Menthe kadubu recipe in Kannada | ಮೆಂತೆ ಕಡುಬು ಮಾಡುವ ವಿಧಾನ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಗೋಧಿ ಹಿಟ್ಟು
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಅಜ್ವಾಯ್ನ್ ಅಥವಾ ಓಂಕಾಳು
- ದೊಡ್ಡ ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 1/2 ಕಪ್ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು
- 1/4 ಟೀಸ್ಪೂನ್ ಅಚ್ಚ ಖಾರದ ಪುಡಿ (ಬೇಕಾದಲ್ಲಿ)
- 1/4 ಟೀಸ್ಪೂನ್ ಅರಿಶಿನ ಪುಡಿ
- 5 - 6 ಟೀಸ್ಪೂನ್ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಮೆಂತೆ ಕಡುಬು ಮಾಡುವ ವಿಧಾನ:
- ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಸಣ್ಣದಾಗಿ ಹೆಚ್ಚಿಕೊಳ್ಳಿ.
- ಒಂದು ಪಾತ್ರೆಯಲ್ಲಿ ಹಿಟ್ಟಿಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ಗೋಧಿ ಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ ಇಂಗು ಮತ್ತು ಓಂಕಾಳು). ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೆತ್ತಗಿನ ಹಿಟ್ಟು ಕಲಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿರಲಿ.
- ನಂತರ ಸಣ್ಣ ನೆಲ್ಲಿಕಾಯಿ ಗಾತ್ರದ ಬಿಲ್ಲೆಗಳನ್ನು (ಚಪ್ಪಟೆಯಾದ ಉಂಡೆ) ಮಾಡಿ.
- ಕುದಿಯುವ ನೀರಿನಲ್ಲಿ ಹಾಕಿ 20 ನಿಮಿಷಗಳ ಕಾಲ ಬೇಯಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
- ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ.
- ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು ಹಾಕಿ ಬಾಡಿಸಿ. ಖಾರದ ಪುಡಿ (ಬೇಕಾದಲ್ಲಿ), ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಗುಚಿ.
- ಬೇಯಿಸಿದ ಬಿಲ್ಲೆಗಳನ್ನು ಅರ್ಧ ಕಪ್ ನೀರಿನೊಂದಿಗೆ ಹಾಕಿ, ಕುದಿಸಿ.
- ನೀರಾರಿದ ಮೇಲೆ ಸ್ಟವ್ ಆಫ್ ಮಾಡಿ, ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ