ಬುಧವಾರ, ಮಾರ್ಚ್ 29, 2017

Masale avalakki recipe in Kannada | ಮಸಾಲೆ ಅವಲಕ್ಕಿ ಮಾಡುವ ವಿಧಾನ

Masale avalakki recipe in Kannada

Masale avalakki recipe in Kannada | ಮಸಾಲೆ ಅವಲಕ್ಕಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ತೆಳು ಅವಲಕ್ಕಿ
  2. 1/2 ಕಪ್ ತೆಂಗಿನ ತುರಿ 
  3. 2 ಟೀಸ್ಪೂನ್ ಸಕ್ಕರೆ 
  4. ಉಪ್ಪು ರುಚಿಗೆ ತಕ್ಕಷ್ಟು 
  5. 1 ಟೀಸ್ಪೂನ್ ರಸಂ ಪೌಡರ್
  6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ 
  2. 1 - 2 ಒಣ ಮೆಣಸಿನಕಾಯಿ 
  3. 4 - 5 ಕರಿಬೇವಿನ ಎಲೆ 
  4. ಒಂದು ಚಿಟಿಕೆ ಇಂಗು
  5. 2 ಟೀಸ್ಪೂನ್ ಅಡುಗೆ ಎಣ್ಣೆ 

ಮಸಾಲೆ ಅವಲಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸು, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಪಕ್ಕಕ್ಕಿಡಿ. 
  2. ಇನ್ನೊಂದು ಪಾತ್ರೆಯಲ್ಲಿ ತೆಂಗಿನ ತುರಿ, ಸಕ್ಕರೆ, ರಸಂ ಪೌಡರ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಹಿಸುಕಿ ಕಲಸಿ. 
  3. ನಂತರ ಅದಕ್ಕೆ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಹಿಸುಕಿ ಕಲಸಿ. 
  4. ಆಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಒಗ್ಗರಣೆ ಸೇರಿಸಿ ಕಲಸಿ. 
  5. ಮೊಸರಿನೊಂದಿಗೆ ಅಥವಾ ಹಾಗೇ ಸವಿದು ಆನಂದಿಸಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...