Veg kurma recipe in Kannada | ತರಕಾರಿ ಕೂರ್ಮ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಸಣ್ಣ ಕ್ಯಾರೆಟ್
- 1 ಆಲೂಗಡ್ಡೆ
- 8-10 ಬೀನ್ಸ್
- 1 ನವಿಲ್ ಕೋಸು ಅಥವಾ ಸ್ವಲ್ಪ ಕೋಸು
- 1/4 ಕಪ್ ನೆನೆಸಿದ ಬಟಾಣಿ
- 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
- 2 ಟೀಸ್ಪೂನ್ ಧನಿಯಾ ಪುಡಿ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಪುಲಾವ್ ಎಲೆ ಅಥವಾ ದಾಲ್ಚಿನ್ನಿ ಎಲೆ
- 4 - 5 ಕರಿಬೇವಿನ ಎಲೆ
- 1 ದೊಡ್ಡ ಈರುಳ್ಳಿ
- 1 ಟೊಮ್ಯಾಟೋ
ಮಸಾಲೆಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್):
- 1/4 ಕಪ್ ತೆಂಗಿನತುರಿ
- 1 ಸೆಮೀ ಉದ್ದದ ಶುಂಠಿ
- 3 ಎಸಳು ಬೆಳ್ಳುಳ್ಳಿ
- 1/2 ಟೀಸ್ಪೂನ್ ಸೋಂಪು ಅಥವಾ ಬಡೆಸೊಂಪು
- 2 ಟೀಸ್ಪೂನ್ ಸ್ಪೂನ್ ಹುರಿಗಡಲೆ
- 1 ಟೀಸ್ಪೂನ್ ಗಸಗಸೆ
- 3 - 4 ಗೋಡಂಬಿ
- 1/2 ಬೆರಳುದ್ದ ಚಕ್ಕೆ
- 4 - 5 ಲವಂಗ
- 1 ಏಲಕ್ಕಿ
- 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಸ್ಪೂನ್ ಕತ್ತರಿಸಿದ ಪುದಿನ ಸೊಪ್ಪು
ತರಕಾರಿ ಕೂರ್ಮ ಮಾಡುವ ವಿಧಾನ:
- ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ನವಿಲ್ ಕೋಸು, ಬಟಾಣಿಯನ್ನು ಕುಕ್ಕರ್ಗೆ ಹಾಕಿ ಬೇಯಿಸಿಕೊಳ್ಳಿ.
- ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಪುಲಾವ್ ಎಲೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
- ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
- ಆಮೇಲೆ ಅರೆದ ಮಸಾಲೆ ಹಾಕಿ ಮಗುಚಿ.
- ನಂತರ ಅರಶಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಅಚ್ಚ ಖಾರದ ಪುಡಿ ಸೇರಿಸಿ ಮಗುಚಿ.
- ಈಗ ಬೇಯಿಸಿದ ತರಕಾರಿಗಳನ್ನು ಹಾಕಿ.
- ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ.
- ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ