Cheese dose recipe in Kannada | ಚೀಸ್ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ದೊಡ್ಡ ದೋಸೆಗೆ ಬೇಕಾಗುವಷ್ಟು ಸೆಟ್ ದೋಸೆ ಹಿಟ್ಟು
- 4 ಟೇಬಲ್ ಸ್ಪೂನ್ ತುರಿದ ಚೀಸ್
- 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ
- 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
- 1/4 ಟೀಸ್ಪೂನ್ ಪಿಜ್ಜಾ ಅಥವಾ ಪಾಸ್ತಾ ಮಸಾಲೆ (ಬೇಕಾದಲ್ಲಿ)
- ಬೆಣ್ಣೆ ಅಥವಾ ತುಪ್ಪ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು.
ಚೀಸ್ ದೋಸೆ ಮಾಡುವ ವಿಧಾನ:
- ಒಂದು ದೊಡ್ಡ ಸೌಟು ಹಿಟ್ಟನ್ನು ಬಿಸಿ ತವಾ ಮೇಲೆ ಸುರಿದು ದೋಸೆ ಮಾಡಿ.
- ಮೇಲಿನಿಂದ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ತುರಿದ ಚೀಸ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ.
- ಮುಚ್ಚಳ ಮುಚ್ಚಿ ಬೇಯಿಸಿ.
- ಮುಚ್ಚಳ ತೆರೆದು ಮೇಲಿನಿಂದ ಬೆಣ್ಣೆ ಅಥವಾ ತುಪ್ಪ ಹಾಕಿ. ಜೊತೆಗೆ ಪಿಜ್ಜಾ ಅಥವಾ ಪಾಸ್ತಾ ಮಸಾಲೆಯನ್ನು ಹಾಕಿ. ಅಥವಾ ನಿಮ್ಮಿಷ್ಟದ ಯಾವುದೇ ಮಸಾಲೆಯನ್ನು ಹಾಕಬಹುದು.
- ತವ ಮೇಲೆ ದೋಸೆಯನ್ನು ಮಡಿಸಿ. ಕಾಯಿ ಚಟ್ನಿ ಅಥವಾ ಸಾಗುವಿನೊಂದಿಗೆ ಬಡಿಸಿ. ಮಕ್ಕಳಿಗೆ ಟೊಮೇಟೊ ಸಾಸ್ ನೊಂದಿಗೆ ಕೊಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ