Upsaaru recipe in kannada | ಉಪ್ಸಾರು ಮಾಡುವ ವಿಧಾನ
ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml)
- 1 ಕಟ್ಟು ಸೊಪ್ಪು ಅಥವಾ 250gm ತರಕಾರಿ (ಮೆಂತೆ ಸೊಪ್ಪು ಹೊರತುಪಡಿಸಿ ಯಾವುದೇ ಸೊಪ್ಪ ಮತ್ತು ಎಲೆಕೋಸು, ಬೀನ್ಸ್ ಅಥವಾ ಹೀರೇಕಾಯಿಯಂತಹ ತರಕಾರಿ)
- 1/4 ಕಪ್ ತೊಗರಿಬೇಳೆ
- 1/4 ಕಪ್ ಹೆಸರುಕಾಳು ಅಥವಾ ಇನ್ನಾವುದೇ ಕಾಳು (ಬೇಕಾದಲ್ಲಿ - ಇಲ್ಲವಾದಲ್ಲಿ 1/4 ಕಪ್ ನಷ್ಟು ತೊಗರಿಬೇಳೆ ಹೆಚ್ಚಿಸಿ)
- 2 - 4 ಹಸಿರು ಮೆಣಸಿನಕಾಯಿ (ಈ ಸಾರು ಸ್ವಲ್ಪ ಜಾಸ್ತಿ ಖಾರ ಇರುತ್ತದೆ)
- ನಿಮ್ಮ ರುಚಿ ಪ್ರಕಾರ ಉಪ್ಪು
ಉಪ್ಸಾರಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 1 ಕತ್ತರಿಸಿದ ಈರುಳ್ಳಿ
- 10 ಬೇಳೆ ಸುಲಿದು ಮತ್ತು ಕತ್ತರಿಸಿದ ಬೆಳ್ಳುಳ್ಳಿ
- 1 ಕತ್ತರಿಸಿದ ಟೊಮೆಟೊ
- 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
- 1/4 ಕಪ್ ತೆಂಗಿನ ತುರಿ
- 1 ಟೀಸ್ಪೂನ್ ಜೀರಿಗೆ
- 4 - 5 ಕರಿಮೆಣಸು
- ಸ್ವಲ್ಪ ಕೊತ್ತುಂಬರಿ ಸೊಪ್ಪು
- ನಿಮ್ಮ ರುಚಿ ಪ್ರಕಾರ ಉಪ್ಪು
ಉಪ್ಸಾರು ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಉಪ್ಸಾರು ಪಲ್ಯಕ್ಕೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡಲೆಬೇಳೆ
- 5 - 6 ಕರಿಬೇವಿನ ಎಲೆ
- 1/2 ಚಮಚ ಸಾಸಿವೆ
- 1 ಕತ್ತರಿಸಿದ ಈರುಳ್ಳಿ
- 1 - 2 ಹಸಿಮೆಣಸು (ಬೇಕಾದಲ್ಲಿ)
- 2 ಟೇಬಲ್ ಸ್ಪೂನ್ ತೆಂಗಿನ ತುರಿ
- 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೀಸ್ಪೂನ್ ಅಡುಗೆ ಎಣ್ಣೆ
ಉಪ್ಸಾರು ಮಾಡುವ ವಿಧಾನ:
- ಸೊಪ್ಪು, ಬೇಳೆ, ಕಾಳು ಮತ್ತು ಹಸಿರುಮೆಣಸಿನ ಕಾಯಿಯನ್ನು, ಉಪ್ಪು ಮತ್ತು ನೀರಿನೊಂದಿಗೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
- ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ೧ ಚಮಚ ಎಣ್ಣೆಯಲ್ಲಿ ಹುರಿದಿಟ್ಟು ಕೊಳ್ಳಿ.
- ಮಿಕ್ಸಿಯಲ್ಲಿ ಹುರಿದ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಜೀರಿಗೆ, ಕರಿಮೆಣಸು, ಹುಣಿಸೆ ಹಣ್ಣು, ಬೇಯಿಸಿದ ಹಸಿರು ಮೆಣಸಿನಕಾಯಿ, ಬೇಯಿಸಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣ ೨ ಟೇಬಲ್ ಚಮಚದಷ್ಟು ಹಾಕಿ ನುಣ್ಣನೆ ಅರೆದುಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು, ಸಾಸಿವೆಯ ಒಗ್ಗರಣೆ ಮಾಡಿ.
- ಅದಕ್ಕೆ ಅರೆದ ಮಸಾಲೆ ಅಥವಾ ಖಾರ ಹಾಕಿ ಒಂದೆರಡು ನಿಮಿಷ ಮಗುಚಿ.
- ಈಗ ಬೇಯಿಸಿದ ಸೊಪ್ಪು+ಕಾಳು+ಬೇಳೆಯ ನೀರು ಬಸಿದು ಸೇರಿಸಿ. ಸಾರಿನ ಹದಕ್ಕೆ ಬೇಕಾದಷ್ಟು ನೀರು ಸೇರಿಸಿ. ಉಪ್ಪು ಹಾಕಿ. ಕುದಿಸಿದರೆ ಉಪ್ಸಾರು ತಯಾರಾಯಿತು.
- ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ.
- ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ.
- ನೀರು ಬಸಿದು ಉಳಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣವನ್ನು ಸೇರಿಸಿ ಮಗುಚಿ. ಬೇಕಾದಲ್ಲಿ ಉಪ್ಪು ಸೇರಿಸಿ.
- ತೆಂಗಿನ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ ಸ್ಟೋವ್ ಆಫ್ ಮಾಡಿ.
- ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಉಪ್ಸಾರು ಮತ್ತು ಪಲ್ಯವನ್ನು ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ