Hurigalu or hurigaalu recipe in Kannada | ಹುರಿಗಾಳು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
- 1/4 ಕಪ್ ಹುರಿಗಡಲೆ ಅಥವಾ ಕಡಲೆಪಪ್ಪು
- 1/2 ಕಪ್ ಸಣ್ಣದಾಗಿ ಹೆಚ್ಚಿದ ಕೊಬ್ಬರಿ
- 1/4 ಕಪ್ ಹೆಸರುಕಾಳು
- 1/4 ಕಪ್ ಕಡಲೆ ಕಾಳು
- 1/4 ಕಪ್ ಅಲಸಂದೆ ಕಾಳು
- 1/4 ಕಪ್ ಮಟಕಿ ಕಾಳು ಅಥವಾ ಅವಡೆ ಕಾಳು
- 1/8 ಕಪ್ ಹುರುಳಿ ಕಾಳು
- 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
- 3 ಟೀಸ್ಪೂನ್ ನಿಂಬೆ ರಸ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
- ದೊಡ್ಡ ಚಿಟಿಕೆ ಅರಶಿನ ಪುಡಿ
- 1/2 ಟೀಸ್ಪೂನ್ ಇಂಗು
- ಉಪ್ಪು ರುಚಿಗೆ ತಕ್ಕಷ್ಟು
ಹುರಿಗಾಳು ಮಾಡುವ ವಿಧಾನ:
- ಹೆಸರುಕಾಳು, ಕಡಲೆ ಕಾಳು, ಅಲಸಂದೆ ಕಾಳು, ಮಟಕಿ ಕಾಳು ಅಥವಾ ಅವಡೆ ಕಾಳು ಮತ್ತು ಹುರುಳಿ ಕಾಳನ್ನು ತೊಳೆದು 7 - 8 ಘಂಟೆಗಳ ಕಾಲ ನೆನೆಸಿಡಿ.
- ನಂತರ ನೀರನ್ನು ಸಂಪೂರ್ಣ ಬಗ್ಗಿಸಿ, ಬಟ್ಟೆಯ ಮೇಲೆ ಹರಡಿ, 2 ಘಂಟೆಗಳ ಕಾಲ ನೀರಾರಲು ಬಿಡಿ.
- ಈ ಸಮಯದಲ್ಲಿ ಒಂದು ದಪ್ಪ ತಳದ ಬಾಣಲೆಯಲ್ಲಿ ಹೆಚ್ಚಿದ ಕೊಬ್ಬರಿಯನ್ನು ಗರಿ ಗರಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ.
- ನಂತರ ಅದೇ ಹುರಿಗಡಲೆಯನ್ನು ಬಿಸಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ.
- ಕಡ್ಲೆಕಾಯಿಯನ್ನು ಅಲ್ಲಲ್ಲಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ತಣ್ಣಗಾದ ನಂತರ ನೆಲಗಡಲೆ ಅಥವಾ ಕಡ್ಲೆಕಾಯಿಯ ಸಿಪ್ಪೆ ಬೇರ್ಪಡಿಸಿ.ನಾನು ಸಿಪ್ಪೆ ತೆಗೆಯಲಿಲ್ಲ.
- ನಂತರ ನೆನೆಸಿದ ಕಾಳುಗಳನ್ನು ಒಂದೊಂದಾಗಿ ಮಧ್ಯಮ ಉರಿಯಲ್ಲಿ ಹುರಿಯಬೇಕು. ಕಾಳುಗಳು ಮೊದಲಿನ ಗಾತ್ರಕ್ಕೆ ಬರುವವರೆಗೆ ಮತ್ತು ಚಟಪಟ ಸದ್ದು ಮಾಡುತ್ತ ಒಡೆಯಲು ಪ್ರಾರಂಭವಾಗುವವರೆಗೆ ಹುರಿಯಿರಿ. ಬಿಸಿ ಆರಲು ಬಿಡಿ.
- ಒಂದು ಸಣ್ಣ ಬಟ್ಟಲಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ, ನಿಂಬೆ ರಸ, ಇಂಗು ಮತ್ತು ಉಪ್ಪು ಕಲಸಿ. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಸಿದ್ಧ ಪಡಿಸಿಕೊಳ್ಳಿ.
- ಹುರಿದ ಕಾಳುಗಳು ಬಿಸಿ ಆರಿದ ಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ.
- ಪುನಃ ಸ್ಟವ್ ಮೇಲಿಟ್ಟು ಕಾಳುಗಳು ಒಣಗುವವರೆಗೆ ಹುರಿಯಿರಿ.
- ಸ್ಟವ್ ಆಫ್ ಮಾಡಿದ ನಂತರ ಹುರಿದ ಕಡ್ಲೆಕಾಯಿ, ಹುರಿಗಡಲೆ ಮತ್ತು ಕೊಬ್ಬರಿ ಹಾಕಿ ಮಗುಚಿ.
- ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
thumba olleya kalikegalu.
ಪ್ರತ್ಯುತ್ತರಅಳಿಸಿvandanegalu
shamantha subbaramu
bangaluru.
Dhanyavadagalu. Nimma comment odi bahala santhoshavayithu.
ಅಳಿಸಿಸೂಪರ್
ಪ್ರತ್ಯುತ್ತರಅಳಿಸಿ