Beetroot sasmi or sasuve recipe in Kannada | ಬೀಟ್ರೂಟ್ ಸಾಸ್ಮಿ ಅಥವಾ ಸಾಸುವೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- 2 ಮಧ್ಯಮ ಗಾತ್ರದ ಬೀಟ್ರೂಟ್
- 1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
- 1 ಚಿಟಿಕೆ ಅರಿಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 1 ಕಪ್ ತೆಂಗಿನತುರಿ
- 1/2 ಟೀಸ್ಪೂನ್ ಸಾಸಿವೆ
- 2 - 4 ಒಣ ಮೆಣಸಿನಕಾಯಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 2 ಟೀಸ್ಪೂನ್ ಅಡುಗೆ ಎಣ್ಣೆ
- 1 ಒಣ ಮೆಣಸಿನ ಕಾಯಿ
- 1/2 ಟೀಸ್ಪೂನ್ ಸಾಸಿವೆ
- 4 - 5 ಕರಿಬೇವಿನ ಎಲೆ
ಬೀಟ್ರೂಟ್ ಸಾಸ್ಮಿ ಅಥವಾ ಸಾಸುವೆ ಮಾಡುವ ವಿಧಾನ:
- ಬೀಟ್‌ರೂಟನ್ನು ಸಿಪ್ಪೆ ತೆಗೆದು, ತೊಳೆದು, ತುರಿಯಿರಿ.
- ತುರಿದ ಬೀಟ್‌ರೂಟ್ ಗೆ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಬೇಯಿಸಿ. ಬೇಯಿಸುವಾಗ ಹೆಚ್ಚು ನೀರು ಸೇರಿಸಬೇಡಿ.
- ಮಸಾಲೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು (ತೆಂಗಿನ ತುರಿ, ಸಾಸಿವೆ, ಒಣ ಮೆಣಸು) ಮಿಕ್ಸಿಯಲ್ಲಿ ನುಣ್ಣನೆ ಅರೆಯಿರಿ.
- ಅದನ್ನು ಬೇಯಿಸಿದ ಬೀಟ್ರೂಟ್ ಗೆ ಸೇರಿಸಿ, ಒಂದು ಕುದಿ ಬರಿಸಿ. ತುಂಬ ಹೊತ್ತು ಕುದಿಸಬೇಡಿ.
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಹಾಕಿ.
- ಎಣ್ಣೆ, ಒಣ ಮೆಣಸು, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ