿಟ್ಟು ಮತ್ತು ಬೇಯಿಸಿದ ಮೈದಾ ಹಿಟ್ಟನ್ನು ಸಾರಣಿಸಿ ಕೊಳ್ಳಿ (ಜರಡಿ). 
  3. ಬೆಣ್ಣೆ ಮತ್ತು ಉಪ್ಪು ಹಾಕಿ ಕಲಸಿ.
  4. ಮಿಕ್ಸಿ ಜಾರಿಗೆ ತೆಂಗಿನ ತುರಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆ ಹಾಕಿ ಸಾಧ್ಯವಾದಷ್ಟು ಕಡಿಮೆ ನೀರು ಉಪಯೋಗಿಸಿ ನುಣ್ಣನೆ ಅರೆಯಿರಿ. 
  5. ಅರೆದ ಮಸಾಲೆಯನ್ನು ಬೆಣ್ಣೆ ಹಾಕಿ ಕಲಸಿದ ಹಿಟ್ಟಿಗೆ ಹಾಕಿ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಕೋಡುಬಳೆ ಮಾಡುವಷ್ಟು ಮೆತ್ತಗಿದ್ದರೆ ಸಾಕು. ತುಂಬ ಮೆತ್ತಗೆನಿಸಿದರೆ ಒಂದೆರಡು ಚಮಚ ಅಕ್ಕಿ ಹಿಟ್ಟು ಹಾಕಿ ಪುನಃ ಚೆನ್ನಾಗಿ ಕಲಸಿ ಕೊಳ್ಳಿ.  
  6. ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಬಳೆಗಳನ್ನು ಮಾಡಿ. 
  7. ಎಣ್ಣೆ ಬಿಸಿ ಮಾಡಿ ಕೊಡು ಬಳೆಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.


ಭಾನುವಾರ, ಆಗಸ್ಟ್ 21, 2016

Beans palya recipe in Kannada | ಬೀನ್ಸ್ ಪಲ್ಯ ಮಾಡುವ ವಿಧಾನ

Beans palya recipe in Kannada

Beans palya recipe in Kannada | ಬೀನ್ಸ್ ಪಲ್ಯ ಮಾಡುವ ವಿಧಾನ 

ಬೀನ್ಸ್ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ಬೀನ್ಸ್ ಅಥವಾ ಹುರುಳಿಕಾಯಿ
  2. 1/2 ಟೀಸ್ಪೂನ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಕಡ್ಲೆ ಬೇಳೆ
  4. 4 ಟೀಸ್ಪೂನ್ ಅಡುಗೆ ಎಣ್ಣೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಚಿಟಿಕೆ ಅರಿಶಿನ ಪುಡಿ
  7. 1 ಚಿಟಿಕೆ ಇಂಗು
  8. 3 - 4 ಕರಿಬೇವಿನ ಎಲೆ
  9. 1-2 ಹಸಿರು ಮೆಣಸಿನ ಕಾಯಿ
  10. 1/4 ಕಪ್ ತೆಂಗಿನ ತುರಿ
  11. 1 ಟೇಬಲ್ ಚಮಚ ಕೊತಂಬರಿ ಸೊಪ್ಪು(ಬೇಕಾದಲ್ಲಿ)
  12. ಉಪ್ಪು ರುಚಿಗೆ ತಕ್ಕಷ್ಟು
  13. 1/4 ಕಪ್ ನೀರು

ಬೀನ್ಸ್ ಪಲ್ಯ ಮಾಡುವ ವಿಧಾನ:

  1. ಬೀನ್ಸ್ ನ್ನು ನಾರು ತೆಗೆದು, ತೊಳೆದು, ಸಣ್ಣದಾಗಿ ಕತ್ತರಿಸಿ. ಸಾಧ್ಯವಾದಷ್ಟು ಎಳೆ ಬೀನ್ಸ್ ನ್ನು ಉಪಯೋಗಿಸಿ. 
  2. ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಹಸಿರುಮೆಣಸಿನಕಾಯಿ, ಅರಶಿನ ಇಂಗು ಮತ್ತು ಕರಿಬೇವಿನ ಎಲೆ ಹಾಕಿ. ಬೇಕಾದಲ್ಲಿ ಈರುಳ್ಳಿಯನ್ನೂ ಹಾಕಬಹುದು. 
  3. ಕತ್ತರಿಸಿದ ಬೀನ್ಸ್ ಹಾಕಿ ಮಗುಚಿ. ಉಪ್ಪು ಮತ್ತು ನೀರು ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಆಗೊಮ್ಮೆ ಈಗೊಮ್ಮೆ ಮಗುಚಲು ಮರೆಯದಿರಿ.
  4. ಬೀನ್ಸ್ ಬೇಯುವವರೆಗೆ ಕಾಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ. ನಂತರ ತೆಂಗಿನತುರಿ, ಕೊತಂಬರಿ ಸೊಪ್ಪು ಹಾಕಿ ಮಗುಚಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಶುಕ್ರವಾರ, ಆಗಸ್ಟ್ 19, 2016

Fried rice recipe in Kannada | ಫ್ರೈಡ್ ರೈಸ್ ಮಾಡುವ ವಿಧಾನ

Fried rice recipe in Kannada

Fried rice recipe in Kannada | ಫ್ರೈಡ್ ರೈಸ್ ಮಾಡುವ ವಿಧಾನ 

ಫ್ರೈಡ್ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸ್ಮತಿ ಅಕ್ಕಿ 
  2. 2 ಎಸಳು ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ 
  3. 1/2 ಸಣ್ಣದಾಗಿ ಕತ್ತರಿಸಿದ ಕ್ಯಾರೆಟ್
  4. 2 - 3 ಸಣ್ಣದಾಗಿ ಕತ್ತರಿಸಿದ ಬೀನ್ಸ್ 
  5. 1/4 ಭಾಗ ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ
  6. 2 ಎಲೆ ಕತ್ತರಿಸಿದ ಕೋಸು 
  7. 2 ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಗಿಡ
  8. 1/2 ಟೀಸ್ಪೂನ್ ಸಕ್ಕರೆ 
  9. 2 ಟೀಸ್ಪೂನ್ ವಿನೆಗರ್ ಅಥವಾ ಲಿಂಬೆ ರಸ 
  10. 2 ಟೇಬಲ್ ಚಮಚ ಅಡುಗೆ ಎಣ್ಣೆ 
  11. ಕಾಳುಮೆಣಸಿನ ಪುಡಿ ( ಬಡಿಸುವಾಗ ಬಳಸಲಾಗಿದೆ) 
  12. ಟೊಮೆಟೊ ಸಾಸ್ ( ಬಡಿಸುವಾಗ ಬಳಸಲಾಗಿದೆ)
  13. ನಿಮ್ಮ ರುಚಿ ಪ್ರಕಾರ ಉಪ್ಪು

ಫ್ರೈಡ್ ರೈಸ್ ಮಾಡುವ ವಿಧಾನ:

  1. ಬಾಸ್ಮತಿ ಅಕ್ಕಿಯನ್ನು ಉದುರು ಉದುರಾಗಿ ಬೇಯಿಸಿಟ್ಟು ಕೊಳ್ಳಿ. 
  2. ಒಂದು ಬಾಣಲೆಗೆ 2 ಟೇಬಲ್ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  3. ಅದಕ್ಕೆ ಕತ್ತರಿಸಿದ ತರಕಾರಿ ಮತ್ತು ಸಕ್ಕರೆ ಸೇರಿಸಿ ದೊಡ್ಡ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಹುರಿದರೆ ಸಾಕು. 
  4. ಈಗ ಬೇಯಿಸಿಟ್ಟು ಕೊಂಡ ಅನ್ನವನ್ನು ಸೇರಿಸಿ. 
  5. ನಂತರ ಅದಕ್ಕೆ ಉಪ್ಪು ಮತ್ತು ವಿನೆಗರ್ (ಅಥವಾ ನಿಂಬೆ ರಸ) ಸೇರಿಸಿ. ಬೇಕಾದಲ್ಲಿ 1/4 ಟೀಸ್ಪೂನ್ ಕಾಳುಮೆಣಸಿನ ಪುಡಿಯನ್ನೂ ಸೇರಿಸಿ. 
  6. ಅದಕ್ಕೆ ಬೇಯಿಸಿದ ಅನ್ನ ಸೇರಿಸಿ ದೊಡ್ಡ ಉರಿಯಲ್ಲಿ ಹುರಿಯಿರಿ. ಸ್ಟವ್ ಆಫ್ ಮಾಡಿ. 
  7. ಕತ್ತರಿಸಿದ ಈರುಳ್ಳಿ ಗಿಡದಿಂದ ಅಲಂಕರಿಸಿ. 
  8. ಕಾಳುಮೆಣಸಿನ ಪುಡಿ ಮತ್ತು ಟೊಮೆಟೊ ಸಾಸ್ ನೊಂದಿಗೆ ಬಡಿಸಿ. ಸವಿದು ಆನಂದಿಸಿ.

ಗುರುವಾರ, ಆಗಸ್ಟ್ 18, 2016

Puliyogare recipe in Kannada | ಪುಳಿಯೋಗರೆ ಮಾಡುವ ವಿಧಾನ

Puliyogare recipe in Kannada

Puliyogare recipe in Kannada | ಪುಳಿಯೋಗರೆ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1/4 ಕಪ್ ಅಡುಗೆ ಎಣ್ಣೆ 
  3. 1 ನಿಂಬೆ ಗಾತ್ರದ ಹುಣಸೆ ಹಣ್ಣು 
  4. 1 ನಿಂಬೆ ಗಾತ್ರದ ಬೆಲ್ಲ 
  5. 1/4 ಟೀಸ್ಪೂನ್ ಅರಶಿನ ಪುಡಿ
  6. 3 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)

ಪುಳಿಯೋಗರೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಟೇಬಲ್ ಸ್ಪೂನ್ ಎಳ್ಳು
  2. 6 - 8 ಕೆಂಪು ಮೆಣಸಿನಕಾಯಿ ( ಗುಂಟೂರು ಮತ್ತು ಬ್ಯಾಡಗಿಯಲ್ಲಿ ಎರಡೂ ಬಳಸಿ ; ನಾನು ಮಧ್ಯಮ ಖಾರದ ಮೆಣಸಿನಕಾಯಿಗಳನ್ನು ಬಳಸಿದ್ದೇನೆ) 
  3. 2 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕಡಲೆಬೇಳೆ 
  5. 4 ಟೀಸ್ಪೂನ್ ಕೊತ್ತಂಬರಿ ಬೀಜ 
  6. 2 ಟೀಸ್ಪೂನ್ ಜೀರಿಗೆ
  7. 1/4 ಟೀಸ್ಪೂನ್ ಸಾಸಿವೆ 
  8. 1/4 ಟೀಸ್ಪೂನ್ ಮೆಂತ್ಯ 
  9. 1/4 - 1/2 ಟೀಸ್ಪೂನ್ ಕರಿಮೆಣಸು 
  10. 1/4 ಟೀಸ್ಪೂನ್ ಇಂಗು 
  11. 1/2 ಕಪ್ ತುರಿದ ಕೊಬ್ಬರಿ 
  12. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 2 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕಡಲೆಬೇಳೆ 
  5. 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಬೀಜ ಅಥವಾ ಶೇಂಗಾ
  6. 8 - 10 ಗೋಡಂಬಿ
  7. 1 ಟೀಸ್ಪೂನ್ ಎಳ್ಳು
  8. 5 - 6 ಕರಿಬೇವಿನ ಎಲೆ
  9. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಪುಳಿಯೋಗರೆ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ ಮತ್ತು ಹುಣಿಸೆಹಣ್ಣನ್ನು ೧ ಕಪ್ ನೀರಿನಲ್ಲಿ ನೆನೆಸಿಡಿ. 
  2. ಪುಳಿಯೋಗರೆ ಪುಡಿಗೆ ಬೇಕಾಗುವ ಎಲ್ಲ ಪದಾರ್ಥಗಳನ್ನು ಹುರಿಯಿರಿ. ಎಳ್ಳನ್ನು ಪ್ರತ್ಯೇಕವಾಗಿ ಎಣ್ಣೆ ಹಾಕದೆ ಹುರಿಯಿರಿ. ನಂತರ ಕೊಬ್ಬರಿ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು 1 ಟೀಸ್ಪೂನ್ ಅಡುಗೆ ಎಣ್ಣೆ ಹಾಕಿ ಹುರಿಯಿರಿ. ಕೊನೆಯಲ್ಲಿ ಕೊಬ್ಬರಿಯನ್ನು ಹುರಿಯಿರಿ. 
  3. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. 
  4. ನಂತರ ಹುಣಿಸೆರಸ, ಅರಶಿನ ಪುಡಿ, ಉಪ್ಪು ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಕುದಿಯಲು ಇಡಿ. 
  5.  ಕುದಿದು ಸ್ವಲ್ಪ ಗಟ್ಟಿಯಾದ ಮೇಲೆ ಮಸಾಲೆ ಪುಡಿ ಮತ್ತು ೧/೪ ಕಪ್ ಎಣ್ಣೆ ಹಾಕಿ. 
  6. ಎಣ್ಣೆ ಬಿಡುವವರೆಗೆ ಕುದಿಸಿ ಸ್ಟವ್ ಆಫ್ ಮಾಡಿ. ಪುಳಿಯೋಗರೆ ಗೊಜ್ಜು ತಯಾರಾಯಿತು. 
  7. ಈಗ ಇನ್ನೊಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ. 
  8. ನಂತರ ಬೇಯಿಸಿಟ್ಟ ಅನ್ನಕ್ಕೆ, ಒಗ್ಗರಣೆ ಮತ್ತು 2 ಟೇಬಲ್ ಸ್ಪೂನ್  ನಷ್ಟು ಗೊಜ್ಜು ಹಾಕಿ ಕಲಸಿ.  ಬೇಕಾದಲ್ಲಿ  ರುಚಿಗೆ ತಕ್ಕಷ್ಟು ಗೊಜ್ಜು ಸೇರಿಸಿ. ಚೆನ್ನಾಗಿ ಕಲಸಿ ಬಡಿಸಿ. 

ಮಂಗಳವಾರ, ಆಗಸ್ಟ್ 16, 2016

Godhi nucchu or kadi uppittu recipe in kannada | ಗೋಧಿ ನುಚ್ಚು ಉಪ್ಪಿಟ್ಟು ಮಾಡುವ ವಿಧಾನ

Godhi nucchu or kadi uppittu recipe in kannada

Godhi nucchu or kadi uppittu recipe in kannada | ಗೋಧಿ ನುಚ್ಚು ಉಪ್ಪಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಗೋಧಿ ನುಚ್ಚು
  2. 2 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ
  7. 1 ಟೊಮ್ಯಾಟೋ 
  8. 1-2 ಹಸಿರು ಮೆಣಸಿನಕಾಯಿ
  9. 4-5 ಕರಿ ಬೇವಿನ ಎಲೆ
  10. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  11. 1/4 ಟೀಸ್ಪೂನ್ ಅರಶಿನ ಪುಡಿ
  12. 6-8 ಟೀಸ್ಪೂನ್ ಅಡುಗೆ ಎಣ್ಣೆ
  13. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  14. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1/2 ಕಪ್ ತೆಂಗಿನತುರಿ

ಗೋಧಿ ನುಚ್ಚು ಉಪ್ಪಿಟ್ಟು ಮಾಡುವ ವಿಧಾನ:

  1. ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  2. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  4. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. 
  5. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ.  ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  6. 2 ಕಪ್ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಗೋಧಿ ನುಚ್ಚನ್ನು ಹಾಕಿ ಮಗುಚಿ. 
  7. ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  8. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ.  ಸ್ಟವ್ ಆಫ್ ಮಾಡಿ, ಬಡಿಸಿ. 



ಶುಕ್ರವಾರ, ಆಗಸ್ಟ್ 12, 2016

White sauce macaroni pasta in Kannada | ಪಾಸ್ತಾ ಮಾಡುವ ವಿಧಾನ

White sauce macaroni pasta in Kannada

White sauce macaroni pasta in Kannada | ಪಾಸ್ತಾ ಮಾಡುವ ವಿಧಾನ 

Video: How to make macaroni pasta

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಪಾಸ್ತಾ
  2. 1/2 ಕಪ್ ಕತ್ತರಿಸಿದ ಮಿಶ್ರ ತರಕಾರಿಗಳು ( ಕ್ಯಾರೆಟ್, ಕ್ಯಾಪ್ಸಿಕಂ, ಜೋಳ, ಹಸಿ ಬಟಾಣಿ, ಹೂಕೋಸು, ಬ್ರೊಕೋಲಿ, ಈರುಳ್ಳಿ ಗಿಡ, ಎಲೆಕೋಸು ಮತ್ತು ಬೀನ್ಸ್ ಇವುಗಳಲ್ಲಿ ಆಯ್ಕೆ ಮಾಡಿ)
  3. 1 ಟೇಬಲ್ ಚಮಚ ಮೈದಾ
  4. 1/2 ಕಪ್ ಹಾಲು
  5. 1/2 - 3/4 ಕಪ್ ನೀರು
  6. 1/4 ಟೀಸ್ಪೂನ್ ಪಾಸ್ತಾ ಅಥವಾ ಪಿಜ್ಜಾ ಮಸಾಲೆ ಪುಡಿ
  7. 1/4 ಚಮಚ ಕಾಳುಮೆಣಸಿನ ಪುಡಿ
  8. 2 ಟೇಬಲ್ ಚಮಚ ಬೆಣ್ಣೆ
  9. 2 - 3 ಎಸಳು ಬೆಳ್ಳುಳ್ಳಿ
  10. ನಿಮ್ಮ ರುಚಿ ಪ್ರಕಾರ ಉಪ್ಪು

ಪಾಸ್ತಾ ಮಾಡುವ ವಿಧಾನ:

  1. ಒಂದು ಬಾಣಲೆಗೆ ಒಂದು ಟೇಬಲ್ ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಕತ್ತರಿಸಿದ ತರಕಾರಿ ಸೇರಿಸಿ ಹುರಿದು ಪಕ್ಕಕ್ಕಿಡಿ. ಸ್ವಲ್ಪ ಹುರಿದರೆ ಸಾಕು.
  2. ನಂತ್ರ ಅದೇ ಬಾಣಲೆಗೆ ಉಳಿದ ಇನ್ನೊಂದು ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಮೈದಾ ಹಿಟ್ಟು ಮತ್ತು ಹಾಲು ಹಾಕಿ ಗಂಟಿಲ್ಲದಂತೆ ಮಗುಚಿ.
  3. ನಂತರ ಅದಕ್ಕೆ ೧/೨ ಕಪ್ ನೀರು ಹಾಕಿ ಕುದಿಸಿ.
  4. ಅದಕ್ಕೆ ಬೇಯಿಸಿದ ಪಾಸ್ತಾ ಮತ್ತು ಹುರಿದ ತರಕಾರಿ ಸೇರಿಸಿ.
  5. ಪಾಸ್ತಾ ಅಥವಾ ಪಿಜ್ಜಾ ಮಸಾಲೆ ಪುಡಿ ಮತ್ತು ಕಾಳುಮೆಣಸಿನ ಪುಡಿ ಹಾಕಿ.
  6. ಉಪ್ಪು ಹಾಕಿ ಮತ್ತು ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ. ಸವಿದು ಆನಂದಿಸಿ.

ಗುರುವಾರ, ಆಗಸ್ಟ್ 11, 2016

Harive soppu or dantu soppu huli in Kannada | ಹರಿವೆ ಸೊಪ್ಪು ಅಥವಾ ದಂಟು ಸೊಪ್ಪಿನ ಹುಳಿ ಮಾಡುವ ವಿಧಾನ

Harive soppu or dantu soppu huli in Kannada

Harive soppu or dantu soppu huli in Kannada | ಹರಿವೆ ಸೊಪ್ಪು ಅಥವಾ ದಂಟು ಸೊಪ್ಪಿನ ಹುಳಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಹರಿವೆ ಸೊಪ್ಪು ಅಥವಾ ದಂಟಿನ ಸೊಪ್ಪು 
  2. 2 - 4 ಹಸಿರು ಮೆಣಸಿನಕಾಯಿ 
  3. 2 ಟೀಸ್ಪೂನ್ ಕೊತ್ತಂಬರಿ ಬೀಜ 
  4. 1/2 ಟೀಸ್ಪೂನ್ ಜೀರಿಗೆ 
  5. 1/4 ಟೀಸ್ಪೂನ್ ಸಾಸಿವೆ 
  6. 1/2 ಕಪ್ ತೆಂಗಿನ ತುರಿ 
  7. 2 ಟೀಸ್ಪೂನ್ ಅಕ್ಕಿ
  8. ಒಂದು ಚಿಟಿಕೆ ಅರಶಿನ ಪುಡಿ 
  9. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  10. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಹರಿವೆ ಸೊಪ್ಪು ಅಥವಾ ದಂಟು ಸೊಪ್ಪಿನ ಹುಳಿ ಮಾಡುವ ವಿಧಾನ:

  1. ಹರಿವೆ ಸೊಪ್ಪನ್ನು ತೊಳೆದು ಕತ್ತರಿಸಿ.
  2. ಕತ್ತರಿಸಿದ ಸೊಪ್ಪು, ಅರಶಿನ, ಉಪ್ಪು, ಸೀಳಿದ ಹಸಿರು ಮೆಣಸಿನಕಾಯಿ ಮತ್ತು ನೀರು ಹಾಕಿ ಬೇಯಿಸಿ. 
  3. ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ತೆಂಗಿನ ತುರಿ ಮತ್ತು ತೊಳೆದ ಅಕ್ಕಿಯನ್ನು ಮಿಕ್ಸಿಯಲ್ಲಿ ಅರೆಯಿರಿ. 
  4. ಬೇಯಿಸಿದ ಸೊಪ್ಪಿಗೆ ಅರೆದ ಮಸಾಲೆ ಹಾಕಿ.
  5. ಉಪ್ಪು ಮತ್ತು ಹುಣಿಸೆ ಹಣ್ಣಿನ ರಸ ಸೇರಿಸಿ. 
  6. ಬೇಕಾದಷ್ಟು ನೀರು ಸೇರಿಸಿ ಕುದಿಸಿ.
  7. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ, ಆನಂದಿಸಿ !!


ಮಂಗಳವಾರ, ಆಗಸ್ಟ್ 9, 2016

Onion or eerulli dose recipe in Kannada | ಈರುಳ್ಳಿ ದೋಸೆ ಮಾಡುವ ವಿಧಾನ

Onion or eerulli dose recipe in Kannada

Onion or eerulli dose recipe in Kannada | ಈರುಳ್ಳಿ ದೋಸೆ ಮಾಡುವ ವಿಧಾನ

ಈರುಳ್ಳಿ  ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ದೊಡ್ಡ ದೋಸೆಗೆ ಬೇಕಾಗುವಷ್ಟು ಸೆಟ್ ದೋಸೆ ಹಿಟ್ಟು 
  2. 2 ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  3. 1 - 2 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  4. 4 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  5. 1 ಸಣ್ಣ ಕ್ಯಾರಟ್ ತುರಿದಿದ್ದು
  6. ಎಣ್ಣೆ ಅಥವಾ ತುಪ್ಪ ಕಾಯಿಸಲು
  7. ಉಪ್ಪು ರುಚಿಗೆ ತಕ್ಕಷ್ಟು.

ಈರುಳ್ಳಿ ದೋಸೆ ಮಾಡುವ ವಿಧಾನ:

  1. ಈರುಳ್ಳಿ , ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟು ಕೊಳ್ಳಿ. ಕ್ಯಾರಟ್ ನ್ನು ತುರಿದಿಟ್ಟು ಕೊಳ್ಳಿ. 
  2. ಸ್ವಲ್ಪ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿಟ್ಟು ಕೊಳ್ಳಿ. 
  3. ಒಂದು ದೊಡ್ಡ ಸೌಟು ಹಿಟ್ಟನ್ನು ಬಿಸಿ ತವಾ ಮೇಲೆ ಸುರಿದು ಮೇಲಿನಿಂದ ಹೆಚ್ಚಿದ ಈರುಳ್ಳಿ , ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕ್ಯಾರಟ್ ಮಿಶ್ರಣವನ್ನು ಹಾಕಿ. 
  4. ದೋಸೆ ಸಟ್ಟುಗದಿಂದ ಮೆಲ್ಲನೆ ಒತ್ತಿ. ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಬದಿ ಕಾಯಿಸಿ. 
  5. ಅಥವಾ ಬೇಕಾದಲ್ಲಿ ನೀವು ಹೆಚ್ಚಿದ ಈರುಳ್ಳಿ , ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕ್ಯಾರಟ್ ಮಿಶ್ರಣವನ್ನು ನೇರವಾಗಿ ದೋಸೆ ಹಿಟ್ಟಿಗೆ ಸೇರಿಸಿ ನಂತರ ದೋಸೆ ಮಾಡಬಹುದು. ಕಾಯಿ ಚಟ್ನಿ ಅಥವಾ ಸಾಗುವಿನೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು. 

ಭಾನುವಾರ, ಆಗಸ್ಟ್ 7, 2016

Thondekai majjige huli recipe in Kannada | ತೊಂಡೆಕಾಯಿ ಮಜ್ಜಿಗೆ ಹುಳಿ ಅಥವಾ ಕಾಯಿ ಹುಳಿ ಮಾಡುವ ವಿಧಾನ

Mangalore style thondekai majjige huli recipe in Kannada

Thondekai majjige huli recipe in Kannada | ತೊಂಡೆಕಾಯಿ ಮಜ್ಜಿಗೆ ಹುಳಿ ಅಥವಾ ಕಾಯಿ ಹುಳಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ತೊಂಡೆಕಾಯಿ
  2. 1/4 ಕಪ್ ಕಾಬೂಲ್ ಕಡ್ಲೆ 
  3. 1 - 2 ಹಸಿರು ಮೆಣಸಿನಕಾಯಿ
  4. 1/4 ಕಪ್ ಹುಳಿಮಜ್ಜಿಗೆ ಅಥವಾ 1/2 ಕಪ್ ಮಜ್ಜಿಗೆ 
  5. 1 ಕಪ್ ತೆಂಗಿನ ತುರಿ 
  6. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ 
  3. 1 ಕೆಂಪು ಮೆಣಸಿನಕಾಯಿ
  4. ಒಂದು ಚಿಟಿಕೆ ಇಂಗು
  5. 5 - 6 ಕರಿಬೇವಿನ ಎಲೆ
  6. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ

ತೊಂಡೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ:

  1. ಕಡ್ಲೆಯನ್ನು 7-8 ಘಂಟೆಗಳ ಕಾಲ ನೆನೆಸಿ. 
  2. ತೊಂಡೆಕಾಯಿಯನ್ನು ತೊಳೆದು ಉದ್ದುದ್ದವಾಗಿ ಕತ್ತರಿಸಿ. 
  3. ಕತ್ತರಿಸಿದ ತೊಂಡೆಕಾಯಿ, ನೆನೆಸಿದ ಕಡ್ಲೆ ಕಾಳು, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ನೀರನ್ನು ಕುಕ್ಕರ್ ಗೆ ಹಾಕಿ ಬೇಯಿಸಿಕೊಳ್ಳಿ. 
  4. ಮಿಕ್ಸಿ ಜಾರಿನಲ್ಲಿ ತೆಂಗಿನತುರಿಯನ್ನು ನುಣ್ಣನೆ ಅರೆದು ಕೊಳ್ಳಿ. 
  5. ಅದಕ್ಕೆ ಹಸಿರುಮೆಣಸಿನಕಾಯಿ ಮತ್ತು ಮಜ್ಜಿಗೆ ಹಾಕಿ ಒಂದೆರಡು ಸುತ್ತು ಅರೆದು ತೆಗೆಯಿರಿ. 
  6. ರುಬ್ಬಿದ ಮಸಾಲೆಯನ್ನು ಬೇಯಿಸಿದ ತೊಂಡೆಕಾಯಿಗೆ ಸೇರಿಸಿ.
  7. ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
  8. ಚೆನ್ನಾಗಿ ಕಲಸಿ, ಕುದಿಯಲು ಇಡಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ. ಹೆಚ್ಚು ಕುದಿಸಬೇಡಿ. 
  9. ಎಣ್ಣೆ, ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶನಿವಾರ, ಆಗಸ್ಟ್ 6, 2016

Hagalakayi chutney recipe in Kannada | ಹಾಗಲಕಾಯಿ ಚಟ್ನಿ ಮಾಡುವ ವಿಧಾನ

Hagalakayi chutney recipe in Kannada

Hagalakayi chutney recipe in Kannada | ಹಾಗಲಕಾಯಿ ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಹಾಗಲಕಾಯಿ
  2. 1 ಕಪ್ ತೆಂಗಿನ ತುರಿ
  3. 2 - 4 ಒಣ ಮೆಣಸಿನಕಾಯಿ
  4. 4 ಟೀಸ್ಪೂನ್ ಉದ್ದಿನ ಬೇಳೆ
  5. 1/4 ಟೀಸ್ಪೂನ್ ಸಾಸಿವೆ 
  6. ಗೋಲಿ ಗಾತ್ರದ ಹುಣಿಸೇಹಣ್ಣು 
  7. 2 ಟೀಸ್ಪೂನ್ ಅಡುಗೆ ಎಣ್ಣೆ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಹಾಗಲಕಾಯಿ ಚಟ್ನಿ ಮಾಡುವ ವಿಧಾನ:

  1. ಹಾಗಲಕಾಯಿಯನ್ನು ತೊಳೆದು ಉದ್ದನಾಗಿ ಕತ್ತರಿಸಿ. 
  2. ಬೀಜವನ್ನು ತೆಗೆದು ಸಾಧ್ಯವಾದಷ್ಟು ತೆಳುವಾಗಿ ಕತ್ತರಿಸಿಕೊಳ್ಳಿ.  
  3. ಕತ್ತರಿಸಿದ ಹಾಗಲಕಾಯಿಯನ್ನು ಉಪ್ಪು ನೀರಿನಲ್ಲಿ ೧೦ ನಿಮಿಷ ಹಾಕಿಡಿ. 
  4. ಬಾಣಲೆ ಬಿಸಿ ಮಾಡಿ, 1/2 ಚಮಚ ಎಣ್ಣೆ, ಒಣ ಮೆಣಸಿನಕಾಯಿ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.
  5. ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ.
  6. ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ, ನೀರು ಹಿಂಡಿ ತೆಗೆದ ಹಾಗಲಕಾಯಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಅಥವಾ ಗರಿ ಗರಿಯಾಗುವವರೆಗೆ ಹುರಿಯಿರಿ. 
  7. ತೆಂಗಿನ ತುರಿ, ಹುರಿದ ಒಣ ಮೆಣಸು, ಸಾಸಿವೆ, ಉದ್ದಿನಬೇಳೆ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  8. ನಂತರ ಹುರಿದ ಹಾಗಲಕಾಯಿ ಹಾಕಿ ಒಂದೆರಡು ಸುತ್ತು ಅರೆದು ತೆಗೆಯಿರಿ. 
  9. ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ. 

 

ಶುಕ್ರವಾರ, ಆಗಸ್ಟ್ 5, 2016

Halbai recipe in Kannada | ಹಾಲುಬಾಯಿ ಮಾಡುವ ವಿಧಾನ

Halbai recipe in Kannada

Halbai recipe in Kannada | ಹಾಲುಬಾಯಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/2 ಕಪ್ ತೆಂಗಿನ ತುರಿ
  3. 1/2 ಕಪ್ ಹೆಚ್ಚಿದ ಮುಳ್ಳು ಸೌತೆಕಾಯಿ (ಬೇಕಾದಲ್ಲಿ)
  4. 1 ಕಪ್ ಬೆಲ್ಲ
  5. 2 ಟೇಬಲ್ ಸ್ಪೂನ್ ತುಪ್ಪ
  6. 1/4 ಟೀಸ್ಪೂನ್ ಉಪ್ಪು
  7. 3 ಕಪ್ ನೀರು (ಅರೆಯಲು ಬಳಸಿದ ನೀರನ್ನು ಸೇರಿಸಿದೆ)

ಹಾಲುಬಾಯಿ ಮಾಡುವ ವಿಧಾನ :

  1. ಅಕ್ಕಿಯನ್ನು ತೊಳೆದು 2-3 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ಅಕ್ಕಿ, ತೆಂಗಿನ ತುರಿ ಮತ್ತು ಹೆಚ್ಚಿದ ಮುಳ್ಳು ಸೌತೆಕಾಯಿಯನ್ನು ಬೇಕಾದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  3. ಅರೆದ ನಂತರ ಒಂದು ದಪ್ಪ ತಳದ ಬಾಣಲೆಗೆ ಹಿಟ್ಟನ್ನು ಸುರಿಯಿರಿ. ಉಳಿದ ನೀರನ್ನು ಸೇರಿಸಿ ತೆಳುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. 
  4. ಬೆಲ್ಲ ಮತ್ತು ಉಪ್ಪು ಹಾಕಿ. 
  5. ಸ್ಟವ್ ಆನ್ ಮಾಡಿ, ಸ್ಟವ್ ಮೇಲಿಟ್ಟು ಮಗುಚಿ. 
  6. ಗಟ್ಟಿಯಾದ ಕೂಡಲೇ ತುಪ್ಪ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ. 
  7. ಸುಮಾರು ಹತ್ತು ನಿಮಿಷದ ನಂತರ ಹಾಲುಬಾಯಿ ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಹಾಲುಬಾಯಿಯನ್ನು ತುಪ್ಪ ಸವರಿದ ಟ್ರೇ ಗೆ ಸುರಿಯಿರಿ. ಬಿಸಿ ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿಯಿರಿ.


ಗುರುವಾರ, ಆಗಸ್ಟ್ 4, 2016

Kara kadle usli recipe in Kannada | ಕಡ್ಲೆ ಉಸ್ಲಿ ಮಾಡುವ ವಿಧಾನ

Kara kadle usli recipe in Kannada | ಕಡ್ಲೆ ಉಸುಳಿ ಮಾಡುವ ವಿಧಾನ

ಕಡ್ಲೆ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡಲೆ ಕಾಳು
  2. 2 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/4 ಟೀಸ್ಪೂನ್ ಸಾಸಿವೆ 
  4. 1 ಕೆಂಪು ಮೆಣಸಿನಕಾಯಿ 
  5. 1 ಟೀಸ್ಪೂನ್ ಉದ್ದಿನ ಬೇಳೆ
  6. ಒಂದು ಚಿಟಿಕೆ ಅರಿಶಿನ ಪುಡಿ
  7. ಒಂದು ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ 
  2. 2 - 4 ಹಸಿರು ಮೆಣಸಿನಕಾಯಿ 
  3. ಒಂದು ಸಣ್ಣ ಹಿಡಿ ಕೊತಂಬರಿ ಸೊಪ್ಪು 
  4. 1 cm ಉದ್ದದ ಶುಂಠಿ

ಖಾರ ಕಡ್ಲೆ ಉಸ್ಲಿ ಮಾಡುವ ವಿಧಾನ:

  1. ಕಡ್ಲೆಕಾಳನ್ನು 7 - 8 ಘಂಟೆಗಳ ಕಾಲ ನೆನೆಸಿ. ಕಡ್ಲೆ ಮುಚ್ಚುವಷ್ಟು ನೀರು ಹಾಕಿ ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
  2. ಆ ಸಮಯದಲ್ಲಿ ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಕೊತಂಬರಿ ಸೊಪ್ಪು ಮತ್ತು ಶುಂಠಿಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಿ ಮಸಾಲೆ ತಯಾರಿಸಿಟ್ಟು ಕೊಳ್ಳಿ. 
  3. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
  4. ಅದಕ್ಕೆ ಬೇಯಿಸಿದ ಕಡ್ಲೆಯನ್ನು ಬೇಯಿಸಿದ ನೀರು ಸಹಿತ ಹಾಕಿ. 
  5. ಅರೆದ ಮಸಾಲೆ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಗುಚಿ. 
  6. ನೀರಾರುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚೆನ್ನಾಗಿ ಮಗುಚಿ ಚಹಾದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Kadle usli recipe in Kannada | ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ

Kadle usli recipe in Kannada

Kadle usli recipe in Kannada | ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡಲೆ ಕಾಳು
  2. 1 - 2 ಟೇಬಲ್ ಚಮಚ ಬೆಲ್ಲ 
  3. 2 ಟೇಬಲ್ ಚಮಚ ಅಡುಗೆ ಎಣ್ಣೆ
  4. 1/4 ಟೀಸ್ಪೂನ್ ಸಾಸಿವೆ 
  5. 1 ಕೆಂಪು ಮೆಣಸಿನಕಾಯಿ 
  6. 1 ಟೀಸ್ಪೂನ್ ಉದ್ದಿನ ಬೇಳೆ
  7. ಒಂದು ಚಿಟಿಕೆ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ 
  2. 2 - 4 ಕೆಂಪು ಮೆಣಸಿನಕಾಯಿ 
  3. 1/4 ಟೀಸ್ಪೂನ್ ಸಾಸಿವೆ

ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ:

  1. ಕಡ್ಲೆಕಾಳನ್ನು 7 - 8 ಘಂಟೆಗಳ ಕಾಲ ನೆನೆಸಿ. ಕಡ್ಲೆ ಮುಚ್ಚುವಷ್ಟು ನೀರು ಹಾಕಿ ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
  2. ಆ ಸಮಯದಲ್ಲಿ ತೆಂಗಿನ ತುರಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಿ ಮಸಾಲೆ ತಯಾರಿಸಿಟ್ಟು ಕೊಳ್ಳಿ. 
  3. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
  4. ಅದಕ್ಕೆ ಬೇಯಿಸಿದ ಕಡ್ಲೆಯನ್ನು ಬೇಯಿಸಿದ ನೀರು ಸಹಿತ ಹಾಕಿ. 
  5. ಅರೆದ ಮಸಾಲೆ, ಬೆಲ್ಲ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಗುಚಿ. 
  6. ನೀರಾರುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಈ ಉಸುಳಿ ಸ್ವಲ್ಪ ನೀರು ನೀರಾಗಿರಬೇಕು.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಆಗಸ್ಟ್ 3, 2016

Layered parota recipe in Kannada | ಪದರು ಪದರಾದ ಪರೋಟ ಮಾಡುವ ವಿಧಾನ

Layered parota recipe in Kannada

Layered parota recipe in Kannada | ಪದರು ಪದರಾದ ಪರೋಟ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಮೃದುವಾದ ಚಪಾತಿ ಹಿಟ್ಟು 
  2. ಪಾಸ್ತಾ ಅಥವಾ ಪಿಜ್ಜಾ ಸೀಸನಿಂಗ್ (ಬೇಕಾದಲ್ಲಿ ಅಥವಾ ಬೇರೆ ನಿಮ್ಮಿಷ್ಟದ ಮಸಾಲೆ ಪುಡಿ)
  3. ಅಡುಗೆ ಎಣ್ಣೆ 
  4. ಗೋಧಿ ಹಿಟ್ಟು ಸ್ವಲ್ಪ


ಪದರು ಪದರಾದ ಪರೋಟ ಮಾಡುವ ವಿಧಾನ:

  1. ಮೊದಲಿಗೆ ಒಂದು ನಿಂಬೆ ಗಾತ್ರದ ಚಪಾತಿ ಹಿಟ್ಟು ತೆಗೆದುಕೊಂಡು ತೆಳುವಾದ ಚಪಾತಿ ಮಾಡಿ. 
  2. ಅದರ ಮೇಲೆ ಎಣ್ಣೆ, ಮಸಾಲೆ ಪುಡಿ ಮತ್ತು ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿ. 
  3. ಚಪಾತಿಯನ್ನು ಸುತ್ತಿ ಎರಡು ಭಾಗವಾಗಿ ಸೀಳಿ. ಒಂದು ಬದಿ ಕೂಡಿ ಕೊಂಡಿರಲಿ. 
  4. ನಂತರ ಸೀಳಿದ ಚಪಾತಿಯನ್ನು ವೃತ್ತಾಕಾರವಾಗಿ ಸುತ್ತಿ ಪುನಃ ಲಟ್ಟಿಸಿ. ದಯವಿಟ್ಟು ಮೇಲೆ ನೀಡಿದ ವಿಡಿಯೋ ನೋಡಿ. 
  5. ಬಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ. ನಿಮ್ಮಿಷ್ಟದ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಆಗಸ್ಟ್ 1, 2016

Alugadde bonda recipe in Kannada | ಆಲೂಗಡ್ಡೆ ಬೋಂಡಾ ಮಾಡುವ ವಿಧಾನ

Alugadde bonda recipe in Kannada

Alugadde bonda recipe in Kannada | ಆಲೂಗಡ್ಡೆ ಬೋಂಡಾ ಮಾಡುವ ವಿಧಾನ 

ಆಲೂ ಬೋಂಡಾ ವಿಡಿಯೋ

ಆಲೂ ಪಲ್ಯಕ್ಕೆ ಬೇಕಾದ ಪದಾರ್ಥಗಳು:

  1. 2 ದೊಡ್ಡ ಆಲೂಗಡ್ಡೆ
  2. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  3. 1-2 ಹೆಚ್ಚಿದ ಹಸಿರು ಮೆಣಸು
  4. 1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ
  5. 1/4 ಚಮಚ ಸಾಸಿವೆ
  6. 1/4 ಟೀಸ್ಪೂನ್ ಜೀರಿಗೆ
  7. ಒಂದು ಚಿಟಿಕೆ ಅರಿಶಿನ ಪುಡಿ
  8. ಒಂದು ಚಿಟಿಕೆ ಇಂಗು
  9. 4 - 5 ಹೆಚ್ಚಿದ ಕರಿಬೇವಿನ ಎಲೆ
  10. 1 ಟೀಸ್ಪೂನ್ ಅಡುಗೆ ಎಣ್ಣೆ
  11. ಉಪ್ಪು ರುಚಿಗೆ ತಕ್ಕಷ್ಟು.

ಹಿಟ್ಟಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 2 ಟೇಬಲ್ ಸ್ಪೂನ್ ಅಕ್ಕಿ ಪುಡಿ
  3. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  4. ಒಂದು ಸಣ್ಣ ಚಿಟಿಕೆ ಅಡುಗೆ ಸೋಡಾ
  5. ಒಂದು ಚಿಟಿಕೆ ಅರಿಶಿನ ಪುಡಿ
  6. ಅಡುಗೆ ಎಣ್ಣೆ ಬೋಂಡಾ ಕಾಯಿಸಲು
  7. ಉಪ್ಪು ರುಚಿಗೆ ತಕ್ಕಷ್ಟು.

ಆಲೂಗಡ್ಡೆ ಬೋಂಡಾ ಮಾಡುವ ವಿಧಾನ :

  1. ಆಲೂಗಡ್ಡೆಯನ್ನು ತೊಳೆದು ಬೇಯಿಸಿ. ತಂಪಾದ ಮೇಲೆ ಸಿಪ್ಪೆಯನ್ನು ತೆಗೆದು, ಪುಡಿ ಮಾಡಿಕೊಳ್ಳಿ.
  2. ಅದಕ್ಕೆ ಹೆಚ್ಚಿದ ಹಸಿರು ಮೆಣಸಿನ ಕಾಯಿ, ಹೆಚ್ಚಿದ ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. 
  3. ಒಂದು ಸಣ್ಣ ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ, ಸಾಸಿವೆ, ಜೀರಿಗೆ, ಅರಿಶಿನ ಪುಡಿ, ಇಂಗು ಮತ್ತು ಹೆಚ್ಚಿದ ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
  4. ಒಗ್ಗರಣೆಯನ್ನು ಪುಡಿಮಾಡಿದ ಆಲೂಗಡ್ಡೆಗೆ ಹಾಕಿ ಕಲಸಿ. ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ ಪಕ್ಕಕ್ಕಿಡಿ
  5. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಅರಿಶಿನ ಪುಡಿ, ಸೋಡಾ ಮತ್ತು ಉಪ್ಪನ್ನು ಹಾಕಿ. ಸ್ವಲ್ಪ ನೀರು ಸೇರಿಸಿ ದಪ್ಪ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
  6. ಆಲೂಗಡ್ಡೆ ಉಂಡೆಗಳನ್ನು ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕಾಯಿಸಿ. ಬಿಸಿ ಬಿಸಿ ಆಲೂಗಡ್ಡೆ ಬೋಂಡಾ ಸವಿಯಲು ಸಿದ್ಧ.

Related Posts Plugin for WordPress, Blogger...