Dry fruits laddu recipe in Kannada | ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಗೋಡಂಬಿ
- 1/4 ಕಪ್ ಬಾದಾಮಿ
- 1/4 ಕಪ್ ಉಪ್ಪುರಹಿತ ಪಿಸ್ತಾ
- 1/4 ಕಪ್ ಆಕ್ರೋಡು ಅಥವಾ ವಾಲ್ನುಟ್ (ಬೇಕಾದಲ್ಲಿ)
- 1/4 ಕಪ್ ಒಣ ಅಂಜೂರದ ಹಣ್ಣುಗಳು (ಬೇಕಾದಲ್ಲಿ; ಬದಲಾಗಿ ಖರ್ಜುರ ಉಪಯೋಗಿಸಬಹುದು)
- 1/4 ಕಪ್ ಒಣದ್ರಾಕ್ಷಿ
- 1/2 ಕಪ್ ಖರ್ಜುರ
- 2 ಟೀಸ್ಪೂನ್ ತುಪ್ಪ
- 2 ಟೇಬಲ್ ಚಮಚ ಗಸಗಸೆ ಬೀಜಗಳು
- 1/2 ಕಪ್ ತುರಿದ ಒಣ ಕೊಬ್ಬರಿ
- 2 ಏಲಕ್ಕಿ
ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ:
- ಗೋಡಂಬಿ, ಬಾದಾಮಿ, ಪಿಸ್ತಾ ಮತ್ತು ಆಕ್ರೋಡನ್ನು ಗರಿ ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದಿಟ್ಟುಕೊಳ್ಳಿ.
- ಗಸಗಸೆಯನ್ನು ಸಿಡಿಯುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ.
- ತುರಿದ ಒಣ ಕೊಬ್ಬರಿಯನ್ನು ಗರಿ ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ.
- ಬಿಸಿ ಆರಿದ ಮೇಲೆ ಎಲ್ಲ ಬೀಜಗಳನ್ನು, ಏಲಕ್ಕಿಯೊಂದಿಗೆ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
- ನಂತರ ಅಂಜೂರವನ್ನು ಸಣ್ಣ ಚೂರುಗಳಾಗಿ ಮಾಡಿಕೊಳ್ಳಿ. ಒಣದ್ರಾಕ್ಷಿ ಗಟ್ಟಿ ಇದ್ದರೆ ಎರಡಾಗಿ ಚೂರು ಮಾಡಿಕೊಳ್ಳಿ. ಖರ್ಜುರದ ಬೀಜ ತೆಗೆದು ಎರಡಾಗಿ ಚೂರು ಮಾಡಿಕೊಳ್ಳಿ.
- ನಂತರ ಮಿಕ್ಸಿ ಜಾರಿನಲ್ಲಿ ಎಲ್ಲ ಒಣ ಹಣ್ಣುಗಳನ್ನು ನೀರು ಹಾಕದೆ ಅರೆಯಿರಿ.
- ಒಂದು ಬಾಣಲೆಯಲ್ಲಿ ಅರೆದ ಒಣ ಹಣ್ಣುಗಳು ಮತ್ತು ತುಪ್ಪ ಹಾಕಿ ಬಿಸಿ ಮಾಡಿ.
- ಒಣ ಹಣ್ಣಿನ ಪೇಸ್ಟ್ ಮೆತ್ತಗಾದ ಮೇಲೆ ಪುಡಿಮಾಡಿದ ಬೀಜಗಳನ್ನು ಹಾಕಿ, ಚೆನ್ನಾಗಿ ಕಲಸಿ ಸ್ಟವ್ ಆಫ್ ಮಾಡಿ.
- ಬಿಸಿ ಕಡಿಮೆಯಾಗುವವರೆಗೆ ಕಾಯಿರಿ. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಹೀಗೆ ಎಲ್ಲ ಉಂಡೆಗಳನ್ನು ಮಾಡಿ ಸವಿದು ಆನಂದಿಸಿ.
Yest divasa idabhaudhu
ಪ್ರತ್ಯುತ್ತರಅಳಿಸಿondu 15 divasa idabahudu..namma maneyalli sadharanavagi ondu varadalli karchaguttade
ಅಳಿಸಿ