Alugadde chips recipe in Kannada | ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ದೊಡ್ಡ ತಾಜಾ ಆಲೂಗಡ್ಡೆ
- 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ಅಥವಾ ನಿಮ್ಮ ರುಚಿ ಪ್ರಕಾರ)
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಟೀಸ್ಪೂನ್ ಸೈನದವ ಲವಣ (ಬೇಕಾದಲ್ಲಿ; ಹಾಕಿದಲ್ಲಿ ಉತ್ತಮ)
- 1/4 ಟೀಸ್ಪೂನ್ ಇಂಗು
- ಎಣ್ಣೆ ಕಾಯಿಸಲು
ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ:
- ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ.
- ಒಂದು ಸಣ್ಣ ಬಟ್ಟಲಿನಲ್ಲಿ ಮೆಣಸಿನ ಪುಡಿ, ಉಪ್ಪು, ಸೈನದವ ಲವಣ ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿಟ್ಟು ಕೊಳ್ಳಿ.
- ಆಲೂಗಡ್ಡೆಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆಯ ಮೇಲೆ ನೇರವಾಗಿ ಆಲೂಗಡ್ಡೆ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ). ಅಥವಾ ಕತ್ತರಿಸಿದ ತಕ್ಷಣ ಆಲೂಗಡ್ಡೆ ಬಿಲ್ಲೆಗಳನ್ನು ಬಿಸಿ ಎಣ್ಣೆಗೆ ಒಂದೊಂದಾಗಿ ಹಾಕಿ.
- ಬಿಲ್ಲೆಗಳು ಹಾಕುವಾಗ ಎಣ್ಣೆ ಬಿಸಿಯಿರಲಿ. ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸುವುದನ್ನು ಮುಂದುವರೆಸಿ.
- ನಂತರ ಚಿಪ್ಸ್ ತೆಗೆದು, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ