Mavinakayi chitranna recipe in Kannada | ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ
ಮಾವಿನಕಾಯಿ ಚಿತ್ರಾನ್ನ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಕಪ್ ಅಕ್ಕಿ (ಸೋನಾ ಮಸೂರಿ)
- ಒಂದು ಮಧ್ಯಮ ಗಾತ್ರದ ಮಾವಿನಕಾಯಿ
- 1/2 ಕಪ್ ತೆಂಗಿನ ತುರಿ
- 1/2 ಟೀಸ್ಪೂನ್ ಸಾಸಿವೆ
- 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 5 - 6 ಕರಿಬೇವಿನ ಎಲೆ
- 1/4 ಟೀಸ್ಪೂನ್ ಅರಿಶಿನ ಪುಡಿ
- 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಮಸಾಲೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 2 - 4 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಮೆಂತೆ
- 5 - 6 ಕರಿಬೇವಿನ ಎಲೆ
ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ.
- ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು, ತುರಿದಿಟ್ಟುಕೊಳ್ಳಿ. ಮಾವಿನಕಾಯಿ ಹುಳಿ ನೋಡಿ ಬೇಕಾದಷ್ಟೇ ಉಪಯೋಗಿಸಿ.
- ಒಂದು ಬಾಣಲೆಯಲ್ಲಿ "ಮಸಾಲೆಗೆ" ಪಟ್ಟಿ ಮಾಡಿದ ಪದಾರ್ಥಗಳನ್ನು (ಒಣ ಮೆಣಸು, ಸಾಸಿವೆ ಮತ್ತು ಮೆಂತೆ) ಮಧ್ಯಮ ಉರಿಯಲ್ಲಿ ಎಣ್ಣೆ ಹಾಕದೆ ಹುರಿಯಿರಿ.
- ಸಾಸಿವೆ ಸಿಡಿದ ಮೇಲೆ, ಕರಿಬೇವಿನ ಎಲೆ ಹಾಕಿ ಹುರಿದು ಸ್ಟವ್ ಆಫ್ ಮಾಡಿ.
- ಹುರಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ.
- ನಂತರ ಅದಕ್ಕೆ ತುರಿದ ಮಾವಿನಕಾಯಿ ಮತ್ತು ತೆಂಗಿನ ಕಾಯಿ ಹಾಕಿ ಅರೆಯಿರಿ. ಅರೆದ ಮಸಾಲೆಯನ್ನು ಪಕ್ಕಕ್ಕಿಡಿ.
- ಈಗ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
- ಕಡಲೆಕಾಯಿ ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
- ಸಾಸಿವೆ ಸಿಡಿದ ಕೂಡಲೇ ಕರಿಬೇವಿನ ಎಲೆ, ಅರೆದ ಮಸಾಲೆ ಮತ್ತು ಅರಿಶಿನ ಪುಡಿ ಹಾಕಿ ಚೆನ್ನಾಗಿ ಕಲಸಿ. ಸ್ಟೋವ್ ಆಫ್ ಮಾಡಿ.
- ನಂತರ ಬೇಯಿಸಿದ ಅನ್ನ ಮತ್ತು ಉಪ್ಪು ಸೇರಿಸಿ ಕಲಸಿ..
- ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
Very tempting...nice recipe
ಪ್ರತ್ಯುತ್ತರಅಳಿಸಿ