Tharakari sagu recipe in Kannada | ತರಕಾರಿ ಸಾಗು ಮಾಡುವ ವಿಧಾನ
ತರಕಾರಿ ಸಾಗು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ದೊಡ್ಡಕ್ಯಾರೆಟ್
- 1 ಆಲೂಗಡ್ಡೆ
- 8-10 ಬೀನ್ಸ್
- 1 ನವಿಲ್ ಕೋಸು / ಸ್ವಲ್ಪ ಕೋಸು
- 1/4 ಕಪ್ ನೆನೆಸಿದ ಬಟಾಣಿ
- 1 ದೊಡ್ಡ ಈರುಳ್ಳಿ
- 1 ಟೊಮ್ಯಾಟೋ
- 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
- 4 ಟೀಸ್ಪೂನ್ ಅಡುಗೆ ಎಣ್ಣೆ
- 1/4 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನ ಬೇಳೆ
- 4 - 5 ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು
ಬೇಕಾಗುವ ಪದಾರ್ಥಗಳು (ಮಸಾಲೆಗೆ):
- 1/2 ಕಪ್ ತೆಂಗಿನತುರಿ
- 1 ಸೆಮೀ ಉದ್ದದ ಶುಂಠಿ
- 3 ಎಸಳು ಬೆಳ್ಳುಳ್ಳಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 2 ಟೇಬಲ್ ಸ್ಪೂನ್ ಹುರಿಗಡಲೆ
- 1 ಟೀಸ್ಪೂನ್ ಗಸಗಸೆ
- 1 - 2 ಹಸಿರುಮೆಣಸಿನಕಾಯಿ
- 1/2 ಬೆರಳುದ್ದ ಚಕ್ಕೆ
- 4 - 5 ಲವಂಗ
- 1 ಏಲಕ್ಕಿ
- 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
ತರಕಾರಿ ಸಾಗು ಮಾಡುವ ವಿಧಾನ:
- ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ನವಿಲ್ ಕೋಸು, ಬಟಾಣಿಯನ್ನು ಕುಕ್ಕರ್ಗೆ ಹಾಕಿ ಬೇಯಿಸಿಕೊಳ್ಳಿ.
- ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
- ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
- ಈಗ ಬೇಯಿಸಿದ ತರಕಾರಿಗಳನ್ನು ಹಾಕಿ. ಆಮೇಲೆ ಅರೆದ ಮಸಾಲೆ ಹಾಕಿ.
- ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ.
- ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ.
Can you include hing as well as little tamarind for mandala grinding with a little pepper
ಪ್ರತ್ಯುತ್ತರಅಳಿಸಿ