Shavige uppittu recipe in Kannada | ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ
ಶಾವಿಗೆ ಉಪ್ಪಿಟ್ಟು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
1.5 ಕಪ್ ಶಾವಿಗೆ
3 ಕಪ್ ನೀರು
1/2 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಉದ್ದಿನಬೇಳೆ
1 ಟೀಸ್ಪೂನ್ ಕಡ್ಲೆಬೇಳೆ
1 ದೊಡ್ಡ ಈರುಳ್ಳಿ
1 ಟೊಮ್ಯಾಟೋ
1-2 ಹಸಿರು ಮೆಣಸಿನಕಾಯಿ
5-6 ಕರಿ ಬೇವಿನ ಎಲೆ
1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
1/4 ಟೀಸ್ಪೂನ್ ಅರಶಿನ ಪುಡಿ
6-8 ಟೀಸ್ಪೂನ್ ಅಡುಗೆ ಎಣ್ಣೆ
1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1/2 ಕಪ್ ತೆಂಗಿನತುರಿ
ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ:
ಶಾವಿಗೆಯನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ.
ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಮಗುಚಿ.
ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ. ಸ್ಟವ್ ಆಫ್ ಮಾಡಿ. 5 ನಿಮಿಷಗಳ ನಂತರ ಬಡಿಸಿ.
ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು. ನಂತರ ಅದನ್ನು ರುಬ್ಬುವಾಗ ಕೊತ್ತಂಬರಿ ಬೀಜ, ಒಣ ಮೆಣಸಿನಕಾಯಿ, ತೆಂಗಿನತುರಿ, ಜೀರಿಗೆ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಬೇಕು. ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
ಕೆಸುವಿನ ಎಲೆಗಳನ್ನು ಸ್ವಚ್ಛ ಮಾಡಿಕೊಳ್ಳಿ. ನಂತರ ಅರೆದ ಹಿಟ್ಟನ್ನು ಕೆಸುವಿನ ಎಲೆಗಳ ಮೇಲೆ ಹಚ್ಚಿ. ಒಂದರ ಮೇಲೊಂದರಂತೆ 4 ಎಲೆಗಳನ್ನಿಡುತ್ತಾ ಹಿಟ್ಟನ್ನು ಹಚ್ಚಿ. ಸುತ್ತಿ ಸೆಕೆಯಲ್ಲಿ ಒಂದು ಘಂಟೆ ಬೇಯಿಸಿ.
ಬೆಂದ ನಂತರ ಬಿಲ್ಲೆಗಳಾಗಿ ಕತ್ತರಿಸಿ. ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ.
ಅಥವಾ ಕೆಸುವಿನ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ. ಹಿಟ್ಟಿನೊಂದಿಗೆ ಕಲಸಿ. ಇಡ್ಲಿ ತಟ್ಟೆಯಲ್ಲಿಟ್ಟು 45 ನಿಮಿಷಗಳ ಕಾಲ ಬೇಯಿಸಿ.
ಬೆಂದ ನಂತರ ಪುಡಿ ಮಾಡಿಕೊಳ್ಳಿ.
ಸಾಸಿವೆ, ಉದ್ದಿನಬೇಳೆ, ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಎಣ್ಣೆಯ ಒಗ್ಗರಣೆ ಮಾಡಿಕೊಳ್ಳಿ.
ಪುಡಿಮಾಡಿದ ಪತ್ರೊಡೆ ಹಾಕಿ ಮಗುಚಿ.
ತೆಂಗಿನ ತುರಿ ಮತ್ತು ಪುಡಿ ಮಾಡಿದ ಬೆಲ್ಲ ಹಾಕಿ, ಚೆನ್ನಾಗಿ ಮಗುಚಿ ಬಡಿಸಿ.
Set dosa recipe in Kannada | ಸೆಟ್ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ದೋಸೆ ಅಕ್ಕಿ
1/2 ಕಪ್ ಉದ್ದಿನ ಬೇಳೆ (ಮಿಕ್ಸಿ ಉಪಯೋಗಿಸುತ್ತೀರಾದಲ್ಲಿ 1/4 ಕಪ್ ಹೆಚ್ಚುವರಿ ಸೇರಿಸಿ)
1 ಕಪ್ ತೆಳು ಅವಲಕ್ಕಿ ಅಥವಾ 1/2 ಕಪ್ ಗಟ್ಟಿ ಅವಲಕ್ಕಿ
1 ಟೀಸ್ಪೂನ್ ಮೆಂತ್ಯ
0 - 1/4 ಕಪ್ ಮೊಸರು (ಬೇಕಾದಲ್ಲಿ - ಚಳಿಗಾಲದಲ್ಲಿ ಮಾತ್ರ ಸೇರಿಸಿ)
ಉಪ್ಪು ರುಚಿಗೆ ತಕ್ಕಷ್ಟು.
ಸೆಟ್ ದೋಸೆ ಮಾಡುವ ವಿಧಾನ :
ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
ಅವಲಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ.
ಈಗ ಗ್ರೈಂಡರ್ ನಲ್ಲಿ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ಮಿಕ್ಸಿಯಲ್ಲೂ ರುಬ್ಬ ಬಹುದು. ಆದರೆ ಉದ್ದಿನಬೇಳೆ ೧/೪ ಕಪ್ ಹೆಚ್ಚುವರಿ ಸೇರಿಸಲು ಮರೆಯದಿರಿ.
ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ. ಮೊಸರು ಸೇರಿಸುತ್ತೀರಾದಲ್ಲಿ ಕೊನೆಯಲ್ಲಿ ಸೇರಿಸಿ ನಾಲ್ಕು ಸುತ್ತು ಅರೆಯಿರಿ. ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.