Paneer recipe in Kannada | ಪನೀರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಲೀ ಹಾಲು
- 1/4 ಕಪ್ ಮೊಸರು (ಹುಳಿಯಿದ್ದರೆ ಉತ್ತಮ)
- 2 ಟೀಸ್ಪೂನ್ ನಿಂಬೆ ರಸ ಅಥವಾ ವಿನೆಗರ್
- 1/2 ಕಪ್ ಐಸ್ ಕ್ಯೂಬ್ಸ್ ಅಥವಾ ತಣ್ಣಗಿನ ನೀರು
ಪನೀರ್ ಮಾಡುವ ವಿಧಾನ:
- ಮೊದಲಿಗೆ ಹಾಲನ್ನು ಒಂದು ದೊಡ್ಡ ಪಾತ್ರೆಯಲ್ಲಿ ಕುದಿಸಿ.
- ಕುದಿಯುವ ಹಾಲಿಗೆ ಮೊಸರು ಹಾಕಿ. ಕೆಲವು ಸೆಕೆಂಡ್ ಗಳಲ್ಲಿ ಹಾಲು ಒಡೆಯುತ್ತದೆ. ಮೊಸರು ಹಾಕಿದರೆ ಪನೀರ್ ಮೃದುವಾಗಿ ಬರುತ್ತದೆ.
- ಹಾಲು ಒಡೆಯುತ್ತಿಲ್ಲವಾದಲ್ಲಿ ೧ ರಿಂದ ೨ ಚಮಚದಷ್ಟು ನಿಂಬೆರಸವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ.
- ಹಾಲು ಒಡೆದ ಕೂಡಲೇ ಸ್ಟವ್ ಆಫ್ ಮಾಡಿ. ಮತ್ತು ಐಸ್ ಕ್ಯೂಬ್ಸ್ ಅಥವಾ ತಣ್ಣಗಿನ ನೀರನ್ನು ಹಾಕಿ.
- ಒಡೆದ ಹಾಲನ್ನು ಬಟ್ಟೆಯ ಮೂಲಕ ಸೋಸಿ. ಗಂಟು ಕಟ್ಟಿ ಸ್ವಲ್ಪ ಹೊತ್ತು ನೀರಿಳಿಯಲು ಬಿಡಿ.
- ನಂತರ ಅದನ್ನು ಯಾವುದಾದರೂ ಮಣೆ ಅಥವಾ ಪ್ಲೇಟ್ ಮೇಲಿಟ್ಟು ಮೇಲಿಂದ ಭಾರವಾದ ವಸ್ತುವನ್ನಿಡಿ. ೩೦ - ೪೦ ನಿಮಿಷದ ನಂತ್ರ ಪನೀರ್ ಸಿದ್ಧ. ನಿಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ