Carrot sasive recipe in Kannada | ಕ್ಯಾರೆಟ್ ತಂಬುಳಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ದೊಡ್ಡ ಕ್ಯಾರಟ್
- 1/2 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 1 ಕಪ್ ಮೊಸರು
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 2 ಟೀಸ್ಪೂನ್ ಅಡುಗೆ ಎಣ್ಣೆ
ಕ್ಯಾರೆಟ್ ತಂಬುಳಿ ಮಾಡುವ ವಿಧಾನ:
- ಕ್ಯಾರಟ್ ನ್ನು ತೊಳೆದು ತುರಿಯಿರಿ.
- ತೆಂಗಿನ ತುರಿ , ಸಾಸಿವೆ ಮತ್ತು ಕೆಂಪು ಮೆಣಸಿನ ಕಾಯಿಯನ್ನು ಮಿಕ್ಸಿಯಲ್ಲಿ ನಯವಾಗಿ ಅರೆದುಕೊಳ್ಳಿ
- ಅದಕ್ಕೆ ತುರಿದ ಕ್ಯಾರಟ್ ಹಾಕಿ ಒಂದೆರಡು ಸುತ್ತು ಅರೆದು ತೆಗೆಯಿರಿ.
- ಒಂದು ಬಟ್ಟಲಿಗೆ ಹಾಕಿ ಮೊಸರು ಮತ್ತು ಉಪ್ಪು ಸೇರಿಸಿ.
- ಕೆಂಪು ಮೆಣಸಿನಕಾಯಿ , ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ . ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ