Avalakki bisi bele Bath Recipe in Kannada | ಅವಲಕ್ಕಿ ಬಿಸಿ ಬೇಳೆ ಬಾತ್ ಮಾಡುವ ವಿಧಾನ
ಅವಲಕ್ಕಿ ಬಿಸಿ ಬೇಳೆ ಬಾತ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)
- 1/2 ಕಪ್ ಹೆಸರುಬೇಳೆ
- 1 ಕಪ್ ಗಟ್ಟಿ ಅವಲಕ್ಕಿ
- 8 ಬೀನ್ಸ್
- 1 ಸಣ್ಣ ಕ್ಯಾರೆಟ್
- 1 ಸಣ್ಣ ಆಲೂಗಡ್ಡೆ
- 2 ಟೇಬಲ್ ಸ್ಪೂನ್ ಹಸಿ ಅಥವಾ ನೆನೆಸಿದ ಬಟಾಣಿ
- 1 ಟೊಮ್ಯಾಟೋ
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣು
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ಟೇಬಲ್ ಸ್ಪೂನ್ ಬಿಸಿಬೇಳೆ ಬಾತ್ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 2 ಟೇಬಲ್ ಸ್ಪೂನ್ ನೆಲಗಡಲೆ ಅಥವಾ ಶೇಂಗಾ
- 1 ಟೀಸ್ಪೂನ್ ಕಡ್ಲೆ ಬೇಳೆ
- 2 ಟೀಸ್ಪೂನ್ ಉದ್ದಿನ ಬೇಳೆ
- 8-10 ಗೋಡಂಬಿ
- 7 - 8 ಕರಿಬೇವಿನ ಎಲೆ
- 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1/2 ಕ್ಯಾಪ್ಸಿಕಂ ಹೆಚ್ಚಿದ್ದು (ಬೇಕಾದಲ್ಲಿ)
- 1 ಟೊಮೇಟೊ ಸಣ್ಣಗೆ ಹೆಚ್ಚಿದ್ದು
- 1/4 ಟೀಸ್ಪೂನ್
- 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ
ಅವಲಕ್ಕಿ ಬಿಸಿ ಬೇಳೆ ಬಾತ್ ಮಾಡುವ ವಿಧಾನ:
- ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆಯನ್ನು ಕತ್ತರಿಸಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಹೆಸರುಬೇಳೆಯನ್ನು ತೊಳೆಯಿರಿ.
- ಕತ್ತರಿಸಿದ ತರಕಾರಿ, ಬಟಾಣಿ ಮತ್ತು ಹೆಸರುಬೇಳೆಯನ್ನು ಕುಕ್ಕರ್‌ನಲ್ಲಿ ಹಾಕಿ. 1 ಕಪ್ ನೀರು ಸೇರಿಸಿ. 2 ವಿಷಲ್ ಮಾಡಿ ಬೇಯಿಸಿ.
- ಒಂದು ಬಾಣಲೆ ತೆಗೆದುಕೊಂಡು ಎಣ್ಣೆ, ಶೇಂಗಾ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ.
- ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. ಕಾಪ್ಸಿಕಮ್ ಹಾಕುವುದಾದಲ್ಲಿ ಈಗ ಹಾಕಿ.
- ನಂತರ ಕತ್ತರಿಸಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಸ್ಟೋವ್ ಆಫ್ ಮಾಡಿ.
- ಕೂಡಲೇ ಬಿಸಿಬೇಳೆ ಬಾತ್ ಪುಡಿ, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
- ತೊಳೆದ ಗಟ್ಟಿ ಅವಲಕ್ಕಿ ಮತ್ತು ಒಂದು ಕಪ್ ನೀರು ಹಾಕಿ ಕುದಿಸಿ.
- ನಂತರ ಬೇಯಿಸಿದ ತರಕಾರಿ ಮತ್ತು ಬೇಳೆಯನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ