Lemon pickle recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್):
- 10 - 12 ನಿಂಬೆಹಣ್ಣು
- 5 ಟಿಸ್ಪೂನ್ ಕೆಂಪು ಮೆಣಸಿನಪುಡಿ (ನಿಮ್ಮ ರುಚಿಗೆ ತಕ್ಕಂತೆ)
- 10 ಟಿಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 3/4 ಕಪ್ ನೀರು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 4 ಟಿಸ್ಪೂನ್ ಎಳ್ಳೆಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆ
- 1/2 ಟಿಸ್ಪೂನ್ ಸಾಸಿವೆ
- 1/2 ಟಿಸ್ಪೂನ್ ಮೆಂತೆ
- 8 ಕರಿಬೇವಿನ ಎಲೆ
- 2 ಟಿಸ್ಪೂನ್ ಹೆಚ್ಚಿದ ಹಸಿಮೆಣಸು
- 2 ಟಿಸ್ಪೂನ್ ಹೆಚ್ಚಿದ ಹಸಿಶುಂಠಿ
- 1/4 ಟಿಸ್ಪೂನ್ ಇಂಗು
- 1/4 ಟಿಸ್ಪೂನ್ಅರಿಶಿನ ಪುಡಿ
ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ:
- ನಿಂಬೆಹಣ್ಣನ್ನು ತೊಳೆದು, ನೀರಾರಿಸಿ, ಹೆಚ್ಚಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ನೀರು ಮತ್ತು ಉಪ್ಪನ್ನು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭವಾದಾಗ ಕತ್ತರಿಸಿದ ನಿಂಬೆಹಣ್ಣನ್ನು ಹಾಕಿ, ಸ್ಟವ್ ಆಫ್ ಮಾಡಿ.
- ಬಿಸಿ ಆರುವವರೆಗೆ ಮುಚ್ಚಳ ಮುಚ್ಚಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಮೆಂತೆಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಶುಂಠಿ, ಹಸಿಮೆಣಸು ಮತ್ತು ಕರಿಬೇವು ಹಾಕಿ. ಹುರಿಯಿರಿ.
- ಇಂಗು ಮತ್ತು ಅರಿಶಿನ ಪುಡಿ ಸೇರಿಸಿ ಸ್ಟವ್ ಆಫ್ ಮಾಡಿ.
- ಕೆಂಪು ಮೆಣಸಿನಪುಡಿ ಹಾಕಿ ಮಗುಚಿ.
- ಉಪ್ಪು ನೀರಿನಲ್ಲಿ ಹಾಕಿದ ನಿಂಬೆಹಣ್ಣನ್ನು ಉಪ್ಪು ನೀರಿನೊಂದಿಗೆ ಹಾಕಿ, ಮಗುಚಿ.
- ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 5 - 6 ತಿಂಗಳುಗಳ ಕಾಲ ಕೆಡುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ