Uddina vade recipe in Kannada | ಉದ್ದಿನ ವಡೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಉದ್ದಿನಬೇಳೆ
- 1/2 ಕಪ್ ಅಕ್ಕಿ
- 1/4 ಕಪ್ ನೀರು
- 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
- 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ತೆಂಗಿನ ಕಾಯಿ (ಬೇಕಾದಲ್ಲಿ)
- ನಿಮ್ಮ ರುಚಿ ಪ್ರಕಾರ ಉಪ್ಪು
ಉದ್ದಿನ ವಡೆ ಮಾಡುವ ವಿಧಾನ:
- ಉದ್ದಿನಬೇಳೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ.
- ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಬಟ್ಟಲಿನಲ್ಲಿ ಹಾಕಿ ನೀರಾರಲು ಬಿಡಿ.
- ಅಕ್ಕಿ ನೀರಾರಿದ ಮೇಲೆ, ಒಂದು ಬಾಣಲೆಗೆ ಹಾಕಿ ಬಿಳಿ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ, ಸಾರಣಿಸಿ ಪಕ್ಕಕ್ಕಿಡಿ.
- ಉದ್ದಿನಬೇಳೆ ನೆನೆದ ನಂತರ ನೀರು ಬಗ್ಗಿಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ರುಬ್ಬಿ ಕೊಳ್ಳಿ. 1/4 ಕಪ್ ನಷ್ಟು ನೀರು ಸೇರಿಸಬಹುದು.
- ರುಬ್ಬಿದ ಹಿಟ್ಟನ್ನು ಪಾತ್ರೆಗೆ ಹಾಕಿ. ಅಗತ್ಯವಿದ್ದಷ್ಟು ಹುರಿದು ಸಿದ್ಧ ಪಡಿಸಿದ ಅಕ್ಕಿ ಹಿಟ್ಟನ್ನು ಸೇರಿಸಿ.
- ನಂತರ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಶುಂಠಿ, ತೆಂಗಿನಕಾಯಿ ಮತ್ತು ಉಪ್ಪು ಹಾಕಿ ಕಲಸಿ.
- ಈಗ ಕೈಗೆ ನೀರು ಮುಟ್ಟಿಸಿ ವಡೆಗಳನ್ನು ಮಾಡಿ ಬಿಸಿ ಎಣ್ಣೆಯಲ್ಲಿ ಕಾಯಿಸಿ. ವಡೆ ಮಾಡಲು ಕಷ್ಟವೆನಿಸಿದಲ್ಲಿ ಗೋಳಿಬಜೆ ಅಥವಾ ಮಂಗಳೂರು ಬಜ್ಜಿಯಂತೆ ಮಾಡಿ.
- ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
I am a novice when it comes to cooking, and this is the first time I am trying this. I was able to follow the instructions and the vadas were crispy and tasty! Thank you!!
ಪ್ರತ್ಯುತ್ತರಅಳಿಸಿ