Hittina vade recipe in kannada | ಹಿಟ್ಟಿನ ವಡೆ ಮಾಡುವ ವಿಧಾನ
Hittina vade video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಗೋಧಿ ಹಿಟ್ಟು
- 1/4 ಕಪ್ ಮೈದಾ
- 1/4 ಕಪ್ ಕಡ್ಲೆಹಿಟ್ಟು
- 1/4 ಕಪ್ ಅಕ್ಕಿ ಹಿಟ್ಟು
- 1/4 ಕಪ್ ಜೋಳದ ಹಿಟ್ಟು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಪೂರಿ ಕಾಯಿಸಲು
ಅರೆಯಲು ಬೇಕಾಗುವ ಪದಾರ್ಥಗಳು:
- 1 ಈರುಳ್ಳಿ ಕತ್ತರಿಸಿದ್ದು
- 1 - 3 ಹಸಿರುಮೆಣಸಿನಕಾಯಿ
- 2 ಎಸಳು ಕರಿಬೇವು
- 1/4 ಕಪ್ ತೆಂಗಿನ ತುರಿ
- 1 ಚಮಚ ಜೀರಿಗೆ
ಮಿಕ್ಸೆಡ್ ಫ್ಲೋರ್ ಪೂರಿ ಅಥವಾ ಹಿಟ್ಟಿನ ವಡೆ ಮಾಡುವ ವಿಧಾನ:
- ಒಂದು ಅಗಲವಾದ ಬಟ್ಟಲಿಗೆ ಎಲ್ಲ ಹಿಟ್ಟುಗಳನ್ನೂ ಹಾಕಿ.
- ನಂತರ ಒಂದು ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹುರಿಯಿರಿ.
- ಹುರಿದ ಪದಾರ್ಥಗಳು ತಣ್ಣಗಾದಮೇಲೆ, ತೆಂಗಿನ ತುರಿ ಮತ್ತು ಜೀರಿಗೆಯೊಂದಿಗೆ ಸಾಧ್ಯವಾದಷ್ಟು ಕಡಿಮೆ ನೀರಿನಲ್ಲಿ ನುಣ್ಣನೆ ಅರೆಯಿರಿ.
- ಬಟ್ಟಲಿನಲ್ಲಿರುವ ಹಿಟ್ಟಿಗೆ, ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಪೂರಿ ಹಿಟ್ಟನ್ನು ಕಲಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಹೆಚ್ಚು ಗಟ್ಟಿ ಮಾಡಿದಲ್ಲಿ ಪೂರಿ ಗಟ್ಟಿಯಾಗುವುದು, ಹಾಗೆಯೇ ಮೃದು ಮಾಡಿದಲ್ಲಿ ಪೂರಿ ಎಣ್ಣೆ ಎಳೆದು ಮೆತ್ತಗಾಗಬಹದು.
- ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
- ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ.
- ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.
- ಎರಡು ಬದಿ ಕಾಯಿಸಿ. ಆಲೂ ಭಾಜಿಯೊಂದಿಗೆ ಅಥವಾ ಕಾಯಿ ಚಟ್ನಿಯೊಂದಿಗೆ ಬಡಿಸಿ. ಈ ಪೂರಿಯನ್ನು ಹಾಗೆಯೂ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ