Alasande kalu gojju recipe in Kannada | ಅಲಸಂದೆ ಕಾಳು ಗೊಜ್ಜು ಮಾಡುವ ವಿಧಾನ
ಅಲಸಂದೆ ಕಾಳು ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಲಸಂದೆ ಕಾಳು
- 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- ಚಿಟಿಕೆ ಅರಿಶಿನ
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 4 - 5 ಬೆಳ್ಳುಳ್ಳಿ ಅಥವಾ 1/2 ಚಮಚ ಜೀರಿಗೆ
- 2 - 4 ಹಸಿರು ಮೆಣಸಿನಕಾಯಿ
- ಒಂದು ಹಿಡಿ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 4 - 5 ಕರಿಬೇವಿನ ಎಲೆ
- 4 ಚಮಚ ಅಡುಗೆ ಎಣ್ಣೆ
ಅಲಸಂದೆ ಕಾಳು ಗೊಜ್ಜು ಮಾಡುವ ವಿಧಾನ:
- ಅಲಸಂದೆ ಕಾಳನ್ನು 2 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಸಮಯದ ಅಭಾವವಿದ್ದಲ್ಲಿ ನೆನಸದೆಯೂ ಮಾಡಬಹುದು. ನೆನೆಸದಿದ್ದಲ್ಲಿ ಬೇಯಿಸಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ.
- ನೆನೆಸಿದ ಕಾಳನ್ನು ಮೆತ್ತಗೆ ಬೇಯಿಸಿಕೊಳ್ಳಿ. ಬೇಯಿಸುವಾಗ ಉಪ್ಪು ಸೇರಿಸಬೇಡಿ.
- ಬೇಯಿಸಿದ ಕಾಳನ್ನು ಸೌಟಿನ ಹಿಂಭಾಗ ಬಳಸಿ ಸ್ವಲ್ಪ ಮಸೆಯಿರಿ ಅಥವಾ ಮ್ಯಾಶ್ ಮಾಡಿಕೊಳ್ಳಿ.
- ಅದೇ ಸಮಯದಲ್ಲಿ ಮಸಾಲೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಅರೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ತಯಾರಿಸಿ.
- ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
- ಅರೆದಿಟ್ಟ ಮಸಾಲೆ ಮತ್ತು ಅರಿಶಿನ ಸೇರಿಸಿ. ಹಸಿವಾಸನೆ ಹೋಗುವವರೆಗೆ ಹುರಿಯಿರಿ.
- ನಂತರ ಬೇಯಿಸಿದ ಕಾಳನ್ನು ಸೇರಿಸಿ. ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
- ಚೆನ್ನಾಗಿ ಕುದಿಸಿ. ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ