Iyengar puliyogare recipe in Kannada | ಐಯಂಗಾರ್ ಪುಳಿಯೋಗರೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ಸೋನಾ ಮಸೂರಿ ಅಕ್ಕಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 2 ಟೀಸ್ಪೂನ್ ಉದ್ದಿನ ಬೇಳೆ (ಬೇಕಾದಲ್ಲಿ)
- 2 ಟೀಸ್ಪೂನ್ ಕಡಲೆಬೇಳೆ
- 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಬೀಜ ಅಥವಾ ಶೇಂಗಾ
- 8 - 10 ಗೋಡಂಬಿ
- 1 ಟೀಸ್ಪೂನ್ ಎಳ್ಳು
- 5 - 6 ಕರಿಬೇವಿನ ಎಲೆ
- 2 ಟೇಬಲ್ ಸ್ಪೂನ್ ಕೊಬ್ಬರಿ ತುರಿ
- 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಪುಳಿಯೋಗರೆ ಮಾಡುವ ವಿಧಾನ:
- ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ.
- ನಂತರ ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ.
- ನಂತರ ಬೇಯಿಸಿಟ್ಟ ಅನ್ನಕ್ಕೆ, ಒಗ್ಗರಣೆ ಮತ್ತು 2 ಟೇಬಲ್ ಸ್ಪೂನ್ ನಷ್ಟು ಅಥವಾ ರುಚಿಗೆ ತಕ್ಕಷ್ಟು ಗೊಜ್ಜು ಹಾಕಿ ಕಲಸಿ. ಚೆನ್ನಾಗಿ ಕಲಸಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ