Godhi dose recipe in Kannada | ಗೋಧಿ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಇಡೀ ಗೋಧಿ
- 1/2 ಕಪ್ ತೆಂಗಿನಕಾಯಿ ತುರಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 3 - 4 ಕೆಂಪು ಮೆಣಸಿನಕಾಯಿ
- 1 ಟೀ ಚಮಚ ಹೆಚ್ಚಿದ ಕರಿಬೇವು
- ನಿಮ್ಮ ರುಚಿ ಪ್ರಕಾರ ಉಪ್ಪು
ಗೋಧಿ ದೋಸೆ ಮಾಡುವ ವಿಧಾನ :
- ಗೋಧಿಯನ್ನು ತೊಳೆದು ೫ - ೬ ಘಂಟೆಗಳ ಕಾಲ ನೆನೆಸಿಡಿ.
- ನೆನೆದ ನಂತರ ನೀರು ಬಗ್ಗಿಸಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಅರೆಯಿರಿ.
- ಕೊನೆಯಲ್ಲಿ ಹೆಚ್ಚಿದ ಕರಿಬೇವಿನ ಸೊಪ್ಪು ಹಾಕಿ. ಬೇಕಾದಲ್ಲಿ ಹೆಚ್ಚಿದ ಹಸಿರು ಮೆಣಸಿನ ಕಾಯಿಯನ್ನು ಹಾಕಬಹುದು.
- ದೋಸೆ ಕಾವಲಿಯನ್ನು ಬಿಸಿ ಮಾಡಿ ತೆಳ್ಳನೆ ದೋಸೆ ಮಾಡಿ.
- ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಿ. ಚಟ್ನಿ ಅಥವಾ ಬೆಣ್ಣೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ