Sukka girmit recipe in Kannada | ಸುಕ್ಕ ಗಿರ್ಮಿಟ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ಮಂಡಕ್ಕಿ
- 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- 3 - 4 ಕರಿಬೇವಿನ ಎಲೆ
- 1 ಕತ್ತರಿಸಿದ ಹಸಿರು ಮೆಣಸಿನಕಾಯಿ ಅಥವಾ 1/2 ಟೀಸ್ಪೂನ್ ಹಸಿರು ಮೆಣಸಿನಕಾಯಿ ಪೇಸ್ಟ್
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- 1/2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 1/2 ಟೀಸ್ಪೂನ್ ಸಕ್ಕರೆ
- 1/2 - 1 ಚಮಚ ನಿಂಬೆ ರಸ
- 2 ಟೇಬಲ್ ಚಮಚ ಪುಟಾಣಿ ಹಿಟ್ಟು ಅಥವಾ ಹುರಿಗಡಲೆ ಪುಡಿ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಸುಕ್ಕ ಗಿರ್ಮಿಟ್ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೇಕಾಯಿ ಅಥವಾ ಶೇಂಗಾವನ್ನು ಹುರಿದುಕೊಳ್ಳಿ.
- ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಎಲೆ ಮತ್ತು ಅರಿಶಿನ ಪುಡಿ ಸೇರಿಸಿ ಒಗ್ಗರಣೆ ಮಾಡಿ.
- ನಂತರ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ.
- ಕೊನೆಯಲ್ಲಿ ಉಪ್ಪು, ಸಕ್ಕರೆ ಮತ್ತು ನಿಂಬೆ ರಸ ಸೇರಿಸಿ. ಸ್ಟವ್ ಆಫ್ ಮಾಡಿ.
- ತಣ್ಣಗಾದ ನಂತರ ಮಂಡಕ್ಕಿ, ಹುರಿಗಡಲೆ ಪುಡಿ (ಪುಟಾಣಿ ಹಿಟ್ಟು) ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ಚೆನ್ನಾಗಿ ಕಲಸಿ ಕೂಡಲೇ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ