Nuchinunde recipe in Kannada | ನುಚ್ಚಿನುಂಡೆ ಮಾಡುವ ವಿಧಾನ
ನುಚ್ಚಿನುಂಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೊಗರಿಬೇಳೆ
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 1/4 ಕಪ್ ಕಡ್ಲೆಬೇಳೆ
- 1 - 3 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 1/2 " ಉದ್ದದ ಶುಂಠಿ ಸಣ್ಣಗೆ ಹೆಚ್ಚಿದ್ದು
- 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/4 ಕಪ್ ತೆಂಗಿನತುರಿ
- ಒಂದು ದೊಡ್ಡ ಚಿಟಿಕೆ ಇಂಗು
- 1/4 ಕಪ್ ಸಬ್ಬಸಿಗೆ ಸೊಪ್ಪು (ಬೇಕಾದಲ್ಲಿ)
- ನಿಮ್ಮ ರುಚಿ ಪ್ರಕಾರ ಉಪ್ಪು
ನುಚ್ಚಿನುಂಡೆ ಮಾಡುವ ವಿಧಾನ:
- ಬೇಳೆಗಳನ್ನು ತೊಳೆದು ೪ ಘಂಟೆಗಳ ಕಾಲ ನೆನೆಸಿಡಿ.
- ನೆನೆದ ನಂತರ ನೀರು ಬಗ್ಗಿಸಿ, ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ.
- ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸಬ್ಬಸಿಗೆ ಸೊಪ್ಪು, ತೆಂಗಿನತುರಿ, ಶುಂಠಿ, ಇಂಗು ಮತ್ತು ಉಪ್ಪು ಹಾಕಿ ಕಲಸಿ.
- ಉಂಡೆಗಳನ್ನು ಮಾಡಿ, ಇಡ್ಲಿ ಪ್ಲೇಟ್ ನಲ್ಲಿಟ್ಟು ೧೫ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ.
- ತುಪ್ಪ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ