Alasande hudi haki koddel recipe in Kannada | ಅಲಸಂದೆ ಹುಡಿ ಹಾಕಿ ಕೊದ್ದೆಲ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಟ್ಟು ಅಥವಾ 1/2 ಕೆಜಿ ಅಲಸಂದೆ ಕಾಳು
- 1/4 ಚಮಚ ಅರಿಶಿನ ಪುಡಿ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆ ಹುರಿಯಲು ಬೇಕಾಗುವ ಪದಾರ್ಥಗಳು:
- 3 - 4 ಕೆಂಪು ಮೆಣಸಿನಕಾಯಿ
- 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
- 1/2 ಚಮಚ ಜೀರಿಗೆ
- 2 ಚಮಚ ಅಕ್ಕಿ
- ಒಂದು ಚಿಟಿಕೆ ಸಾಸಿವೆ
- ಒಂದು ಚಿಟಿಕೆ ಮೆಂತೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 1 ಕೆಂಪು ಮೆಣಸಿನಕಾಯಿ
- 10 ಎಸಳು ಬೆಳ್ಳುಳ್ಳಿ
- 4 - 5 ಕರಿಬೇವಿನ ಎಲೆ
- 4 ಚಮಚ ಅಡುಗೆ ಎಣ್ಣೆ
ಅಲಸಂದೆ ಹುಡಿ ಹಾಕಿ ಕೊದ್ದೆಲ್ ಮಾಡುವ ವಿಧಾನ:
- ಅಲಸಂದೆಯನ್ನು ಆರಿಸಿ, ತೊಳೆದು, ೧ ಇಂಚು ಉದ್ದಕ್ಕೆ ಕತ್ತರಿಸಿಕೊಳ್ಳಿ.
- ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ.
- ಆ ಸಮಯದಲ್ಲಿ ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಧ್ಯಮ ಉರಿಯಲ್ಲಿ, ಎಣ್ಣೆ ಹಾಕದೆ, ಹುರಿದು ಪುಡಿ ಮಾಡಿಟ್ಟುಕೊಳ್ಳಿ.
- ಅಲಸಂದೆ ಬೆಂದ ಮೇಲೆ ಉಪ್ಪು, ಅರಿಶಿನ ಮತ್ತು ಹುಣಿಸೆರಸ ಹಾಕಿ ಕುದಿಸಿ.
- ಸಿದ್ಧ ಮಾಡಿಟ್ಟ ಮಸಾಲೆ ಪುಡಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಈ ಸಾಂಬಾರ್ ಸ್ವಲ್ಪ ಗಟ್ಟಿಯಾಗಿರಬೇಕು.
- ಒಂದು ಸಣ್ಣ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ತಯಾರಿಸಿ.
- ಕುದಿಸಿದ ಕೊದ್ದೆಲ್ ಅಥವಾ ಸಾಂಬಾರ್ ಗೆ ಸೇರಿಸಿ, ಮಗುಚಿ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ