Iyengar style puliyogare gojju recipe | ಐಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು - ಸಣ್ಣ ಅಳತೆ: ( ಅಳತೆ ಕಪ್ = 240 ಎಂಎಲ್)
- 6 ಟೇಬಲ್ ಚಮಚ ಪುಳಿಯೋಗರೆ ಪುಡಿ ಅಥವಾ ಮೈಸೂರು ಸಾರಿನ ಪುಡಿ
- 1/4 ಕಪ್ ಅಡುಗೆ ಎಣ್ಣೆ
- ಕಿತ್ತಳೆ ಗಾತ್ರದ ಹುಣಸೆ ಹಣ್ಣು
- ಕಿತ್ತಳೆ ಗಾತ್ರದ ಬೆಲ್ಲ
- 5 ಟೇಬಲ್ ಚಮಚ ಎಳ್ಳು
- 3 ಟೇಬಲ್ ಚಮಚ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
ಬೇಕಾಗುವ ಪದಾರ್ಥಗಳು - ದೊಡ್ಡ ಅಳತೆ:
- 100gm ಪುಳಿಯೋಗರೆ ಪುಡಿ ಅಥವಾ ಮೈಸೂರು ಸಾರಿನ ಪುಡಿ
- 50gm ಅಡುಗೆ ಎಣ್ಣೆ
- 1/4kg ಹುಣಸೆ ಹಣ್ಣು
- 1/2kg ಬೆಲ್ಲ
- 100gm ಎಳ್ಳು
- ಉಪ್ಪು ನಿಮ್ಮ ರುಚಿ ಪ್ರಕಾರ
ಐಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ :
- ಹುಣಿಸೆಹಣ್ಣನ್ನು 3 ಕಪ್ ನೀರಿನಲ್ಲಿ ನೆನೆಸಿಡಿ.
- ಎಳ್ಳನ್ನು ಎಣ್ಣೆ ಹಾಕದೆ ಹುರಿಯಿರಿ. ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ.
- ನಂತರ ಬಾಣಲೆಯಲ್ಲಿ ಹುಣಿಸೆರಸ ಹಾಕಿ ಕುದಿಯಲು ಇಡಿ.
- ಅದಕ್ಕೆ ಬೆಲ್ಲ ಮತ್ತು ಸಾರಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ.
- ನಂತರ ೧/೪ ಕಪ್ ಎಣ್ಣೆ ಹಾಕಿ ಮತ್ತು ಉಪ್ಪು ಹಾಕಿ. ಸಣ್ಣ ಉರಿಯಲ್ಲಿ ಮಗುಚುತ್ತಾ ಕುದಿಸುವುದನ್ನು ಮುಂದುವರೆಸಿ.
- ಗೊಜ್ಜು ಸ್ವಲ್ಪ ಗಟ್ಟಿಯಾದಾಗ ಎಳ್ಳಿನ ಪುಡಿ ಸೇರಿಸಿ.
- ಒಂದೆರಡು ನಿಮಿಷದಲ್ಲಿ ಗೊಜ್ಜು ಎಣ್ಣೆ ಬಿಡಲು ಪ್ರಾರಂಭಿಸಿದಾಗ ಸ್ಟವ್ ಆಫ್ ಮಾಡಿ. ಪುಳಿಯೋಗರೆ ಗೊಜ್ಜು ತಯಾರಾಯಿತು.
- ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ