Kara kaddi recipe in Kannada | ಖಾರ ಕಡ್ಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಕಡ್ಲೆಹಿಟ್ಟು
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಓಮ ಕಾಳು ಅಥವಾ ಅಜವೈನ್
- 1/2 ಟೀಸ್ಪೂನ್ ಉಪ್ಪು
- ದೊಡ್ಡ ಚಿಟಿಕೆ ಇಂಗು
- 2 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಖಾರ ಕಡ್ಡಿ ಕಾಯಿಸಲು
ಖಾರ ಕಡ್ಡಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಓಮ ಕಾಳು ಮತ್ತು ಉಪ್ಪನ್ನು ಹಾಕಿ.
- 2 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ.
- ನೀರು ಹಾಕಿ ದಪ್ಪ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ.
- ಮೂರು ತೂತುಗಳಿರುವ ಖಾರ ಕಡ್ಡಿ ಅಚ್ಚಿಗೆ ಹಿಟ್ಟನ್ನು ಹಾಕಿ ಬಿಸಿ ಎಣ್ಣೆಗೆ ಒತ್ತಿ .
- ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ