Set dosa recipe in Kannada | ಸೆಟ್ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ದೋಸೆ ಅಕ್ಕಿ
- 1/2 ಕಪ್ ಉದ್ದಿನ ಬೇಳೆ (ಮಿಕ್ಸಿ ಉಪಯೋಗಿಸುತ್ತೀರಾದಲ್ಲಿ 1/4 ಕಪ್ ಹೆಚ್ಚುವರಿ ಸೇರಿಸಿ)
- 1 ಕಪ್ ತೆಳು ಅವಲಕ್ಕಿ ಅಥವಾ 1/2 ಕಪ್ ಗಟ್ಟಿ ಅವಲಕ್ಕಿ
- 1 ಟೀಸ್ಪೂನ್ ಮೆಂತ್ಯ
- 0 - 1/4 ಕಪ್ ಮೊಸರು (ಬೇಕಾದಲ್ಲಿ - ಚಳಿಗಾಲದಲ್ಲಿ ಮಾತ್ರ ಸೇರಿಸಿ)
- ಉಪ್ಪು ರುಚಿಗೆ ತಕ್ಕಷ್ಟು.
ಸೆಟ್ ದೋಸೆ ಮಾಡುವ ವಿಧಾನ :
- ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
- ಅವಲಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ.
- ಈಗ ಗ್ರೈಂಡರ್ ನಲ್ಲಿ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ಮಿಕ್ಸಿಯಲ್ಲೂ ರುಬ್ಬ ಬಹುದು. ಆದರೆ ಉದ್ದಿನಬೇಳೆ ೧/೪ ಕಪ್ ಹೆಚ್ಚುವರಿ ಸೇರಿಸಲು ಮರೆಯದಿರಿ.
- ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ. ಮೊಸರು ಸೇರಿಸುತ್ತೀರಾದಲ್ಲಿ ಕೊನೆಯಲ್ಲಿ ಸೇರಿಸಿ ನಾಲ್ಕು ಸುತ್ತು ಅರೆಯಿರಿ. ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
- ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ. ಚಳಿಗಾಲವಾದಲ್ಲಿ 15 - 16 ಘಂಟೆಯವರೆಗೂ ಹಿಟ್ಟು ಹುದುಗಿಸಬೇಕಾಗಬಹುದು.
- ದೋಸೆ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಒಂದು ಸೌಟು ಹಿಟ್ಟನ್ನು ಹಾಕಿ, ಸ್ವಲ್ಪ ತೆಳ್ಳಗೆ ಮಾಡಿ. ಮುಚ್ಚಳ ಮುಚ್ಚಿ.
- ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ.
- ಬೇಕಾದಲ್ಲಿ ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಗುವಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ