Sabbasige soppu saru in Kannada | ಸಬ್ಬಸಿಗೆ ಸೊಪ್ಪು ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕತ್ತರಿಸಿದ ಸಬ್ಬಸಿಗೆ ಸೊಪ್ಪು
- 1 - 2 ಹಸಿರು ಮೆಣಸಿನಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1/4 ಟೀಸ್ಪೂನ್ ಜೀರಿಗೆ
- 1/4 - 1/2 ಟೀಸ್ಪೂನ್ ಕರಿಮೆಣಸು (ನಿಮ್ಮ ಖಾರಕ್ಕೆ ತಕ್ಕಂತೆ)
- 1/4 ಕಪ್ ತೆಂಗಿನ ತುರಿ
- ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು ( ನಿಮ್ಮ ರುಚಿಗೆ ತಕ್ಕಂತೆ )
- ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ ( ಬೇಕಾದಲ್ಲಿ - ನಿಮ್ಮ ರುಚಿಗೆ ತಕ್ಕಂತೆ )
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಸಾಸಿವೆ
- 1 ಒಣ ಮೆಣಸಿನ ಕಾಯಿ
- 1 ಟೀಸ್ಪೂನ್ ಅಡುಗೆ ಎಣ್ಣೆ
ಸಬ್ಬಸಿಗೆ ಸೊಪ್ಪು ಸಾರು ಮಾಡುವ ವಿಧಾನ:
- ಒಂದು ಬಾಣಲೆಗೆ ೧/೨ ಚಮಚ ಎಣ್ಣೆ ಹಾಕಿ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿಮೆಣಸು ಹಾಕಿ ಹುರಿಯಿರಿ.
- ನಂತರ ಕತ್ತರಿಸಿದ ಸಬ್ಬಸಿಗೆ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ತೆಂಗಿನ ತುರಿ ಹಾಕಿ, ಮಗುಚಿ ಸ್ಟೋವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಒಂದು ಪಾತ್ರೆಗೆ ವರ್ಗಾಯಿಸಿ. ಹುಣಿಸೆ ರಸ, ಉಪ್ಪು ಮತ್ತು ಬೆಲ್ಲ ಹಾಕಿ. ಒಂದು ಲೀಟರ್ ನಷ್ಟು ನೀರು ಸೇರಿಸಿ, ಕುದಿಸಿ.
- ಎಣ್ಣೆ, ಸಾಸಿವೆ ಮತ್ತು ಒಣ ಮೆಣಸಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಬಡಿಸಿ ಅಥವಾ ಹಾಗೆ ಕುಡಿಯಲು ನೀಡಿ.
Tumba chennagi bantu,thanks a lot
ಪ್ರತ್ಯುತ್ತರಅಳಿಸಿDhanyavadagalu.
ಅಳಿಸಿ