Benne biscuit recipe in Kannada | ಬೆಣ್ಣೆ ಬಿಸ್ಕತ್ ಮಾಡುವ ವಿಧಾನ
ಬೆಣ್ಣೆ ಬಿಸ್ಕತ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
- 3/4 ಕಪ್ ಸಕ್ಕರೆ
- 1/4 ಕಪ್ ಒಣ ಕೊಬ್ಬರಿ ಪುಡಿ (ಬೇಕಾದಲ್ಲಿ)
- ತುಪ್ಪ ಅಥವಾ ಎಣ್ಣೆ ಹಿಟ್ಟು ಕಲಸಲು
- 1 ಏಲಕ್ಕಿ (ಬೇಕಾದಲ್ಲಿ)
ಬೆಣ್ಣೆ ಬಿಸ್ಕತ್ ಮಾಡುವ ವಿಧಾನ:
- ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
- ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು (ಅಥವಾ ಗೋಧಿ ಹಿಟ್ಟು), ಸಕ್ಕರೆ ಪುಡಿ, ಕೊಬ್ಬರಿ ಪುಡಿ (ಬೇಕಾದಲ್ಲಿ) ಮತ್ತು ತುಪ್ಪ (ಅಥವಾ ಎಣ್ಣೆ) ಹಾಕಿ ಮೆತ್ತಗಿನ ಹಿಟ್ಟನ್ನು ತಯಾರಿಸಿ ಕೊಳ್ಳಿ.
- ಸಣ್ಣ ನೆಲ್ಲಿಕಾಯಿ ಗಾತ್ರದ ಚಪ್ಪಟೆ ಉಂಡೆಗಳನ್ನು ಮಾಡಿ, ಮೈಕ್ರೋವೇವ್ ಓವೆನ್ ನಲ್ಲಿಟ್ಟು, ಕಡಿಮೆ ಉಷ್ಣಾಂಶದಲ್ಲಿ (180W) 7 - 8 ನಿಮಿಷ ಬೇಯಿಸಿ. ಸಮಯ ಓವೆನ್ ನಿಂದ ಓವೆನ್ ಗೆ ಬದಲಾಗಬಹುದು.
- ಓವೆನ್ ಇಲ್ಲವಾದಲ್ಲಿ ಕುಕ್ಕರ್ ತಳಕ್ಕೆ ಉಪ್ಪು ಅಥವಾ ಮರಳನ್ನು ಹಾಕಿ. ಮೇಲಿನಿಂದ ಕುಕ್ಕರ್ ಪ್ಲೇಟ್ ಅಥವಾ ಯಾವುದಾದರೂ ಹಳೆ ಪ್ಲೇಟ್ ಇರಿಸಿ. ಉಪ್ಪು ಬಳಸಿದಲ್ಲಿ ಕುಕ್ಕರ್ ಸ್ವಲ್ಪ ಕಲೆಯಾಗುವ ಕಾರಣ ಹಳೆಯ ಕುಕ್ಕರ್ ಬಳಸುವುದು ಉತ್ತಮ.
- ಕುಕ್ಕರ್ ಸ್ವಲ್ಪ ಬಿಸಿ ಆದಮೇಲೆ ಇನ್ನೊಂದು ತಟ್ಟೆಯಲ್ಲಿ ಬಿಸ್ಕತ್ ನ ಉಂಡೆಗಳನ್ನಿರಿಸಿ.
- ಕುಕ್ಕರ್ ನ ಗ್ಯಾಸ್ಕೆಟ್ ಮತ್ತು ವೆಯಿಟ್ ತೆಗೆದು, ಮುಚ್ಚಳ ಮುಚ್ಚಿ, ಹತ್ತು ನಿಮಿಷ ಬೇಯಿಸಿ.
- ಹೀಗೆ ಎಲ್ಲ ಬಿಸ್ಕತ್ ಗಳನ್ನೂ ಮಾಡಿ, ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ