Tomato soup recipe in Kannada | ಟೊಮೇಟೊ ಸೂಪ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 - 5 ಮಧ್ಯಮ ಗಾತ್ರದ ಟೊಮೆಟೊಗಳು
- 2 ಎಸಳು ಬೆಳ್ಳುಳ್ಳಿ
- 1 ಮಧ್ಯಮ ಗಾತ್ರದ ಈರುಳ್ಳಿ
- 1/2 ಕ್ಯಾರೆಟ್
- 2 ಟೀಸ್ಪೂನ್ ಬೆಣ್ಣೆ
- 1/2 ಟೀಸ್ಪೂನ್ ಕರಿಮೆಣಸು (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)
- 1 ಕಪ್ ನೀರು
- 1 ಟೀಸ್ಪೂನ್ ಕಾರ್ನ್ ಫ್ಲೋರ್ ಅಥವಾ ಮೈದಾ ಅಥವಾ 1 ಬೆರಳು ಗಾತ್ರದ ಆಲೂಗಡ್ಡೆ
- 1/4 - 1/2 ಟೀಸ್ಪೂನ್ ಸಕ್ಕರೆ (ಬೇಕಾದಲ್ಲಿ ಅಥವಾ ನಿಮ್ಮ ರುಚಿ ಪ್ರಕಾರ)
- 1 ಟೀಸ್ಪೂನ್ ತಾಜಾ ಕೆನೆ (ಬೇಕಾದಲ್ಲಿ)
- 1 ಬ್ರೆಡ್ ಸ್ಲೈಸ್ (ಬೇಕಾದಲ್ಲಿ)
ಟೊಮೇಟೊ ಸೂಪ್ ಮಾಡುವ ವಿಧಾನ:
- ಬೆಳ್ಳುಳ್ಳಿ, ಈರುಳ್ಳಿ, ಕ್ಯಾರಟ್ ಮತ್ತು ಟೊಮೆಟೊಗಳನ್ನು ಕತ್ತರಿಸಿಟ್ಟುಕೊಳ್ಳಿ.
- ಮೊದಲಿಗೆ ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿಮಾಡಿ.
- ಬೆಣ್ಣೆ ಕರಗಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ನಂತರ ಕತ್ತರಿಸಿದ ಕ್ಯಾರಟ್ ಹಾಕಿ ಒಂದೆರಡು ನಿಮಿಷ ಬಾಡಿಸಿ. ಆಲೂಗಡ್ಡೆ ಹಾಕುವುದಾದಲ್ಲಿ ಈಗಲೇ ಹಾಕಿ.
- ಈಗ ಅದೇ ಬಾಣಲೆಗೆ ಕತ್ತರಿಸಿದ ಟೊಮೆಟೊ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
- ಉಪ್ಪು ಮತ್ತು ಕರಿ ಮೆಣಸು ಸೇರಿಸಿ, ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ.
- ಹುರಿದ ಪದಾರ್ಥಗಳು ತಣ್ಣಗಾದ ಕೂಡಲೇ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದು ಕೊಳ್ಳಿ.
- ಜ್ಯೂಸು ಸೋಸುವ ಜರಡಿ ಉಪಯೋಗಿಸಿ, ಅರೆದ ಮಿಶ್ರಣವನ್ನು ಸೋಸಿರಿ. ಮೇಲಿನಿಂದ ಸ್ವಲ್ಪ ನೀರು ಸೇರಿಸಿ, ಒಂದು ಚಮಚದ ಸಹಾಯದಿಂದ ಚೆನ್ನಾಗಿ ಸೋಸಿ.
- ಸೋಸಿದ ಟೊಮೇಟೊ ರಸವನ್ನು ಒಂದು ಪಾತ್ರೆಗೆ ಹಾಕಿ. ಉಳಿದ ನೀರು ಸೇರಿಸಿ ಕುದಿಯಲು ಇಡಿ. ಕಾರ್ನ್ ಫ್ಲೋರ್ ನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಾಕಿ. ಮೈದಾ ಹಿಟ್ಟು ಉಪಯೋಗಿಸುತ್ತೀರಾದರೆ, ಒಂದು ಚಮಚ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಹಾಲಿನಲ್ಲಿ ಕಲಸಿದ ಮೈದಾ ಹಿಟ್ಟು ಹಾಕಿ, ಕುದಿಸಿ, ನಂತರ ಟೊಮೇಟೊ ರಸ ಸೇರಿಸಿ.
- ಸೂಪ್ ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟೋವ್ ಆಫ್ ಮಾಡಿ.
- ಬೇಕಾದಲ್ಲಿ ಹಾಲಿನ ಕೆನೆ (ಫ್ರೆಶ್ ಕ್ರೀಮ್) ಅಥವಾ ಹುರಿದ ಬ್ರೆಡ್ ಚೂರುಗಳಿಂದ ಅಲಂಕರಿಸಿ. ಟೊಮೇಟೊ ಸೂಪನ್ನು ಬಿಸಿಯಾಗಿರುವಾಗಲೇ ಬಡಿಸಿ, ಸವಿದು, ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ