Ragi manni pudi recipe in Kannada | ರಾಗಿ ಮಣ್ಣಿ ಪುಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ
- 1/2 ಕಪ್ ಗೋಧಿ
- 1/2 ಕಪ್ ರಾಗಿ
- 1/2 ಕಪ್ ಹೆಸರುಕಾಳು
- 1/2 ಕಪ್ ಬಾರ್ಲಿ
ರಾಗಿ ಮಣ್ಣಿ ಪುಡಿ ಮಾಡುವ ವಿಧಾನ:
- ಎಲ್ಲ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಂಡು ಆರಿಸಿ.
- ಒಂದೊಂದೇ ಪದಾರ್ಥವನ್ನು ಒಳ್ಳೆಯ ನೀರಿನಲ್ಲಿ ೨ - ೩ ಬಾರಿ ತೊಳೆಯಿರಿ. ನೀರನ್ನು ಸಂಪೂರ್ಣವಾಗಿ ಬಗ್ಗಿಸಿ.
- ನಂತರ ಶುದ್ಧವಾದ ಬಟ್ಟೆ ಮೇಲೆ ಅಥವಾ ಅಗಲವಾದ ತಟ್ಟೆಯ ಮೇಲೆ ಹರಡಿ ನೀರಾರಲು ಬಿಡಿ.
- ನೀರಾರಿದ ಮೇಲೆ ಒಂದೊಂದಾಗಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಗಮನಿಸಿ, ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದರೆ ಸಾಕು. ಅಕ್ಕಿ, ಬಾರ್ಲಿ ಬಿಳಿ ಆದರೆ ಸಾಕು. ಉಳಿದದ್ದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಸಾಕು.
- ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ.
- ಸಾರಣಿಸಿ ಅಥವಾ ಜರಡಿ ಹಿಡಿದು ಮಣ್ಣಿ ಪುಡಿಯನ್ನು ಸಿದ್ಧ ಮಾಡಿಕೊಳ್ಳಿ. ಗಮನಿಸಿ, ಉಪಯೋಗಿಸುವ ಎಲ್ಲ ಪಾತ್ರೆಗಳು ಸ್ವಚ್ಛವಾಗಿರಬೇಕು ಮತ್ತು ನೀರಿನ ಪಸೆ ಇರಬಾರದು.
- ಒಂದು ಚಮಚ ಪುಡಿ ಮತ್ತು ಒಂದು ಚಮಚ ಬೆಲ್ಲವನ್ನು ಹಾಲಿನಲ್ಲಿ ಕರಗಿಸಿ, ಓಲೆ ಮೇಲಿಟ್ಟು ನಿರಂತರವಾಗಿ ಮಗುಚುತ್ತಾ ಕುದಿಸಿ. ಇದನ್ನು ನಾಲ್ಕನೇ ತಿಂಗಳಿನಿಂದ ಕೊಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ