Alugadde hookosu gojju in Kannada | ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಹೂಕೋಸು
- 1/2 ಕಪ್ ಕತ್ತರಿಸಿದ ಆಲೂಗಡ್ಡೆ
- 1/2 ಕಪ್ ಹಸಿ ಬಟಾಣಿ (ಬದಲಿಗೆ ಆಲೂಗಡ್ಡೆಯನ್ನು ಹೆಚ್ಚಿಸಬಹುದು)
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
- 1/4 ಟೀಸ್ಪೂನ್ ಗರಂ ಮಸಾಲಾ
- 1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ
- 1/4 ಟೀಸ್ಪೂನ್ ಅರಿಶಿನ ಪುಡಿ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು (ಬೇಕಾದಲ್ಲಿ)
- 1 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು:
- 1 ಕತ್ತರಿಸಿದ ಈರುಳ್ಳಿ
- 1 ಕತ್ತರಿಸಿದ ದೊಡ್ಡ ಟೊಮೇಟೊ
- 4 ಎಸಳು ಬೆಳ್ಳುಳ್ಳಿ
- 1cm ಉದ್ದದ ಶುಂಠಿ
ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ:
- ಹೂಕೋಸನ್ನು ಆಯ್ದು, ಕುದಿಯುವ ಉಪ್ಪು ನೀರಿನಲ್ಲಿ ಎರಡು ನಿಮಿಷ ಹಾಕಿ ತೆಗೆದಿಟ್ಟುಕೊಳ್ಳಿ.
- ಮಿಕ್ಸಿಯಲ್ಲಿ ಅರೆಯಲು ಹೇಳಿದ ಪದಾರ್ಥಗಳನ್ನು ನುಣ್ಣನೆ ಅರೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
- ಜೀರಿಗೆ ಸಿಡಿದ ಮೇಲೆ ಅರೆದ ಪೇಸ್ಟ್ ನ್ನು ಹಾಕಿ ಬಾಡಿಸಿ.
- ನಂತರ ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಹಾಕಿ ಮಗುಚಿ.
- ಅದಕ್ಕೆ ಹೂಕೋಸು, ಹೆಚ್ಚಿದ ಆಲೂಗಡ್ಡೆ ಮತ್ತು ಹಸಿ ಬಟಾಣಿಯನ್ನು ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ೧ ಕಪ್ ನೀರು ಹಾಕಿ ಕುದಿಸಿ.
- ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ತರಕಾರಿಗಳು ಮೆತ್ತಗೆ ಬೇಯುವವರೆಗೆ ಬೇಯಿಸಿ.
- ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ