Curd sandwich recipe in Kannada | ಮೊಸರಿನ ಸ್ಯಾಂಡ್ ವಿಚ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೊಸರು
- 8 - 10 ಬ್ರೆಡ್
- 1 ಸಣ್ಣ ಕ್ಯಾರೆಟ್
- 1 ಈರುಳ್ಳಿ
- ಎಲೆಕೋಸು ಸಣ್ಣ ತುಂಡು
- 4 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/4 - 1/2 ಟೀಸ್ಪೂನ್ ಅಚ್ಚ ಖಾರದ ಪುಡಿ ಅಥವಾ ಕರಿ ಮೆಣಸು ಪುಡಿ
- 1/4 ಟೀಸ್ಪೂನ್ ಚಾಟ್ ಮಸಾಲಾ (ಬೇಕಾದಲ್ಲಿ; ಅಥವಾ ಯಾವುದೇ ಇತರ ಮಸಾಲೆ ಪುಡಿ ಬಳಸಬಹುದು)
- ಉಪ್ಪು ರುಚಿಗೆ ತಕ್ಕಷ್ಟು.
ಮೊಸರಿನ ಸ್ಯಾಂಡ್ ವಿಚ್ ಮಾಡುವ ವಿಧಾನ:
- ಒಂದು ಪಾತ್ರೆಯ ಮೇಲೆ ಜರಡಿ ಇಟ್ಟು, ಅದರ ಮೇಲೆ ಬಟ್ಟೆ ಹಾಕಿ, ಮೊಸರನ್ನು ಬಟ್ಟೆಯ ಮೂಲಕ 30 ನಿಮಿಷಗಳ ಕಾಲ ಶೋಧಿಸಲು ಇಡಿ. ಇದರಿಂದ ನಮಗೆ ಗಟ್ಟಿ ಮೊಸರು ದೊರಕುತ್ತದೆ.
- ಎಲ್ಲ ತರಕಾರಿಗಳನ್ನು ಸಣ್ಣಗೆ ಕತ್ತರಿಸಿ. ಕ್ಯಾರೆಟ್ ನ್ನು ತುರಿಯಿರಿ. ನಿಮ್ಮಿಷ್ಟದ ಯಾವುದೇ ತರಕಾರಿಯನ್ನು ಉಪಯೋಗಿಸಬಹುದು.
- ಕತ್ತರಿಸಿದ ತರಕಾರಿಗೆ ಉಪ್ಪು, ಖಾರ ಮತ್ತು ಮಸಾಲೆ ಪುಡಿ ಹಾಕಿ ಕಲಸಿ. ಬೇಕಾದಲ್ಲಿ ಸಕ್ಕರೆಯನ್ನು ಹಾಕಬಹುದು.
- ಕೊನೆಯಲ್ಲಿ ಶೋಧಿಸಿದ ಗಟ್ಟಿ ಮೊಸರನ್ನು ಹಾಕಿ ಕಲಸಿ, ಪಕ್ಕಕ್ಕಿಡಿ.
- ಬ್ರೆಡ್ ನ್ನು, ಅಂಚು ಕತ್ತರಿಸಿ, ಬೆಣ್ಣೆ ಹಚ್ಚಿ, ಕಾವಲಿ ಅಥವಾ ತವಾದಲ್ಲಿ ಕಾಯಿಸಿ.
- ನಂತರ ಕಲಸಿಟ್ಟ ತರಕಾರಿ ಮತ್ತು ಮೊಸರಿನ ಮಿಶ್ರಣವನ್ನು ಮಧ್ಯದಲ್ಲಿಟ್ಟು ಸ್ಯಾಂಡ್ ವಿಚ್ ತಯಾರಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ