Baadaami poori recipe in Kannada | ಬಾದಾಮಿ ಪೂರಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 3 ಕಪ್ ಮೈದಾ ಹಿಟ್ಟು
- 1/2 ಕಪ್ ತುಪ್ಪ (1kg ಹಿಟ್ಟಿಗೆ 300gm)
- 2 ಕಪ್ ಸಕ್ಕರೆ
- 1/2 ಚಮಚ ನಿಂಬೆ ರಸ
- ಚಿಟಿಕೆ ಏಲಕ್ಕಿ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
ಬಾದಾಮಿ ಪೂರಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
- ೨ ಕಪ್ ಸಕ್ಕರೆಗೆ ೧ ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ನಿಂಬೆ ರಸ ಸೇರಿಸಿ.
- ಈಗ ನಿಂಬೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ, ತ್ರಿಕೋನಾಕಾರಕ್ಕೆ ಮಡಿಸಿ. ಪುನಃ ಸ್ವಲ್ಪ ಲಟ್ಟಿಸಿ.
- ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು ಸಕ್ಕರೆ ಪಾಕದಲ್ಲಿ ೩೦ ಸೆಕೆಂಡ್ ಗಳ ಕಾಲ ಅದ್ದಿ ತೆಗೆಯಿರಿ.
Jamoon Saha tilisi dayavittu
ಪ್ರತ್ಯುತ್ತರಅಳಿಸಿ