balekai chips recipe in Kannada | ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ದೊಡ್ಡ ಬಾಳೆಕಾಯಿ
- 1/2 ಟೀಸ್ಪೂನ್ ಉಪ್ಪು
- 1/4 ಟೀಸ್ಪೂನ್ ಅರಶಿನ
- 4 ಟೇಬಲ್ ಚಮಚ ನೀರು
- ಎಣ್ಣೆ ಕಾಯಿಸಲು
ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ:
- ಬಾಳೆಕಾಯಿಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ.
- ಒಂದು ಸಣ್ಣ ಬಟ್ಟಲಿನಲ್ಲಿ ನೀರು, ಉಪ್ಪು ಮತ್ತು ಅರಶಿನ ಹಾಕಿ, ಅರಶಿನದ ಉಪ್ಪು ನೀರು ಸಿದ್ಧ ಮಾಡಿಟ್ಟು ಕೊಳ್ಳಿ.
- ಬಾಳೆಕಾಯಿಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಬಾಳೆಕಾಯಿ ಬಿಲ್ಲೆಗಳನ್ನು ಒಂದೊಂದಾಗಿ ಹಾಕಿ. ಅಥವಾ ಸಾಧ್ಯವಾದಲ್ಲಿ ಎಣ್ಣೆಯ ಮೇಲೆ ನೇರವಾಗಿ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ).
- ಕಾಯುತ್ತಿರುವ ಚಿಪ್ಸ್ ಗೆ 1/2 ಟೀ ಚಮಚದಷ್ಟು ಅರಶಿನದ ಉಪ್ಪು ನೀರು ಹಾಕಿ.
- ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ